ಮಂಜೇಶ್ವರ: ಕಳಿಯೂರು ಸಂತ ಜೋಸೆಫರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಶಾಲಾ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ವರ್ಕಾಡಿ ಗ್ರಾಮ ಪಂಚಾಯತಿಯ ಸದಸ್ಯ ಗೋಪಾಲಕೃಷ್ಣ ಪಜ್ವ ವಿಜ್ಞಾನದ ಪ್ರಯೋಗದ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಕ್ಕಳಿಗೆ ಶುಭ ಹಾರೈಸಿದರು. ವಿಜ್ಞಾನ ದಿನದ ಮಹತ್ವ ಮತ್ತು ಸಿ.ವಿ.ರಾಮನ್ ಅವರ ಕುರಿತು ಮಕ್ಕಳಿಗೆ ಮಾಹಿತಿ ನೀಡಲಾಯಿತು. ವೇದಿಕೆಯಲ್ಲಿ ಶಾಲಾ ಸಂಚಾಲಕ ರೆ.ಫಾ.ಫ್ರಾನ್ಸಿಸ್ ರೋಡ್ರಿಗಸ್, ಮೀಂಜ ಪಂಚಾಯತಿ ಉಪಾಧ್ಯಕ್ಷೆ ಫಾತಿಮ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸುಧಾಕರ್, ಮಾತೃಸಂಘದ ಅಧ್ಯಕ್ಷೆ ಗ್ರೆಟ್ಟಾ, ಎಸ್‍ಎಸ್‍ಜಿ ಕನ್ವೀನರ್ ಸಿಲ್ವನ್ ಡಿ`ಸೋಜ, ಹಳೆ ವಿದ್ಯಾರ್ಥಿ ಸಂಘದ ಕೋಶಾಧಿಕಾರಿ ಶ್ರೀಪತಿ ರಾವ್ ಮತ್ತು ಶಾಲಾ ಮುಖ್ಯೋಪಾಧ್ಯಾಯಿನಿ ಪುಷ್ಪಾವತಿ ಮೊದಲಾದವರು ಉಪಸ್ಥಿತರಿದ್ದರು. ನಂತರ ವಿದ್ಯಾರ್ಥಿಗಳು ತಮ್ಮ ತಮ್ಮ ತರಗತಿಯಲ್ಲಿ ವಿಜ್ಞಾನದ ವಿವಿಧ ಪ್ರಯೋಗವನ್ನು ಮಾಡಿ ಪ್ರದರ್ಶಿಸಿದರು. ಶಾಲಾ ವಿದ್ಯಾರ್ಥಿಗಳು ಹೆತ್ತವರು ಮಕ್ಕಳ ಪ್ರಯೋಗವನ್ನು ವೀಕ್ಷಿಸಿ ಆನಂದಪಟ್ಟರು.