ಕಾಸರಗೋಡು: ಕೇರಳ ಅಡ್ವಟೈಸಿಂಗ್ ಏಜೆನ್ಸಿಸ್ ಅಸೋಸಿಯೇಶನ್‍ನ ಕಣ್ಣೂರು-ಕಾಸರಗೋಡು ವಲಯ ಪದಾಧಿಕಾರಿಗಳನ್ನು ಆರಿಸಲಾಯಿತು.
ಅಧ್ಯಕ್ಷರಾಗಿ ವಿ.ವಿ.ರಾಜೇಶ್(ಕೃಷ್ಣ ಕಮ್ಯೂನಿಕೇಶನ್ಸ್), ಕಾರ್ಯದರ್ಶಿಯಾಗಿ ಬಿನೋಯ್ ಜೋಸೆಫ್(ಟೈಂ ಕಮ್ಯೂನಿಕೇಶನ್ಸ್), ಕೋಶಾ„ಕಾರಿಯಾಗಿ ಪಿ.ವಿ.ಸಂತೋಷ್(ಕೋರ್ ಅಡ್ವಟೈಸಿಂಗ್) ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಶ್ರೀಹರಿ ನಾಯರ್(ಅನುಗ್ರಹ ಅಡ್ವಟೈಸಿಂಗ್), ಜೊತೆ ಕಾರ್ಯದರ್ಶಿಯಾಗಿ ನ್ಯಾಯವಾದಿ ಧನೇಶ್ ನಂಬ್ಯಾರ್(ಪೇಪರ್‍ವೈನ್ ಕಮ್ಯೂನಿಕೇಶನ್ಸ್) ಆಯ್ಕೆಯಾಗಿದ್ದಾರೆ. ರಾಜ್ಯ ಸಮಿತಿ ಪದಾ„ಕಾರಿಗಳಾಗಿ ರಾಜೀವನ್ ಎಳಯಾವೂರ್, ಪಿ.ವಿ.ವಿಜಯ ಕುಮಾರ್, ವಲಯ ಎಕ್ಸಿಕ್ಯೂಟೀವ್ ಸಮಿತಿ ಸದಸ್ಯರಾಗಿ ಪಿ.ಕೆ.ಶ್ಯಾಮಲಾ, ಸಜ್ಜದ್ ಸಹೀರ್, ಬೆನ್ನಿಚ್ಚನ್ ಮ್ಯಾನ್ವಲ್, ಜಿಶಿನ್ ದಾಸ್, ಮಹೇಶ್ ಮರೋಳಿ ಆಯ್ಕೆಯಾಗಿದ್ದಾರೆ.
ಮುಖ್ಯ ರಕ್ಷಾಧಿಕಾರಿ ಜೋಸೆಫ್ ಚಾವರ ಚುನಾವಣೆ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಬಿನೋಯ್ ಜೋಸೆಫ್ ಸ್ವಾಗತಿಸಿದರು. ವಿ.ವಿ.ರಾಜೇಶ್ ಅಧ್ಯಕ್ಷತೆ ವಹಿಸಿದರು. ಜೋಸೆಫ್ ಚಾವರ ಮುಖ್ಯ ಅತಿಥಿಯಾಗಿದ್ದರು. ರಾಜೀವನ್ ಎಳಯಾವೂರು, ಮಹೇಶ್ ಮರೋಳಿ, ಪಿ.ವಿ.ಸಂತೋಷ್ ಕುಮಾರ್, ನ್ಯಾಯವಾದಿ ಧನೇಶ್ ನಂಬ್ಯಾರ್ ಮೊದಲಾದವರು ಮಾತನಾಡಿದರು.