ಕಾಸರಗೋಡು: ಮಹಿಳೆಯರ ಮತ್ತು ಮಕ್ಕಳ ಮೇಳೆ ನಡೆಯುವ ದೌರ್ಜನ್ಯಗಳ ನಿಯಂತ್ರಣ ನಿಟ್ಟಿನಲ್ಲಿ ಕುಟುಂಬಶ್ರೀ ನೇತೃತ್ವದಲ್ಲಿ ಸ್ಥಳೀಯ ಮಟ್ಟದಲ್ಲಿ ವಿಜಿಲೆಂಟ್ ಗ್ರೂಪ್ ಜಾರಿಗೆ ಬರಲಿವೆ. ಮದ್ಯ, ಮಾದಕ ಪದಾರ್ಥ ಇತ್ಯಾದಿಗಳ ವಿರುದ್ಧ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲೂ ಈ ಗುಂಪುಗಳು ಚಟುವಟಿಕೆ ನಡೆಸಲಿವೆ.
ಸ್ಥಳೀಯಾಡಳಿತೆ ಸಂಸ್ಥೆಗಳ ಮಟ್ಟದಲ್ಲಿ ಗ್ರಾಮ ಪಂಚಾಯತ್, ನಗರಸಭೆಗಳ ಅಧ್ಯಕ್ಷರು ಮುಖ್ಯಸ್ಥರಾಗಿರುವ ಸಮಿತಿಗಳಲ್ಲಿ ಸ್ವಯಂಸೇವಕರ ಜೊತೆಗೆ ಪೆÇಲೀಸ್, ಅಬಕಾರಿ ಸಿಬ್ಬಂದಿ, ನ್ಯಾಯವಾದಿಗಳು ಮೊದಲಾದವರು ಇರುವರು. ಕಿಲಾ ಸಂಸ್ಥೆಯ ವತಿಯಿಂದ ವಿಜಿಲೆಂಟ್ ಗುಂಪುಗಳಿಗೆ ಜಿಲ್ಲೆಯ 186 ಕೇಂದ್ರಗಳಲ್ಲಿ ಎರಡು ದಿನಗಳ ತರಬೇತು ನೀಡಲಾಗುವುದು. ತರಬೇತಿನ ಜಿಲ್ಲಾ ಮಟ್ಟದ ಉದ್ಘಾಟನೆ ಕಾಂಞಂಗಾಡಿನಲ್ಲಿ ಜರುಗಿತು. ಕಾಂಞಂಗಾಡ್ ನಗರಸಭೆ ಅಧ್ಯಕ್ಷ ವಿ.ವಿ.ರಮೇಶನ್ ಉದ್ಘಾಟಿಸಿದರು. ಕಿಲಾದ ಸಂಚಾಲಕ ಪಪ್ಪನ್ ಕುಟ್ಟಮತ್ ಅಧ್ಯಕ್ಷತೆ ವಹಿಸಿದ್ದರು. ಕುಟುಂಬಶ್ರೀ ಎ.ಡಿ.ಎಂ.ಸಿ. ಟಿ.ಟಿ.ಸುರೇಂದ್ರನ್, ಡಿ.ಪಿ.ಎಂ.ಆರತಿ ಮೊದಲಾದವರು ನೇತೃತ್ವ ವಹಿಸಿದ್ದರು