ಕಾಸರಗೋಡು: 2019-20 ನೇ ಸಾಲಿನ `ಕಾಯಕಲ್ಪ' ಪುರಸ್ಕಾರಗಳನ್ನು ಪ್ರಕಟಿಸಿದಾಗ ಜಿಲ್ಲೆಗೆ ಅಭಿಮಾನದ ನಿಮಿಷಗಳು. ಸಿ.ಎಚ್.ಸಿ. ವಿಭಾಗದಲ್ಲಿ ಪೆರಿಯ ಸಿ.ಎಚ್.ಸಿ. 89.2 ಶೇ. ಅಂಕ ಪಡೆದು ತೃತೀಯ ಸ್ಥಾನವನ್ನು ಪಡೆದುಕೊಂಡಿದೆ. ಜಿಲ್ಲಾ ಮಟ್ಟದಲ್ಲಿ ಕರಿಂದಳಂ ಎಫ್.ಎಚ್.ಸಿ. 97 ಶೇ. ಅಂಕ ಪಡೆದು ಪ್ರಥಮ ಸ್ಥಾನ ಪಡೆಯಿತು.
ಪೆರಿಯ ಸಿ.ಎಚ್.ಸಿ. ಗೆ ಒಂದು ಲಕ್ಷ ರೂ., ಕರಿಂದಳಂ ಎಫ್.ಎಚ್.ಸಿ.ಗೆ ಎರಡು ಲಕ್ಷ ರೂ. ಪುರಸ್ಕಾರವಾಗಿ ಲಭಿಸಲಿದೆ. ಸರಕಾರಿ ಆಸ್ಪತ್ರೆಗಳ ಶುಚಿತ್ವ ಪಾಲನೆ, ಅನುಬಂಧ ನಿಯಂತ್ರಣ ಮೊದಲಾದವುಗಳನ್ನು ತಜ್ಞರ ತಂಡ ಪರಿಶೀಲಿಸಿ ಪುರಸ್ಕಾರಗಳನ್ನು ಘೋಷಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗಾಗಿ ಸ್ಪರ್„ಸಿದ ಮುಳ್ಳೇರಿಯ ಎಫ್.ಎಚ್.ಸಿ. ಗೆ ದ್ವಿತೀಯ ಸ್ಥಾನ ಲಭಿಸಿದೆ. ಉದುಮ ಎಫ್.ಎಚ್.ಸಿ. ಗೆ ತೃತೀಯ ಸ್ಥಾನ ಲಭಿಸಿತು.
ಜಿಲ್ಲಾ ಮಟ್ಟದಲ್ಲಿ ನೇತೃತ್ವ ನೀಡುವ ಆರೋಗ್ಯ ಇಲಾಖೆ ಮತ್ತು ಆರೋಗ್ಯ ಕೇರಳ ಯೋಜನೆಯ ನೌಕರರು, ಪಂಚಾಯತ್ ಪ್ರತಿನಿ„ಗಳು, ಮೆಡಿಕಲ್ ಆಫೀಸರ್‍ಗಳು, ನೌಕರರ ಒಗ್ಗಟ್ಟಿನ ಪರಿಶ್ರಮದಿಂದ ಜಿಲ್ಲೆಗೆ ಈ ಪುರಸ್ಕಾರಗಳು ಬಂದಿವೆ.
ಪೆರಿಯ ಸಿ.ಎಚ್.ಸಿ. ವಿಶೇಷ :
ಆಸ್ಪತ್ರೆಗೆ ಬರುವಾಗಲೇ ಉತ್ತಮ ಸುತ್ತುಗೋಡೆ ಕಂಡು ಬರುತ್ತದೆ, ಸುತ್ತುಗೋಡೆಗಳಲ್ಲಿ ರಚಿಸಿದ ಚಿತ್ರಗಳು, ಆಸ್ಪತ್ರೆಗೆ ಬರುವ ರೋಗಿಗಳಿಗೂ, ಅವರೊಂದಿಗೆ ಬರುವವರಿಗೆ ಕುಡಿಯಲು ಶುದ್ಧ ನೀರು ವ್ಯವಸ್ಥೆ, ಮಕ್ಕಳಿಗೆ ಪಾರ್ಕ್, ಹೂತೋಟ, ಟೈಲ್ಸ್ ಅಳವಡಿಸಿದ ಅತ್ಯಾಧುನಿಕ ಶೌಚಾಲಯ ಕೊಠಡಿಗಳು, ಮಕ್ಕಳಿಗೆ ಸ್ತನ್ಯಪಾನ ನೀಡಲು ಪ್ರತ್ಯೇಕ ಕೊಠಡಿ, ಅತ್ಯಾಧುನಿಕ ರೀತಿಯ ಪೀಠೋಪಕರಣಗಳ ವ್ಯವಸ್ಥೆ, ಟೋಕನ್ ವ್ಯವಸ್ಥೆ, ಲೈಬ್ರೆರಿ, ಟಿ.ವಿ. ವ್ಯವಸ್ಥೆ, ಎಕ್ಸ್‍ರೇ, ಇ.ಸಿ.ಜಿ, ದಂತ ಕ್ಲಿನಿಕ್ ಹೀಗೆ ವಿವಿಧ ಸೌಲಭ್ಯಗಳನ್ನು ಇಲ್ಲಿ ವ್ಯವಸ್ಥೆಗೊಳಿಸಲಾಗಿದೆ.
ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಆಸ್ಪತ್ರೆಯನ್ನು ನವೀಕರಿಸಲಾಗಿದೆ. ಈ ಆಸ್ಪತ್ರೆಗೆ ಹೊರ ರೋಗಿಗಳಾಗಿ ದಿನಾ 600 ಕ್ಕೂ ಅ„ಕ ಮಂದಿ ತಲುಪುತ್ತಿದ್ದಾರೆ. 108 ನಂಬ್ರದ ಆ್ಯಂಬುಲೆನ್ಸ್ ಸೌಕರ್ಯವೂ ಇದೆ. ಎಂಡೋಸಲಾನ್ ಸಂತ್ರಸ್ತರಿಗಾಗಿ ಫಿಸಿಯೋ ಥೆರಫಿ ಕೇಂದ್ರವೂ ಇಲ್ಲಿ ಕಾರ್ಯಾಚರಿಸುತ್ತಿದೆ.