ಪರದೀಪ್(ಒಡಿಶಾ): ಭರತ್ ಎಂದಿಗೂ ಭಾರತದ ಬಗೆಗೆ ಕಾಳಜಿ ವಹಿಸುತ್ತಾರೆ ಇದು ಬಂದರು ನಗರಿ ಪರದೀಪ್ ನಿವಾಸಿ ಭಾರತ್ ನಾಥ್ ಬಗೆಗೆ ಬಳಕೆಯಾಗುತ್ತಿರುವ ನಾಣ್ನುಡಿ. ಏಕೆಂದರೆ ಈ ಪಟ್ಟಣ ಸಧ್ಯ ಜಾಗತಿಕ ಭೀತಿ ಹುಟ್ಟಿಸುತ್ತಿರುವ ಕೊರೋನಾವೈರಸ್ (ಕೋವಿಡ್ 19) ಬಗೆಗೆ ಜನರಲ್ಲಿ ಜಾಗೃತಿ ಮೂಡಿಸುವ ಹೊಸ ಮಿಷನ್ ನ ಪ್ರಮುಖ ಭಾಗವಾಗಿದೆ. ಕುಕುಜಾಂಗ್ ಬ್ಲಾಕ್‍ನ 61 ವರ್ಷದ ಹಣ್ಣಿನ ವ್ಯಾಪಾರಿಯೊಬ್ಬ ಈ ನಿಟ್ಟಿನಲ್ಲಿ ಮಹತ್ವದ ಕಾರ್ಯ ಮಾಡುತ್ತಿದ್ದು ಕೊರೋನಾ ಬಗೆಗೆ ಗ್ರಾಹಕರಿಗೆ ಸೂಕ್ತ ಕಾಳಜಿ ತೆಗೆದುಕೊಳ್ಳಿ ಎಂದು ಂಆತಿನಲ್ಲಿ ಹೇಳಿರುವುದು ಮಾತ್ರವಲ್ಲದ್ , ರೋಗದ ತಡೆಗಟ್ಟುವಿಕೆಗಾಗಿ ಏನನ್ನು ಮಾಡಬೇಕು, ಏನನ್ನು ಂಆಡಬಾರದು ಎಂಬ ವಿವರಗಳಿರುವ ಕರಪತ್ರ ಹಾಗೂ ದಿನಪತ್ರಿಕೆ ಕಟ್ಟಿಂಗ್ಸ್ ಗಳನ್ನು ವಿತರಿಸುತ್ತಿದ್ದಾರೆ.
ಇಷ್ಟು ಮಾತ್ರವಲ್ಲದೆ ಅವರು ವೈರಸ್ ವಿರುದ್ಧ ಮುನ್ನೆಚ್ಚರಿಕೆಗಳು ಮತ್ತು ತಡೆಗಟ್ಟುವ ಕ್ರಮಗಳ ಕುರಿತುಪಟ್ಟಣದಾದ್ಯಂತ ಪೆÇೀಸ್ಟರ್‍ಗಳನ್ನು ಹಾಕಿದ್ದಾರೆ. ಪರದೀಪ್ ಪಟ್ಟಣವು ಕೊರೋನಾ ದಾಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ ಇಲ್ಲಿಗ ವಿದೇಶದಿಂದ ಹಡಗಿನಲ್ಲಿ ಪ್ರಯಾಣಿಕರು ಹಾಗೂ ಹಡಗಿನ ಸಿಬ್ಬಂದಿಗಳು ಆಗಮಿಸಿದ್ದಾರೆ. ಇದು ಬಂದರು ಪಟ್ಟಣವಾಗಿದ್ದು ಇಲ್ಲಿನ ಅಧಿಕಾರಿಗಳೂ ಹಡಗಿನ ಮೂಲಕ ಬಂದವರ ತೀವ್ರ ತಪಾಸಣೆ ಕೈಗೊಂಡಿದ್ದಾರೆ. ಇದೇ ವೇಳೆ ಸ್ಥಳೀಯ ಜನರಲ್ಲಿ ರೋಗದ ಬಗ್ಗೆ ಜಾಗೃತಿ ಮೂಡುವುದು ಬಹುಮುಖ್ಯವಾಗುತ್ತದೆ. ಇದನ್ನು ಅರಿತ ಭರತ್ ನಾಥ್ ತನ್ನ ದುಡಿಮೆಯ ಸಮಯದಲ್ಲಿಯೂ ರಸ್ತೆಬದಿಯಲ್ಲಿ ಕುಳಿತು ನಾಗರಿಕರಿಗೆ ರೋಗದ ಬಗೆಗೆ ಕಾಳಜಿ ವಹಿಸುವಂತೆ ಕರಪತ್ರ ವಿತರಿಸಿ ಕೇಳಿಕೊಳ್ಳುತ್ತಿದ್ದಾರೆ.
