ಕುಂಬಳೆ: ಸರೋವರ ಕ್ಷೇತ್ರ ಅನಂತಪುರ ಶ್ರೀಅನಂತಪದ್ಮನಾಭ ದೇವಾಲಯ ಪರಿಸರದಲ್ಲಿ ಏ.10 ರಿಂದ 12ರ ವರೆಗೆ ನಡೆಯಲಿರುವ ಕನ್ನಡ ಸಿರಿ ಸಮ್ಮೇಳನದ ಪೂರ್ವಭಾವಿಯಾಗಿ ವಿವಿಧ ಉಪ ಸಮಿತಿಗಳು, ಪ್ರಾದೇಶಿಕ ಸಮಿತಿಗಳನ್ನು ರಚಿಸಲಾಗುತ್ತಿದ್ದು, ಅನಂತಪುರ ಸ್ಥಳೀಯ ಸಮಿತಿಯನ್ನು ಇತ್ತೀಚೆಗೆ ರಚಿಸಲಾಯಿತು.
ಭಾನುವಾರ ಸಂಜೆ ಅನಂತಪುರ ಶ್ರೀಕ್ಷೇತ್ರ ಸಭಾ ಭವನದಲ್ಲಿ ಅನಂತಪುರ ಕ್ಷೇತ್ರ ಆಡಳಿತ ಸಮಿತಿ ಅಧ್ಯಕ್ಷ ಮಹಾಲಿಂಗೇಶ್ವರ ಬಟ್ ಎಂ.ವಿ.ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕನ್ನಡ ಸಿರಿ ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕೆ., ಗೋಪಾಲಕೃಷ್ಣ, ಮಾಧವ ಕಾರಂತ, ಲಕ್ಷ್ಮಣ ಪ್ರಭು ಕುಂಬಳೆ ಉಪಸ್ಥಿತರಿದ್ದು ಮಾಹಿತಿ-ಮಾರ್ಗದರ್ಶನ ನೀಡಿದರು.
ಈ ಸಂದರ್ಭ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಮಾಧವ ಕಾರಂತ, ಉಪಾಧ್ಯಕ್ಷರಾಗಿ ಸುಜಾತಾ, ಐತ್ತಪ್ಪ, ಕಾರ್ಯದರ್ಶಿಯಾಗಿ ಸತ್ಯಶಂಕರ, ಜೊತೆ ಕಾರ್ಯದರ್ಶಿಯಾಗಿ ಅವಿನಾಶ್, ಸೌಮ್ಯಾ ಪ್ರಸಾದ್ ಮತ್ತು ಸಂಚಾಲಕರಾಗಿ ಗೋಪಾಲಕೃಷ್ಣ ಪೆರ್ಣೆ ಅವರನ್ನು ಆರಿಸಲಾಯಿತು.
ಸಮ್ಮೇಳನ ನಗರಿಯ ಸಂಪೂರ್ಣ ನಿರ್ವಹಣೆ, ಮೂಲ ಸೌಕರ್ಯಗಳ ವ್ಯವಸ್ಥೆಗಳನ್ನು ನಿಭಾಯಿಸುವುದರ ಜೊತೆಗೆ ಎಲ್ಲಾ ನೆರವು-ಸಹಕಾರವನ್ನು ಸ್ಥಳೀಯ ಮಟ್ಟದಲ್ಲಿ ನೀಡುವ ಬಗ್ಗೆ ಭಾಗವಹಿಸಿದ್ದವರು ಭರವಸೆ ನೀಡಿದರು. ಮುಂದಿನ ಸಭೆ. ಮಾ.7 ರಂದು ಸಂಜೆ 5 ಕ್ಕೆ ಹಮ್ಮಿಕೊಳ್ಲಲು ತೀರ್ಮಾನಿಸಲಾಯಿತು. ಗೋಪಾಲಕೃಷ್ಣ ಪೆರ್ಣೆ ಸ್ವಾಗತಿಸಿ, ಸುಜಾತಾ ವಂದಿಸಿದರು.