ಬದಿಯಡ್ಕ: ತುಳುವೆರೆ ಆಯನೊ ಕೂಟ ಬದಿಯಡ್ಕ ಇದರ ವಿಶೇಷ ಸಭೆ ಬುಧವಾರ ಸಂಜೆ ಸಂಸ್ಕøತಿ ಭವನದಲ್ಲಿ ನಡೆಯಿತು. ಏಪ್ರಿಲ್ 10 ರಿಂದ 12ರ ವರೆಗೆ ಅನಂತಪುರದಲ್ಲಿ ನಡೆಯಲಿರುವ ರಾಷ್ಟ್ರೀಯ ಕನ್ನಡ ಸಿರಿ ಸಮ್ಮೇಳನದ ಯಶಸ್ಸಿಗೆ ಸಂಪೂರ್ಣ ಬೆಂಬಲ ಸೂಚಿಸುವುದರೊಂದಿಗೆ ಅಖಿಲ ಭಾರತ ತುಳು ಒಕ್ಕೂಟದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾದ ನಿರಂಜನ ರೈ ಪೆರಡಾಲ, ಕೃಷ್ಣ ಡಿ.ಬೆಳಿಂಜ ಹಾಗೂ ಆನಂದ ಕೆ.ಮವ್ವಾರು ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.
ಸಭೆಯಲ್ಲಿ ತುಳುವೆರೆ ಆಯನೊ ಕೂಟದ ನೂತನ ಕಾರ್ಯಕಾರಿ ಸಮಿತಿಗೆ ರೂಪುನೀಡಲಾಯಿತು. ಗೌರವಾಧ್ಯಕ್ಷರಾಗಿ ಪ್ರೊ.ಎ.ಶ್ರೀನಾಥ್, ಅಧ್ಯಕ್ಷರಾಗಿ ನ್ಯಾಯವಾದಿ ಥೋಮಸ್ ಡಿಸೋಜ, ಉಪಾಧ್ಯಕ್ಷರುಗಳಾಗಿ ರವಿಕಾಂತ ಕೇಸರಿ ಕಡಾರು ಹಾಗೂ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್, ಪ್ರಧಾನ ಕಾರ್ಯದರ್ಶಿಯಾಗಿ ಭಾಸ್ಕರ ಕೆ., ಜೊತೆ ಕಾರ್ಯದರ್ಶಿಗಳಾಗಿ ಹರ್ಷಕುಮಾರ್ ರೈ ಬೆಳಿಂಜ ಹಾಗೂ ಸುಂದರ ಬಾರಡ್ಕ, ಖಜಾಂಜಿಯಾಗಿ ರವಿ ನಾಯ್ಕಾಪು ಅವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ರವೀಂದ್ರ ರೈ ಮಲ್ಲಾವರ, ರಾಘವೇಂದ್ರ ಅಮ್ಮಣ್ಣಾಯ, ಡಾ.ಶ್ರೀನಿಧಿ ಸರಳಾಯ, ಸುರೇಖಾ ಬಾರಡ್ಕ, ಶಂಕರ್ ಸ್ವಾಮಿಕೃಪಾ, ನಿರಂಜನ ರೈ ಪೆರಡಾಲ, ರಾಜೇಶ್ ಆಳ್ವ ಬದಿಯಡ್ಕ ಅವರನ್ನು ಆಯ್ಕೆಮಾಡಲಾಯಿತು. ನಿರಂಜನ ರೈ ಪೆರಡಾಲ ಸ್ವಾಗತಿಸಿ ವಂದಿಸಿದರು.