ಸೀನು, ಕೆಮ್ಮು, ನಿಯಮಿತವಾಗಿ ಕೈ ತೊಳೆಯುವುದು ಮಾಸ್ಕ್ ಧಾರಣೆ ಮುಂತಾದ ಸರಿಯಾದ ಅಭ್ಯಾಸಗಳನ್ನು ಆರೋಗ್ಯ ಏಜೆನ್ಸಿಗಳು ನೀಡುವ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳ ಪ್ರಕಾರ ಅಳವಡಿಸಿಕೊಳ್ಳಲು ಭರತ್ ನಾಥ್ ಸಲಹೆ ನೀಡುತ್ತಿದ್ದಾರೆ. ವಿದೇಶದಿಂದ, ವಿಶೇಷವಾಗಿ ವೈರಸ್ ಪೀಡಿತ ದೇಶಗಳಿಂದ ಬರುವ ಜನರೊಂದಿಗೆ ನೇರ ಸಂಪರ್ಕವನ್ನು ತಪ್ಪಿಸುವಂತೆ ಅವರು ಎಚ್ಚರಿಸುತ್ತಿದ್ದಾರೆ.ಮಾಂಸ ಮತ್ತು ಮೀನನ್ನು ಸರಿಯಾಗಿ ಬೇಯಿಸಿ ಅಡುಗೆ ಮಾಡಿ ಊಟ ಮಾಡುವಂತೆತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಅವರು ಜನರನ್ನು ಕೇಳಿದ್ದಾರೆ. ಭರತ್ ನಾಥ್ ಈ ರೀತಿ ಸಮಾಜದ ಜನರಿಗೆ ಜಾಗೃತಿ ಮೂಡಿಸುತ್ತಿರುವುದು ಇದು ಮೊದಲೇನಲ್ಲ. ಎರಡನೆಯ ತರಗತಿಯವರೆಗೆ ಮಾತ್ರ ಕಲಿತಿರುವ ಇವರು ಜನರೊಂದಿ ಪ್ರಮುಖ ಸ್ಥಳಗಳಲಿ ರಾಷ್ಟ್ರೀಯ ಪ್ರಾಮುಖ್ಯತೆಯ ಸಮಸ್ಯೆಗಳನ್ನುಚರ್ಚಿಸುತ್ತಾರೆ.ವೈರಸ್ ಹರಡುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು ಕೊರೋನಾ ತಡೆಗಟ್ಟಲು ಹಾಗೂ ಸಾಂಕ್ರಾಮಿಕ ರೋಗಹರಡದಂತೆ ತಡೆಯಲು ಯುದ್ಧದೋಪಾದಿ ಮುಂದುವರಿಯಬೇಕಿದೆ ಎನ್ನುತ್ತಾರೆ. ಈಗಾಗಲೇ ಪ್ರಧಾನಿ ಮತ್ತು ಒಡಿಶಾ ಮತ್ತು ಇತರ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಈ ಬಗೆಗೆ ಪತ್ರ ಬರೆದಿರುವ ಭರತ್ 17 ರಾಜ್ಯಗಳ ಮುಖ್ಯಮಂತ್ರಿಗಳಿಗೆ ಬರೆದ ಪತ್ರಗಳಲ್ಲಿ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಯಿಂದ ಗಳಿಸಿದ ಆದಾಯದ ಶೇಕಡಾ 2 ರಷ್ಟು ಹಣವನ್ನು ಈ ಉದ್ದೇಶಕ್ಕಾಗಿ ಮೀಸಲಿಡುವಂತೆ ಒತ್ತಾಯಿಸಿದ್ದಾರೆ.
, "ದೇಶದ ಕಲ್ಯಾಣ ಮತ್ತು ಅಭಿವೃದ್ಧಿಗಾಗಿ ಪ್ರತಿಯೊಬ್ಬರೂ ಯೋಚಿಸಬೇಕು ಇದರಿಂದ ಬಡತನ, ಆರೋಗ್ಯ ರಕ್ಷಣೆ ಮತ್ತು ಶಿಕ್ಷಣದಂತಹ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಬಹುದು" ಎಂದು ಹೇಳಿದರು.