HEALTH TIPS

ಮೂಲಡ್ಕ ಜಗನ್ನಾಥ ಆಳ್ವ ಪ್ರಥಮ ಸಂಸ್ಮರಣೆ-ಸಾರ್ವಜನಿಕ ಚಿಂತನೆಗಳ ವ್ಯಕ್ತಿತ್ವದಿಂದ ಸದಾ ಪೂಜನೀಯತೆ-ನ್ಯಾಯವಾದಿ ಬಿ.ಸುಬ್ಬಯ್ಯ ರೈ


          ಬದಿಯಡ್ಕ: ಸಾಮಾಜಿಕ, ಸಾಂಸ್ಕøತಿಕ ಕ್ಷೇತ್ರದಲ್ಲಿ ಪ್ರದೇಶವೊಂದು ಗುರುತಿಸಿಕೊಳ್ಳುವಲ್ಲಿ ಕೆಲವು ವಿಶೇಷ ವ್ಯಕ್ತಿಗಳ ಸುಧೀರ್ಘ ಚಿಂತನೆ, ತ್ಯಾಗಗಳು ಕಾರಣವಾಗಿರುತ್ತದೆ. ಬದುಕನ್ನು ವೈಯುಕ್ತಿಕ ನೆಲೆಯಲ್ಲಿ ಪರಿಗಣಿಸದೆ ಸಾಮಾಜಿಕ ಯಶಸ್ಸಿಗೆ ಮುಡಿಪಾಗಿರಿಸಿದ ಸಾಧಕ ಶ್ರೇಷ್ಠರಲ್ಲಿ ಬದಿಯಡ್ಕಕ್ಕೆ ಸಂಬಂಧಿಸಿ ದಿ. ಮೂಲಡ್ಕ ಜಗನ್ನಾಥ ಆಳ್ವರ ಕೊಡುಗೆ ಮಹತ್ತರವಾದುದು ಎಂದು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ, ಧಾರ್ಮಿಕ, ರಾಜಕೀಯ ಮುಖಂಡ ನ್ಯಾಯವಾದಿ ಬಿ.ಸುಬ್ಬಯ್ಯ ರೈ ಅವರು ತಿಳಿಸಿದರು.
          ಬದಿಯಡ್ಕದ ಸಂಸ್ಕøತಿ ಭವನದಲ್ಲಿ ಬುಧವಾರ ಸಂಜೆ ನಡೆದ ಸಾಂಸ್ಕøತಿಕ, ಸಾಮಾಜಿಕ ಮುಖಂಡರಾಗಿದ್ದ ದಿ. ಮೂಲಡ್ಕ ಜಗನ್ನಾಥ ಆಳ್ವರ ಪ್ರಥಮ ಸಂಸ್ಮರಣಾ ಸಮಾರಂಭವನ್ನು ಪುಷ್ಪ ನಮನಗಳನ್ನು ಸಲ್ಲಿಸಿ ಉದ್ಘಾಟಿಸಿ ಅವರು ಮಾತನಾಡಿದರು.
      ವ್ಯಕ್ತಿಗಳು ಗುರುತಿಸಿಕೊಳ್ಳುವುದು ತನ್ನ ಜೀವನವನ್ನು ಸಮಾಜದ ಉನ್ನತಿಗಾಗಿ ಬಳಸಿಕೊಂಡ ಕೊಡುಗೆಗಳಿಂದ ಆಗಿರುತ್ತದೆ. ವೈಯುಕ್ತಿಕ ಆಶೋತ್ತರಗಳನ್ನು ಪರಿಗಣಿಸದೆ ಸಾರ್ವಜನಿಕ ಚಿಂತನೆಗಳನ್ನು ಹೊಂದಿರುವ ವ್ಯಕ್ತಿತ್ವ ಸದಾ ಪೂಜನೀಯವಾಗಿ ಮಾದರಿಯಾಗಿರುತ್ತಾರೆ. ದಿ.ಜಗನ್ನಾಥ ಆಳ್ವರು ಅಳಿದ ಮೇಲೂ ಸದಾ ಕಾಲ ಉಳಿಯುವ ವ್ಯಕ್ತಿತ್ವದವರು ಎಂದು ಅವರು ನುಡಿನಮನ ಸಲ್ಲಿಸಿದರು.
