ಸಮರಸ ಚಿತ್ರ ಸುದ್ದಿ: ಪೆರ್ಲ: ಏತಡ್ಕ-ಗದ್ದೆಮನೆಯಲ್ಲಿ ಇತ್ತೀಚೆಗೆ ಜರಗಿದ ನಾಗ ರಕ್ತೇಶ್ವರೀ ದೈವದ ಕೋಲದ ಸಂದರ್ಭದಲ್ಲಿ ಏತಡ್ಕ ಸಮೀಪದ ಜೀಂತಡ್ಕ ಕೃಷ್ಣ ಮೂಲ್ಯರ ಪುತ್ರಿ ರಂಜಿತಾಳ ಪುತ್ರ ಅಂಗನವಾಡಿ ಪುಟಾಣಿ ಹಾರ್ದಿಕ್ ನ ಚಿಕಿತ್ಸೆಗಾಗಿ ಶ್ರೀ ದುರ್ಗಾ ಫ್ರೆಂಡ್ಸ್ ನ ನೇತೃತ್ವದಲ್ಲಿ ಪ್ರತ್ಯೇಕ ಕೌಂಟರ್ ಸ್ಥಾಪಿಸಿ ಸಂಗ್ರಹಿಸಿದ ಸಹಾಯಧನವನ್ನು ಹಸ್ತಾಂತರಿಸಲಾಯಿತು.