ಕಾಸರಗೋಡು: ಕೇರಳ ಕೇಂದ್ರೀಯ ವಿದ್ಯಾಲಯದ 11 ನೇ ಸ್ಥಾಪನಾ ದಿನಾಚರಣೆ ಮಾ.2 ರಂದು ಪೆರಿಯಾದಲ್ಲಿರುವ ಕೇಂದ್ರೀಯ ವಿ.ವಿ.ಯ ತೇಜಸ್ವಿನಿ ಹಿಲ್ಸ್‍ನ ಚಂದ್ರಗಿರಿ ತೆರೆದ ಸಭಾಂಗಣದಲ್ಲಿ ನಡೆಯಲಿದೆ.
ಸಂಜೆ 5.30 ಕ್ಕೆ ಕೇರಳ ಕೇಂದ್ರೀಯ ವಿ.ವಿ.ಯ ಉಪಕುಲಪತಿ ಪೆÇ್ರ.ಜಿ.ಗೋಪಕುಮಾರನ್ ನಾಯರ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾರತ ಸರಕಾರದ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಜಿ.ಮಾಧವನ್ ನಾಯರ್ ಪ್ರಧಾನ ಭಾಷಣ ಮಾಡುವರು.
ಸ್ಟುಡೆಂಟ್ ಕೌನ್ಸಿಲ್ ಅಧ್ಯಕ್ಷ ಅನುಮೋದ್ ಕೆ.ಕೆ. ಶುಭಹಾರೈಸುವರು. ಕೇಂದ್ರೀಯ ವಿ.ವಿ.ಯ ಪೆÇ್ರ ವೈಸ್ ಚಾನ್ಸಲರ್ ಪೆÇ್ರ..ಜಯಪ್ರಸಾದ್, ರಿಜಿಸ್ಟ್ರಾರ್ ಡಾ.ರಾಧಾಕೃಷ್ಣನ್ ನಾಯರ್ ಉಪಸ್ಥಿತರಿರುವರು.