ಲಂಡನ್: ಸುದೀರ್ಘಕಾಲ ನೋಕಿಯಾ ಸಿಇಒ ಸ್ಥಾನದಲ್ಲಿದ್ದ ರಾಜೀವ್ ಸುರಿ ಈಗ ಆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ರಾಜೀವ್ ಸುರಿ ಅವರ ನಿರ್ಗಮನವನ್ನು ಮಾ.02 ರಂದು ನೋಕಿಯಾ ಸಂಸ್ಥೆ ಖಚಿತಪಡಿಸಿದೆ. ಇತ್ತೀಚೆಗಷ್ಟೇ ರಾಜೀವ್ ಸುರಿ ಅವರು ನೋಕಿಯಾ ಆಡಳಿತ ಮಂಡಳಿಯಲ್ಲಿ ಆಡಳಿತ ಮಂಡಳಿ ನಿರ್ದೇಶಕರಿಗೆ ತಮ್ಮ ರಾಜೀನಾಮೆ ಬಗ್ಗೆ ಸುಳಿವು ನೀಡಿದ್ದರು.
ನೋಕಿಯಾದಲ್ಲಿ 25 ವರ್ಷಗಳ ಕಾಲ ಇದ್ದ ನಂತರ, ಹೊಸತನ್ನು ಮಾಡಬೇಕೆನಿಸುತ್ತಿದೆ. ನೋಕಿಯಾ ಎಂದಿಗೂ ನನ್ನ ಭಾಗವಾಗಿರಲಿದೆ. ನನ್ನ ಜೊತೆ ಕೆಲಸ ಮಾಡಿ, ನೋಕಿಯಾವನ್ನು ಉತ್ತಮ ಜಾಗವನ್ನಾಗಿ ನನ್ನನ್ನು ಉತ್ತಮ ನಾಯಕನಾಗಲು ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ ಎಂದು ರಾಜೀವ್ ಸುರಿ ಹೇಳಿದ್ದಾರೆ.