    ತುಳುವೆರೆ ಆಯನೊ ಕೂಟದ ಅಧ್ಯಕ್ಷ, ಖ್ಯಾತ ವೈದ್ಯ ಡಾ.ಶ್ರೀನಿಧಿ ಸರಳಾಯ ಬದಿಯಡ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರಳ ವ್ಯಕ್ತಿತ್ವದ ಜಗನ್ನಾಥ ಆಳ್ವರು ಸುಧೀರ್ಘ ಕಾಲಗಳಿಂದ ತನ್ನ ಒಡನಾಡಿಯಾಗಿದ್ದವರು. ದಿ.ಆಳ್ವರು ತನ್ನ ವಿಶಾಲ ದೃಷ್ಟಿಕೋನಗಳ ಮೂಲಕ ಎಲ್ಲರೊಂದಿಗೆ ಸೌಹಾರ್ಧತೆಯೊಂದಿಗೆ ಕಂಡುಕೊಂಡ ಜೀವನ ಮಾದರಿಯಾದುದು ಎಂದು ತಿಳಿಸಿದರು.
    ರಾಷ್ಟ್ರ ಪ್ರಶಸ್ತಿ ಪುರಸ್ಕøತ ನಿವೃತ್ತ ಮುಖ್ಯೋಪಾಧ್ಯಾಯ ಶಂಕರ್ ಸಾರಡ್ಕ, ರಾಜಕೀಯ ಮುಖಂಡ ಮಾಹಿನ್ ಕೇಳೋಟ್, ಕನ್ನಡ ಸಿರಿ ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕೆ., ಯಕ್ಷಗಾನ ಕಲಾವಿದ ನಾರಾಯಣ ಮೂಲಡ್ಕ, ಲಕ್ಷ್ಮಣ ಪ್ರಭು ಕುಂಬಳೆ, ಶಂಕರ ಸ್ವಾಮಿಕೃಪಾ, ಕೃಷ್ಣ ಶೆಟ್ಟಿ ಧರ್ಮಸ್ಥಳ, ಅಶೋಕ ರೈ ಕೊರೆಕ್ಕಾನ, ಪ್ರೊ.ಎ.ಶ್ರೀನಾಥ್, ಕೇರಳ ತುಳು ಅಕಾಡೆಮಿ ಸದಸ್ಯ ರವೀಂದ್ರ ರೈ ಮಲ್ಲಾವರ, ನ್ಯಾಯವಾದಿ ಥೋಮಸ್ ಡಿಸೋಜ, ಕರ್ನಾಟಕ ಜಾನಪದ ಪರಿಷತ್ತು ಕೇರಳ ಘಟಕದ ಖಜಾಂಜಿ ರವಿ.ನಾಯ್ಕಾಪು., ಹರ್ಷಕುಮಾರ್ ರೈ, ವ್ಯಾಪಾರಿ ಸಂಘಟನೆಯ ನೇತಾರ ಕುಂಜಾರು ಮೊಹಮ್ಮದ್ ಹಾಜಿ, ವಿಶ್ವನಾಥ ಆಳ್ವ ಮೊದಲಾದವರು ಉಪಸ್ಥಿತರಿದ್ದು ನುಡಿ ನಮನ ಸಲ್ಲಿಸಿದರು. ರತ್ನಾಕರ ಓಡಂಗಲ್ಲು ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ನುಡಿ ನಮನ ಸಂಸ್ಮರಣಾ ಕಾರ್ಯಕ್ರಮದಲ್ಲಿ ನಿರಂಜನ ರೈ ಪೆರಡಾಲ ಸ್ವಾಗತಿಸಿ, ರಾಜೇಶ್ ಆಳ್ವ ಬದಿಯಡ್ಕ ವಂದಿಸಿದರು. ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್ ನಿರೂಪಿಸಿದರು.
                  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries