`
ಮುಳ್ಳೇರಿಯ: ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕøತಿಕ ಅಧ್ಯಯನ ಕೇಂದ್ರದ ಸಭಾಭವನದಲ್ಲಿ ಕಲ್ಲಡ್ಕ ಬೀಜೋಟು ಲತಾ ನಾರಾಯಣ ನಾಯ್ಕ್ ಮತ್ತು ಕುಟುಂಬಸ್ಥರಿಂದ ಸೇವಾ ರೂಪವಾಗಿ `ವೀರವೈಷ್ಣವ ಅತಿಕಾಯ' ಯಕ್ಷಗಾನ ತಾಳಮದ್ದಳೆ ನಡೆಯಿತು.
ಸ್ಥಳ ಸಾನಿಧ್ಯ ಶ್ರೀ ಗೋಪಾಲಕೃಷ್ಣ ದೇವರ ಪೂಜಾರಾಧನೆಯೊಂದಿಗೆ ಆರಂಭಗೊಂಡ ಈ ಕಾರ್ಯಕ್ರಮದಲ್ಲಿ ಶ್ರೀ ಗೋಪಾಲಕೃಷ್ಣ ಭಜನಾ ತಂಡದ ಸದಸ್ಯರಿಂದ ಭಜನಾ ಕಾರ್ಯಕ್ರಮವನ್ನು ಅಳವಡಿಸಲಾಗಿತ್ತು. ಸಂಘದ ಅಧ್ಯಕ್ಷ ಕೀರಿಕ್ಕಾಡು ವನಮಾಲ ಕೇಶವ ಭಟ್ ಅವರ ಹಿರಿತನದಲ್ಲಿ ಭಾಗವತ ವಿಶ್ವವಿನೋದ ಬನಾರಿ ಅವರ ನಿರ್ದೇಶನದೊಂದಿಗೆ ಮುನ್ನಡೆದ ಯಕ್ಷಗಾನ ತಾಳಮದ್ದಳೆಯಲ್ಲಿ ಭಾಗವತರಾಗಿ ಮಡ್ವ ಶಂಕರ ನಾರಾಯಣ ಭಟ್, ದಯಾನಂದ ಬಂದ್ಯಡ್ಕ, ಮೋಹನ ಮೆಣಸಿನಕಾನ ಮತ್ತು ವಿದ್ಯಾಭೂಷಣ ಪಂಜಾಜೆ ಅವರು ಸುಶ್ರಾವ್ಯವಾಗಿ ಹಾಡಿ ರಂಜಿಸಿದರು.
ಚೆಂಡೆ ಮದ್ದಳೆ ವಾದನದಲ್ಲಿ ಅಪ್ಪಯ್ಯ ಮಣಿಯಾಣಿ ಮಂಡೆಕೋಲು, ವಿಷ್ಣು ಶರಣ ಬನಾರಿ, ಕೃಷ್ಣ ಪ್ರಸಾದ್ ಬೆಳ್ಳಿಪ್ಪಾಡಿ ತಮ್ಮ ಕೈ ಚಳಕವನ್ನು ತೋರಿಸಿಕೊಟ್ಟರು. ಅರ್ಥಧಾರಿಗಳಾಗಿ ಕಲ್ಲಡ್ಕ ಗುತ್ತು ರಾಮಯ್ಯ ರೈ(ಶ್ರೀರಾಮ), ವೀರಪ್ಪ ಸುವರ್ಣ ಬೆಳ್ಳಿಪ್ಪಾಡಿ (ಲಕ್ಷ್ಮಣ), ನಾರಾಯಣ ಪಾಟಾಳಿ ಮಯ್ಯಾಳ (ವಿಭೀಷಣ), ಐತ್ತಪ್ಪ ಗೌಡ ಮುದಿಯಾರು (ರಾವಣ), ರಾಮ ನಾಯ್ಕ ದೇಲಂಪಾಡಿ (ರಾವಣ ದೂತ), ರಮಾನಂದ ರೈ ದೇಲಂಪಾಡಿ (ಅತಿಕಾಯ) ತಮ್ಮ ಕಲಾ ಪ್ರೌಢಿಮೆಯಿಂದ ಗಮನ ಸೆಳೆದರು. ಲತಾ ಬನಾರಿ ಸ್ವಾಗತಿಸಿ, ಬಿ.ಯಚ್ ಮಮತ ವಂದಿಸಿದರು.