ಮುಳ್ಳೇರಿಯ: ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕಿನ ಆಶ್ರಯದಲ್ಲಿ ಇತ್ತೀಚೆಗೆ ಗ್ರಾಹಕರ ಸಮಾವೇಶ ಜರಗಿತು. ಬ್ಯಾಂಕಿನ ಪ್ರಧಾನ ಕಚೇರಿಯ ಸಭಾಂಗಣದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಬ್ಯಾಂಕಿನ ಅಧ್ಯಕ್ಷ ಎಂ. ಸಂಜೀವ ಶೆಟ್ಟಿ ಮೊಟ್ಟೆಕುಂಜ ಅಧ್ಯಕ್ಷತೆಯನ್ನು ವಹಿಸಿದ್ದರು. ಕೇರಳ ಸಹಕಾರಿ ಇಲಾಖೆಯ ಹಿರಿಯ ಇನ್ಸ್‍ಪೆಕ್ಟರ್ ಮಣಿಕಂಠ ಅವರು ಉದ್ಘಾಟಿಸಿ ಮಾತನಾಡುತ್ತಾ ಸಹಕಾರಿ ಕ್ಷೇತ್ರದಲ್ಲಿ ಲಭಿಸುವ ವಿವಿಧ ಸವಲತ್ತುಗಳ ಕುರಿತು ವಿವರಿಸಿದರು. ಗ್ರಾಹಕರ ಹಲವಾರು ಪ್ರಶ್ನೆಗಳಿಗೆ ಉತ್ತರವನ್ನು ನೀಡಿದರು. ಊರಿನ ಅಭಿವೃದ್ಧಿಯಲ್ಲಿ ಸಹಕಾರಿ ಸಂಸ್ಥೆಗಳ ಪಾತ್ರವಿದೆ ಎಂಬುದನ್ನು ತಿಳಿಸಿದ ಅವರು ಸಹಕಾರಿ ಬ್ಯಾಂಕಿನ ಅಭಿವೃದ್ಧಿಯಲ್ಲಿ ಗ್ರಾಹಕರ ಸಹಕಾರ ಅತೀ ಅಗತ್ಯ. ಮುಂದೆಯೂ ನಿಮ್ಮೆಲ್ಲರ ಸಹಾಯ ಸಹಕಾರವು ಬ್ಯಾಂಕ್ ಗೆ ಇರಲಿ ಎಂದು ತಿಳಿಸಿದರು.
ನಿರ್ದೇಶಕರುಗಳಾದ ಕೃಷ್ಣಮೂರ್ತಿ, ರಾಮಕೃಷ್ಣ ಭಟ್, ಜಯಪ್ರಕಾಶ್ ಶೆಟ್ಟಿ, ಶಾಂತಕುಮಾರಿ, ಜಯಂತಿ ಎಸ್.ರೈ ಉಪಸ್ಥಿತರಿದ್ದರು. ಕಾರ್ಯದರ್ಶಿ ಮಾಧವ ಶರ್ಮ ಸ್ವಾಗತಿಸಿ, ನಿರ್ದೇಶಕ ಎಂ. ಸುಧಾಮ ಗೋಸಾಡ ವಂದಿಸಿದರು.