ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ಭಜನಾ ಸಂಘದ ನೇತೃತ್ವದಲ್ಲಿ ಮಹಾಶಿವರಾತ್ರಿಯ ದಿನ ಪೆರಡಾಲ ಶ್ರೀ ಉದನೇಶ್ವರ ದೇವರ ಸನ್ನಿಧಿಯಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದ ತನಕ ಏಕಾಹ ಭಜನೆ ನಡೆಯಿತು. ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ವಾಸುದೇವ ಕೊಳತ್ತಾಯ ದೀಪೋಜ್ವಲನೆಯೊಂದಿಗೆ ವಿವಿಧ ಭಜನ ತಂಡಗಳು ಸೇವೆಯನ್ನು ಪ್ರಾರಂಭಿಸಿದರು. ಕುಂಟಿಕಾನ ಮಠ ಶ್ರೀ ಅನ್ನಪೂರ್ಣೇಶ್ವರಿ ಭಜನಾ ಮಂಡಳಿ, ಪೆರಡಾಲ ಶ್ರೀ ಉದನೇಶ್ವರ ಭಜನಾ ಸಂಘ, ಆರ್ಟ್ ಆಫ್ ಲಿವಿಂಗ್ ಬದಿಯಡ್ಕ ಘಟಕ, ಶ್ರೀ ಕೊರತ್ತಿ ಬಂಟ್ಸ್ ಮಹಿಳಾ ಭಜನಾ ಮಂಡಳಿ, ವಿಶ್ವಪ್ರಿಯ ಭಜನಾ ಸಂಘ ಏತಡ್ಕ, ರಂಗಸಿರಿ ಸಾಂಸ್ಕøತಿಕ ವೇದಿಕೆ ಬದಿಯಡ್ಕ, ಶ್ರೀಮಾತಾ ಹವ್ಯಕ ಭಜನಾ ಸಂಘ ಬದಿಯಡ್ಕ, ಉಷಾ ರವಿಶಂಕರ್ ಕಾಸರಗೋಡು ಭಜನೆಯಲ್ಲೂ, ಸಂಜೆ ಮಂಗಲೋತ್ಸವದಲ್ಲಿ ಕೌಡಿಂಕಾನ ಶ್ರೀ ರಕ್ತೇಶ್ವರಿ ಭಜನಾ ಸಂಘ ಸಾಮಕೊಚ್ಚಿ ಇವರು ಕುಣಿತ ಭಜನೆ ಸೇವೆಯನ್ನು ನಡೆಸಿಕೊಟ್ಟರು. ರಾತ್ರಿ ಶ್ರೀಕೃಷ್ಣ ಗಾನಾಮೃತ ಕಾರ್ಯಕ್ರಮ ನಡೆಸಿಕೊಟ್ಟ ಶ್ರೀಮಧ್ವಾಧೀಶ ವಿಠಲ ದಾಸ ನಾಮಾಂಕಿತ ರಾಮಕೃಷ್ಣ ಕಾಟುಕುಕ್ಕೆ ಅವರಿಗೆ ಗೌರವಾರ್ಪಣೆ ನಡೆಯಿತು. ಉದನೇಶ್ವರ ಭಜನ ಸಂಘಧ ಪದಾಧಿಕಾರಿಗಳು, ಸದಸ್ಯರು ಜೊತೆಗಿದ್ದರು. ಶಿವಶಕ್ತಿ ಪೆರಡಾಲ, ಹತ್ತು ಸಮಸ್ತರು ಪೆರಡಾಲ, ಓಂ ಶ್ರೀ ಪೆರಡಾಲ ಸಂಘಟನೆಗಳು ಸಹಕರಿಸಿದರು.
ಪೆರಡಾಲದಲ್ಲಿ ಏಕಾಹ ಭಜನೆ, ಶ್ರೀ ಮಧ್ವಾಧೀಶ ವಿಠಲ ದಾಸರಿಗೆ ಗೌರವಾರ್ಪಣೆ
0
ಮಾರ್ಚ್ 02, 2020