ಬದಿಯಡ್ಕ: ಅನಂತಪುರದಲ್ಲಿ ಏಪ್ರಿಲ್ 10 ರಿಂದ 12ರ ವರೆಗೆ ನಡೆಯಲಿರುವ ರಾಷ್ಟ್ರೀಯ ಸಿರಿ ಸಮ್ಮೇಳನದ ಪೂರ್ವಭಾವಿಯಾಗಿ ಪ್ರಾದೇಶಿಕ ಸಮಿತಿಗಳನ್ನು ರಚಿಸಲಾಗುತ್ತಿದ್ದು, ಬದಿಯಡ್ಕ ಪಂಚಾಯತಿ ಮಟ್ಟದ ಪ್ರಾದೇಶಿಕ ಸಮಿತಿಯ ಸಭೆ ಮಾ.7 ರಂದು ಸಂಜೆ 4 ರಿಂದ ಪೆರಡಾಲ ನವಜೀವನ ಶಾಲೆಯಲ್ಲಿ ಆಯೋಜಿಸಲಾಗಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಸಾಂಸ್ಕøತಿಕ, ಸಾಮಾಜಿಕ, ಭಾಷಾ ಪ್ರೇಮಿಗಳು ಸಭೆಯಲ್ಲಿ ಭಾಗವಹಿಸಿ ಯಶಸ್ಸುಗೊಳಿಸಬೇಕೆಂದು ಸಿರಿ ಸಮ್ಮೇಳನದ ಬದಿಯಡ್ಕ ವಲಯ ಸಂಚಾಲಕರಾದ ಡಾ.ಬೇ.ಸಿ.ಗೋಪಾಲಕೃಷ್ಣ ಭಟ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.