ನವದೆಹಲಿ: ರಾಜ್ಯ ಸರ್ಕಾರಗಳು ಒಟ್ಟಾಗಿ ನಿಂತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್ ಪಿಆರ್)ನ್ನು ಜಾರಿಗೆ ತರುವುದಿಲ್ಲ ಎಂದು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಹೇಳಿದ್ದಾರೆ.
ಸಿಎಎ, ಎನ್ ಪಿಆರ್, ಎನ್ ಆರ್ ಸಿಗಳು ದೇಶದ ಮೂಲ ಗುಣವನ್ನು ಬೇರ್ಪಡಿಸುತ್ತವೆ. ಇದು ಸಮಾಜವನ್ನು ಒಟ್ಟು ಮಾಡುವುದರ ಬದಲಿಗೆ ಧ್ರುವೀಕರಣ ಮಾಡುತ್ತದೆ. ಅನ್ಯೀಕರಣ, ಆಮೂಲಾಗ್ರೀಕರಣ ಮತ್ತು ಉಗ್ರವಾದವೆಂಬ ಮೂರು ಸಮಾಜದ ಧ್ರುವೀಕರಣವನ್ನು ಇದು ಹೊಂದಿದೆ. ಇದರಿಂದ ದೇಶಕ್ಕೆ ವಿನಾಶವೇ ಹೊರತು ಪ್ರಯೋಜನವೇನೂ ಇಲ್ಲ ಎಂದು ತಿವಾರಿ ಟ್ವೀಟ್ ನಲ್ಲಿ ಹೇಳಿದ್ದಾರೆ.