HEALTH TIPS

ಮುಂಡಪ್ಪಳ್ಳ ಬ್ರಹ್ಮಕಲಶೋತ್ಸವ- ಇಂದು ವಿಶೇಷ ವೈದಿಕ ವಿಧಿಗಳು-ಧಾರ್ಮಿಕ ಸಭೆ

   
          ಕುಂಬಳೆ: ಕುಂಬಳೆ ಸೀಮೆಯ ರಾಜವಂಶಸ್ಥರಾದ ಮಾಯಿಪ್ಪಾಡಿ ಅರಮನೆಯೊಂದಿಗೆ ಚಾರಿತ್ರಿಕ ಸಂಬಂಧಗಳನ್ನು ಹೊಂದಿದ್ದು, ಶತಮಾನಗಳಿಂದ ಸಂಪೂರ್ಣ ನಾಮಾವಶೇಷಗೊಂಡು ಅಳಿದಿದ್ದು, ಇದೀಗ ಪುನರ್ ನಿರ್ಮಾಣಗೊಂಡು ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿರುವ ದರ್ಬಾರ್ ಕಟ್ಟೆ ಮುಂಡಪ್ಪಳ್ಳ ಶ್ರೀರಾಜರಾಜೇಶ್ವರಿ ದೇವಾಲಯದಲ್ಲಿ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ  ನಡೆಯುತ್ತಿದ್ದು, ದಿನನಿತ್ಯ ಸಾವಿರಾರು ಜನರು ಸಂದರ್ಶಿಸಿ ಪುನೀತರಾಗುತ್ತಿದ್ದಾರೆ.
         ಸೋಮವಾರ (ಮಾ.2 ರಂದು) ಬೆಳಿಗ್ಗೆ 5 ರಿಂದ ಉಷಃಪೂಜೆ, ಅಂಕುರಪೂಜೆ, ಅನುಜ್ಞಾಕಲಶಾಭಿಷೇಕ, ಬಿಂಬಶುದ್ದಿ, ಕಲಶಪೂಜೆ, ಜಲದ್ರೋಣಿ ಪೂಜೆ, ಶಯ್ಯಾಮಂಟಪ ಶುದ್ದಿ, ಮಹಾಪೂಜೆ ನಡೆಯಿತು. ಸಂಜೆ 4.30ರಿಂದ ಅನುಜ್ಞಾ ಬಲಿ, ಕ್ಷೇತ್ರಪಾಲನಲ್ಲಿ ಮುಕ್ತೇಶ್ವರ ಸಹಿತಾಚಾರ್ಯರಿಂದ ಸಪರಿವಾರ ದೇವತೆಗಳಲ್ಲಿ ಅನುಜ್ಞಾ ಪ್ರಾರ್ಥನೆ, ಸತ್ಯಪ್ರತಿಜ್ಞೆ, ಚತುರ್ಥಸ್ನಾನದ ಅಂಕುರಾರೋಪಣ ಸಂಹಾರ, ತತ್ವಹೋಮದ ಕುಂಡಶುದ್ದಿ, ರಾತ್ರಿಪೂಜೆ, ಶ್ರೀದುರ್ಗಾಪೂಜೆಗಳು ನೆರವೇರಿದವು.
           ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 10.30 ರಿಂದ ವಿದುಷಿ ಚಿತ್ತರಂಜಿನಿ ಕುಂಬಳೆ ಮತ್ತು ಬಳಗದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ, ಸಂಜೆ 4 ರಿಂದ ಮುಜುಂಗಾವು ಯಕ್ಷಗಾನ ಹಿಮ್ಮೇಳ ತರಗತಿ ಕೇಂದ್ರದ ಮಾಂಬಾಡಿ ಶಿಷ್ಯವೃಂದದವರಿಂದ ಯಕ್ಷಗಾಯನ, ರಾತ್ರಿ 7 ರಿಂದ ಬಾಲಕೃಷ್ಣ ಮಂಜೇಶ್ವರ ಶಿಷ್ಯವೃಂದದವರಿಂದ ನೃತ್ಯವೈಭವ ನಡೆಯಿತು.
