HEALTH TIPS

ರಾಷ್ಟ್ರೀಯ ಜಾನಪದ-ಸಾಂಸ್ಕøತಿಕ ಕೇಂದ್ರವಾಗಿ ಜಾನಪದ ಲೋಕ


        ಬೆಂಗಳೂರು: ರಾಮನಗರದಲ್ಲಿರುವ ಜಾನಪದ ಲೋಕವನ್ನು ರಾಷ್ಟ್ರೀಯ ಜಾನಪದ ಮತ್ತು ಸಾಂಸ್ಕೃತಿಕ ಕೇಂದ್ರವಾಗಿ ಅಭಿವೃದ್ಧಿಪಡಿಸಲು 10 ಕೋಟಿ ರೂಗಳ ಅನುದಾನವನ್ನು ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಘೋಷಿಸುವಂತೆ ಬೇಡಿಕೆ ಸಲ್ಲಿಸಲಾಗಿದೆ.
      ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಟಿ.ತಿಮ್ಮೇಗೌಡ ಅವರ ನೇತೃತ್ವದ ನಿಯೋಗ ಈ ಮನವಿ ಸಲ್ಲಿಸಿತು. ಜಾನಪದ ಲೋಕ ರಾಷ್ಟ್ರಮಟ್ಟದ ಕೇಂದ್ರವಾಗಿ ರೂಪುಗೊಳ್ಳಬೇಕು. ರಾಜಸ್ಥಾನದ ಚೌಕಿದಾನಿ ಮಾದರಿಯಲ್ಲಿಅಭಿವೃದ್ಧಿಪಡಿಸಬೇಕು. ಜೊತೆಗೆ ಜಾನಪದ ಲೋಕದಲ್ಲಿ ಬುಡಕಟ್ಟು ಜನಾಂಗದ ಕುಟೀರಗಳ ನಿರ್ಮಾಣ,"ಧ್ವನಿ ಬೆಳಕಿನ ಜಾನಪದ ಕಾರ್ಯಕ್ರಮ ವ್ಯವಸ್ಥೆ,ಮ್ಯೂಸಿಯಂಗಳನ್ಮು ರಾಷ್ಟ್ರ ಮಟ್ಟದ ಮ್ಯೂಸಿಯಂಗಳ ಮಾದರಿಯಲ್ಲಿ ಉನ್ನತ ದರ್ಜೆಗೇರಿಸುವುದು,ಜಿಲ್ಲಾ ಘಟಕಗಳ ಕಾರ್ಯಕ್ರಮಗಳಿಗೆ ಇನ್ನಷ್ಟು ಪೆÇ್ರೀತ್ಸಾಹ ಸೇರಿದಂತೆ ಅಭಿವೃದ್ಧಿ ಯೋಜನೆಗಳ ರೂಪು ರೇಷೆಯನ್ನು ಮುಖ್ಯಮಂತ್ರಿಯವರಿಗೆ ಸಲ್ಲಿಸಿ ಮುಂಬರುವ ಆಯವ್ಯಯದಲ್ಲಿ ಘೋಷಿಸುವಂತೆ ಒತ್ತಾಯಿಸಲಾಯಿತು. ಕರ್ನಾಟಕ ಜಾನಪದ ಪರಿಷತ್ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್ ಮತ್ತಿತರರು ನಿಯೋಗದಲ್ಲಿದ್ದರು. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರಾಮನಗರದಿಂದ 4 ಕಿ.ಮೀ. ದೂರದಲ್ಲಿ ಜಾನಪದ ಲೋಕ ಸಿಗುತ್ತದೆ. ಆಕರ್ಷಕ ಹೆಬ್ಬಾಗಿಲುಳ್ಳ ಜಾನಪದ ಲೋಕ ನಿವೃತ್ತ ಐ.ಎ.ಎಸ್. ಅಧಿಕಾರಿ ಸಾಹಿತಿ ಜಾನಪದ ಬ್ರಹ್ಮ ದಿ.ಎಸ್.ಎಲ್. ನಾಗೇಗೌಡರ ಕನಸಿನ ಸಾಕಾರ ರೂಪ. ಹದಿನೈದು ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಜಾನಪದ ಲೋಕದಲ್ಲಿ ವಿಹರಿಸುವುದೇನೆಂದರೆ ಕರ್ನಾಟಕದ ಗ್ರಾಮೀಣ ಸಂಸ್ಕೃತಿ ಆಳ-ಹರಹುಗಳ ವಿಸ್ಮಯ ಜಗತ್ತನ್ನು ಹೊಕ್ಕಂತೆ ಭಾಸವಾಗುತ್ತದೆ.
     ಸುಮಾರು 1500 ಜನಗಳು ಕೂರಬಹುದಾದ ವಿಶಾಲ ಬಯಲು ರಂಗಮಂದಿರವಿದೆ. ಗ್ರೀಸ್ ನ ಎಪಿಕ್ ರಂಗಮಂದಿರದ ಮಾದರಿಯಲ್ಲಿ ನಿರ್ಮಿಸಿರುವ ಇಲ್ಲಿ ವರ್ಷವಿಡಿ ಅನೇಕ ಸಾಹಿತ್ಯಕ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಜಾನಪದ ಕಲೆಗಳಿಗೆ ಸಂಬಂಧಿಸಿದ ಸಾಕ್ಷ್ಯಚಿತ್ರ ಹಾಗೂ ಇನ್ನಿತರ ದೃಶ್ಯ ಪ್ರದರ್ಶನಗಳಿಗಾಗಿ ವಿಡಿಯೋ ಸ್ಕೋಪ್ ನ ಪ್ರತ್ಯೇಕ ಸಭಾಂಗಣ ಇದೆ. ಲೋಕಮಾತಾ ಮಂದಿರದ ಸಮೀಪದಲ್ಲೇ ಚಿತ್ರಕುಟೀರವಿದೆ.
      ಜಾನಪದ ಲೋಕಮಂದಿರದಲ್ಲಿ ಗ್ರಾಮೀಣ ಕಲೆಗಳ ಮತ್ತು ಕಲಾ ಪ್ರದರ್ಶನಕ್ಕಾಗಿ ಬಳಸುವ ವಾದ್ಯಗಳು ಹಾಗೂ ಹಳ್ಳಿಗರು ಬಳಸುವ ಸರಕು ಸಾಧನಗಳು, ತೊಗಲು ಗೊಂಬೆ, ಯಕ್ಷಗಾನ ಬಯಲಾಟದ ವಿವಿಧ ಗೊಂಬೆಗಳು, ನಾಣ್ಯಗಳು, ಅಳತೆ ಮಾಪಕಗಳು ಇತ್ಯಾದಿಗಳ ಸಂಗ್ರಹವಿದೆ. ಅಯ್ಯಂಗಾರರ ಮಾಳ, ಶಿಲ್ಪ ಮಾಳ, ಕುಂಬಾರಿಕೆ ಹಾಗೂ ಗೊಂಬೆ ತಯಾರಿಕೆಯು ಇಲ್ಲಿನ ಇತರೆ ಆಕರ್ಷಣಿಗಳು. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಕುಡಿಯುವ ನೀರು, ಶೌಚಾಲಯ, ರೆಸ್ಟೋರೆಂಟ್ ಹಾಗೂ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries