ಕಾಸರಗೋಡು: ಕೃಷಿ ವಲಯದ ಸಮಸ್ಯೆಗಳಿಗೆ ತಾಂತ್ರಿಕ ಪರಿಹಾರ ಕಂಡುಕೊಳ್ಳಲು ಯತ್ನಿಸುವ ಮೂಲಕ ಅಗ್ರಿಟೆಕ್‍ಹಾಕತ್ತೋನ್ ಗಮನಸೆಳೆಯಿತು. ಕಾಸರಗೋಡು ಸಿಪಿಸಿಆರ್‍ಐನಲ್ಲಿ ನಡೆದ ಕೇರಳ ಸ್ಟಾರ್ಟ್‍ಅಪ್‍ಮಿಷನ್ ಮತ್ತು ಕೇಂದ್ರ ತೋಟಗಾರಿಕಾ ಬೆಳೆಗಳ ಸಂಶೋಧನೆ ಕೇಂದ್ರ ಜಂಟಿ ವತಿಯಿಂದ ನಡೆಸಲಾದ ಹಾಕತ್ತೋನ್ ಈ ಯತ್ನದ ಮೂಲಕ ಜನಮನ ಸೆಳೆದಿದೆ.
ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಸಹಿತ ರಾಜ್ಯಗಳಿಂದ ಸುಮಾರು 80 ವಿದ್ಯಾರ್ಥಿಗಳು ಹಾಕತ್ತೋನ್‍ನಲ್ಲಿ ಭಾಗವಹಿಸಿದ್ದರು. ಮನುಷ್ಯ ಸಹಾಯವಿಲ್ಲದೆ ತೆಂಗಿನ ಕಾಯಿಯ ಪಕ್ವತೆ ಪತ್ತೆಮಾಡುವ, ರೋಬೋಟ್ ಅಸೆಸ್Éಡ್‍ಗ್ರಾಫ್ಟಿಂಗ್, ವಿಭಿನ್ನ ಕೃಷಿ ಬೆಳೆಗಳಿಗೆ ಪೂರಕ ರೀತಿಯಲ್ಲಿ ಡ್ರಿಪ್ ನೀರಾವರಿನ್ನು ಮೊಬೈಲ್ ಅಪ್ಲಿಕೇµನ್ ಮೂಲಕ ನಿಗಾ ಮತ್ತು ನಿಯಂತ್ರಣ ನಡೆಸುವುದು, ಕೃಷಿ ಉತ್ಪನ್ನಗಳು ಇತ್ಯಾದಿಗಳನ್ನು ಮೌಲ್ಯ ವರ್ಧಿತ ಉತ್ಪನ್ನಗಳಾಗಿಸುವುದು, ಕೃಷಿಕರೇ ಸುಲಭದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಉತ್ಪನ್ನಗಳನ್ನುತಲಪಿಸುವುದು ಇತ್ಯಾದಿಗಳಿಗೆ ಸಹಾಯ ಮಾಡುವ ಇ-ಕಾಮರ್ಸ್ ಪ್ಲಾಟ್‍ಫಾರಂ, ತ್ಯಾಜ್ಯ ಸಂಗ್ರಹ-ಪರಿಷ್ಕರಣೆ ಏಕೀಕರಣ ಮೊದಲಾದವುಗಳಿಗೆ ಅಗತ್ಯವಿರುವ ತಾಂತ್ರಿಕ ವಿದ್ಯೆ ಸಹಿತ ವಿಷಯಗಳಲ್ಲಿ 30ತಾಸುಗಳ ಅವಧಿಯಲ್ಲಿ ಹಾಕತ್ತೋನ್ ನಡೆಯಿತು.
ಇದರ ಪರಿಣಾಮ ಸಮಸ್ಯೆ ಪರಿಹಾರಕ್ಕೆ ಅಗತ್ಯವಿರುವ ಪೆÇ್ರಟೋಟೈಪ್ ಗಳನ್ನುಅಭಿವೃದ್ಧಿ ಪಡಿಸಲಾಗಿದೆ. ಕೇರಳ ಕೇಂದ್ರೀಯ ಸಹಾಯಕ ವಿವಿ ಉಪಕುಲಪತಿ ಡಾ.ಕೆ.ಜಯಪ್ರಸಾದ್ ಸಮಾರಂಭ ಉದ್ಘಾಟಿಸಿದರು. ಕೇರಳಸ್ಟಾರ್ಟ್ ಅಪ್ ಮಿಷನ್ ಬಿಸಿನೆಸ್ ಡೆವೆಲಪ್ ಮೆಂಟ್ ಮೆನೇಜರ್ ಅಶೋಕ್ ಪಞÂಕ್ಕಾರನ್, ಸಂಚಾಲಕ ಸಯದ್ ನವಾದ್,ಸಿ.ಪಿ.ಸಿ.ಆರ್.ಐ. ಸಮಾಜವಿಜ್ಞಾನ ವಿಭಾಗ ಮುಖ್ಯಸ್ಥ ಡಾ.ಕೆ.ಮುರಳೀಧರನ್ ಮೊದಲಾದವರು ಉಪಸ್ಥಿತರಿದ್ದರು.