                  ಇಂದಿನ ಕಾರ್ಯಕ್ರಮ:(ಮಂಗಳವಾರ)
          ಬೆಳಿಗ್ಗೆ 5ರಿಂದ ಉಷಃಪೂಜೆ, ಅಂಕುರಪೂಜೆ, ಸಂಹಾರತತ್ವಹೋಮ, ಸಂಹಾರತತ್ವಕಲಶಪೂಜೆ, ಶಯ್ಯಪೂಜೆ, ವಿದ್ವೇಶ್ವರ ಕಲಶ ಪೂಜೆ, ಘೃತಾದಿ ಪೂಜೆ, ಅಷ್ಟಮಂಗಲನ್ಯಾಸ, ಜಲದ್ರೋಣಿ ಪೂಜೆ, ನಿದ್ರಾಕಲಶ ಪೂಜೆ, ಕುಂಭೇಶ ಕಲಶ ಪೂಜೆ, ಕರ್ಕರೀ ಕಲಶ ಪೂಜೆ, ಶಿರಸ್ತತ್ವ ಹೋಮ, ಚಕ್ರಬ್ಜ ಪೂಜೆ, ಪಾಯಸ ಪೂಜೆ, ಸಂಹಾರಪಾಣಿ,  ಹೊಡೆದು ಸಂಹಾರ ತತ್ವಕಲಶವನ್ನು ಸಂಕೋಚದಾನ, ಪ್ರದಕ್ಷಿಣೆ ನಮಸ್ಕಾರ, ಸಂಹಾರ ತತ್ವಾಭಿಷೇಕ, ಧ್ಯಾನ ಸಂಕೋಚ, ಜೀವಕಲಶ ಪೂಜೆ, ಜೀಪೋದ್ವಾಸನ, ಶಯ್ಯಾರೋಹಣ ನಡೆಯಲಿದೆ. ಸಂಜೆ 4.30 ರಿಂದ  ಜಲಾಧಿವಾಸಕ್ರಿಯೆ, ಜಲದ್ರೋಣಿ, ಜಲಾಭಿಷೇಕ, ಬಿಂಬಶುದ್ದಿ, ಕಲಶಾಭಿಷೇಕ, ನೇತ್ರೋನ್ಮಿಲನ, ಕೌತುಕಬಂಧನ, ಉಪಹಾರದಾನ, ಗೋದರ್ಶನ, ಸಾಮಗಾನ ಸ್ತುತಿ ಬಿಂಬಶಯ್ಯಾರೋಹಣಂ, ಪ್ರಾಸಾದ ಶುದ್ದಿ ಸಹಿತ ರಾತ್ರಿ ದುರ್ಗಾಪೂಜೆ ನಡೆಯಲಿದೆ.
          ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 4ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು, ನಿಟ್ಟೆ ಎಜ್ಯುಕೇಶನ್ ಟ್ರಸ್ಟ್ ನ ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸುವರು. ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸುವರು. ಕಟೀಲು ಶ್ರೀಕ್ಷೇತ್ರದ ಅನಂತಪದ್ಮನಾಭ ಆಸ್ರಣ್ಣ ಆಶೀರ್ವಚನ ನೀಡುವರು. ಬಂಟ್ವಾಳ ಶಾಸಕ ರಾಜೇಶ್ ನಾಯಕ್, ಮಂಗಳೂರು ಶಾಸಕ ವೇದವ್ಯಾಸ ಕಾಮತ್, ಸುರತ್ಕಲ್ ಶಾಸಕ ಡಾ.ಭರತ್ ಶೆಟ್ಟಿ, ಪಡುಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ,ಮಲ್ಲ ಶ್ರೀಕ್ಷೇತ್ರದ ಮೊಕ್ತೇಸರ ಆನೆಮಜಲು ವಿಷ್ಣು ಭಟ್, ಮಾಲಾಡಿ ಅಜಿತ್ ಕುಮಾರ್ ರೈ, ಉಪೇಂದ್ರ ಶೆಟ್ಟಿ, ಸಂತೋಷ್ ಶೆಟ್ಟಿ, ನ್ಯಾಯವಾದಿ ಬಾಲಕೃಷ್ಣ ಶೆಟ್ಟಿ, ಜಗನ್ನಾಥ ಶೆಟ್ಟಿ, ಡಾ.ಮೋಹನ ಆಳ್ವ, ಪಿ.ಎಸ್.ಪ್ರಕಾಶ್, ಗಣೇಶ್ ರಾವ್, ಕೆ.ರವೀಂದ್ರ ಆಳ್ವ, ಸುದರ್ಶನ ಬಲ್ಲಾಳ್, ಡಾ.ನಾಗರಾಜ ಶೆಟ್ಟಿ, ಎ.ಸುಭೋದ್ ರೈ ಮೊದಲಾದವರು ಉಪಸ್ಥಿತರಿರುವರು.
        ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 10.30ರಿಂದ ಕಳತ್ತೂರು ಕಲಾಭಿಮಾನಿ ಬಳಗದವರಿಂದ ಶರಸೇತು ಬಂಧನ ತಾಳಮದ್ದಳೆ, ರಾತ್ರಿ 7ರಿಂದ ನೃತ್ಯ ವೈಭವ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries