ಬದಿಯಡ್ಕ: ಜನಪರವಾದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಬದಿಯಡ್ಕ ಗ್ರಾಮಪಂಚಾಯಿತಿ ಆಡಳಿತ ಸಮಿತಿಯು ತನ್ನ ಅವಧಿಯಲ್ಲಿ ಉತ್ತಮ ನಿರ್ವಹಣೆಯನ್ನು ತೋರಿದೆ ಎಂದು ಕಾಸರಗೋಡು ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಮುಹಮ್ಮದ್ ಕುಂಞÂ ಚಾಯಿಂದಡಿ ಹೇಳಿದರು.
ಬದಿಯಡ್ಕ ಕುಟುಂಬಶ್ರೀ ಹಾಲ್‍ನಲ್ಲಿ ಜರಗಿದ ಬದಿಯಡ್ಕ ಗ್ರಾಮಪಂಚಾಯಿತಿಯ ಜನಪರ ಯೋಜನೆ 2020-21ನೇ ವಾರ್ಷಿಕ ಯೋಜನೆಯ ಅಭಿವೃದ್ದಿ ವಿಚಾರ ಸಂಕಿರಣವನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.
ಬ್ಲಾಕ್ ಪಂಚಾಯಿತಿ ವತಿಯಿಂದ ಭೂಗರ್ಭ ಜಲ ವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಲಾಗಿದೆ ಎಂದರು. ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಕರಡು ಯೋಜನೆಯಲ್ಲಿ ಅಗತ್ಯವುಳ್ಳ ತಿದ್ದುಪಡಿಯನ್ನು ನಡೆಸಿ ಮುಂದಿನ ಹಂತಕ್ಕೆ ಕೊಂಡೊಯ್ಯಲು ಎಲ್ಲರ ಸಹಕಾರ ಅಗತ್ಯ ಎಂದರು. ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ಸೈಬುನ್ನೀಸ, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಅನ್ವರ್, ಶ್ಯಾಮಪ್ರಸಾದ ಮಾನ್ಯ, ಶಬಾನಾ, ಕಾರ್ಯದರ್ಶಿ ಪ್ರದೀಪ್, ಮಾಜಿ ಗ್ರಾಪಂ ಅಧ್ಯಕ್ಷ ಮಾಹಿನ್ ಕೇಳೋಟ್, ಸದಸ್ಯರುಗಳಾದ ಡಿ.ಶಂಕರ, ಬಾಲಕೃಷ್ಣ ಶೆಟ್ಟಿ, ಲಕ್ಷ್ಮೀನಾರಾಯಣ ಪೈ, ಅನಿತಾ ಕ್ರಾಸ್ತಾ, ಪ್ರಸನ್ನ, ಜಯಶ್ರೀ, ಪುಷ್ಪ, ಪ್ರೇಮ, ಜಯಂತಿ, ಮುನೀರ್, ಮುಹಮ್ಮದ್ ನಿಸಾರ್ ಹಾಗೂ ವಿವಿಧ ಇಲಾಖೆಯ ಅಧಿಕೃತರು, ನಿರ್ವಹಣಾ ಉದ್ಯೋಗಸ್ಥರು ಪಾಲ್ಗೊಂಡಿದ್ದರು.