ಕುಂಬಳೆ: ವಿದ್ಯಾರ್ಥಿಗಳು ಕೇವಲ ಪುಸ್ತಕದ ಹುಳಗಳಾಗಬಾರದು. ಸಾಹಿತ್ತಿಕ, ಸಾಂಸ್ಕøತಿಕ ಚಟುವಟಿಕೆಗಳಲ್ಲೂ ಭಾಗವಹಿಸುವ ಮೂಲಕ ಆರೋಗ್ಯವಂತ ಮನಸ್ಸನ್ನು ಹೊಂದಬೇಕು. ಆರೋಗ್ಯ ಕಾಪಾಡುವ ವ್ಯಾಯಾಮ, ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಚಲನಚಿತ್ರ ನಟ, ನಿರ್ದೇಶಕ ಕಾಸರಗೋಡು ಚಿನ್ನಾ ಅಭಿಪ್ರಾಯ ವ್ಯಕ್ತಪಡಿಸಿದರು.
ನಾಯ್ಕಾಪು ಲಿಟಲ್ ಲಿಲ್ಲಿ ಶಾಲೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕಿಡ್ಸ್ ಫೆಸ್ಟ್ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಲಿಟಲ್ ಲಿಲ್ಲಿ ಶಾಲೆಯಲ್ಲಿ ಸಾಂಸ್ಕøತಿಕ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ನೀಡುವ ಪ್ರೋತ್ಸಾಹ ಸ್ತುತ್ಯರ್ಹವೆಂದು ತಿಳಿಸಿದ ಅವರು ಗ್ರಾಮೀಣ ಪ್ರತಿಭೆಗಳಿಗೂ ವೇದಿಕೆಯೊದಗಿಸಿದ ಶಾಲಾ ಸಂಚಾಲಕಿ ಸರಸ್ವತಿ ಟೀಚರ್ ಅವರ ಮಹತ್ತರ ಕೊಡುಗೆಗಳನ್ನು ಶ್ಲಾಘಿಸಿದರು.
ಶಾಲಾ ಸಂಚಾಲಕಿ ಸರಸ್ವತಿ ಟೀಚರ್, ಶಿಕ್ಷಕ-ಶಿಕ್ಷಕಿಯರು ಉಪಸ್ಥಿತರಿದ್ದರು. ಶಿಕ್ಷಕಿ ಪುಷ್ಪಲತಾ ಸ್ವಾಗತಿಸಿ, ಶ್ರೀಜಿತ್ ವಂದಿಸಿದರು.