ಬದಿಯಡ್ಕ: `ಸ್ಟಡೀಸ್ ಓನ್ ದ ಪ್ರಿಪರೇಶನ್, ಕ್ಯಾರೆಕ್ಟರೈಸೇಶನ್-ಎಡ್ಸೋಪ್ಶನ್ ಬಿಹೇವಿಯರ್ ಓಫ್ ಏಕ್ಟಿವೇಟೆಡ್ ಚಾರ್ಕೋಲ್ ಒರಿಜಿನೇಟೆಡ್ ಫ್ರಮ್ ಎಗ್ರಿಕಲ್ಚರಲ್ ವೇಸ್ಟ್ ಪೆÇ್ರಡೆಕ್ಟ್ಸ್' ಎಂಬ ವಿಷಯದಲ್ಲಿ ನಡೆಸಿದ ಸಂಶೋಧನಾ ಕಾರ್ಯಕ್ಕೆ ಕಾಕುಂಜೆ ಹೇಮಶ್ರೀ ಅವರಿಗೆ ಡಾಕ್ಟರೇಟ್ ಲಭಿಸಿದೆ.
ಮಂಗಳೂರು ವಿಶ್ವವಿದ್ಯಾನಿಲಯದ 38ನೇ ಘಟಿಕೋತ್ಸವದಲ್ಲಿ ಪಿಎಚ್‍ಡಿ ಪದವಿ ನೀಡಿ ಗೌರವಿಸಲಾಯಿತು. ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಜೆ.ಈಶ್ವರ ಭಟ್ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿದ್ದರು. ಪ್ರಸ್ತುತ ಕೋಣಾಜೆ ಮಂಗಳಗಂಗೋತ್ರಿಯಲ್ಲಿ ಅತಿಥಿ ಉಪನ್ಯಾಸಕಿಯಾಗಿ ವೃತ್ತಿಯಲ್ಲಿದ್ದಾರೆ. ನಿವೃತ್ತ ಅಧ್ಯಾಪಕ ಕಾಕುಂಜೆ ಸುಬ್ರಹ್ಮಣ್ಯ ಭಟ್-ಗೌರಿ ದಂಪತಿಗಳ ಪುತ್ರಿಯಾದ ಇವರು ಸುರತ್ಕಲ್ ಗೋವಿಂದದಾಸ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಕಾರ್ತಿಕ ಜೆ.ಎಸ್. ಅವರ ಪತ್ನಿಯಾಗಿದ್ದಾರೆ. ಸಂಗೀತದಲ್ಲಿಯೂ ಹೆಚ್ಚಿನ ಸಾಧನೆಯನ್ನು ಕೈಗೊಳ್ಳುತ್ತಿರುವ ಅವರು ವಿದ್ವತ್ ಪೂರ್ವ ಪರೀಕ್ಷೆಯಲ್ಲಿ ಉನ್ನತ ಅಂಕದಲ್ಲಿ ತೇರ್ಗಡೆಯಾಗಿದ್ದರು.