ಕಾಸರಗೋಡು: ಉದ್ಯೋಗ ಖಾತರಿ ಯೋಜನೆ ಮೂಲಕ ನೂತನ ಚಟುವಟಿಕೆಗಳನ್ನು ನಡೆಸುವ ಮತ್ತು ಅತ್ಯ„ಕ ಅಂಗನವಾಡಿ ಹೊಂದಿರುವ ಹೆಗ್ಗಳಿಕೆಯೊಂದಿಗೆ ಜಿಲ್ಲೆಯ ಕೋಡೋಂ-ಬೇಳೂರು ಗ್ರಾಮ ಪಂಚಾಯತ್ ಗಮನಸೆಳೆಯುತ್ತಿದೆ.
ಪಂಚಾಯತ್‍ನಲ್ಲಿ ಉದ್ಯೋಗ ಖಾತರಿ ಯೋಜನೆ ಅಂಗವಾಗಿ 5.85 ಕೋಟಿ ರೂ. ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಪಂಚಾಯತ್‍ನಲ್ಲಿ 7322 ಮಂದಿ ಉದ್ಯೋಗ ಖಾತರಿ ಯೋಜನೆಯ ಸದಸ್ಯರಾಗಿದ್ದಾರೆ.
ಜಿಲ್ಲೆಯಲ್ಲಿ ಉದ್ಯೋಗ ಖಾತರಿ ಯೋಜನೆಯ ಅಂಗವಾಗಿ ಅತ್ಯಧಿಕ ಅಂಗನವಾಡಿಗಳು ನಿರ್ಮಾಣಗೊಂಡ ಹೆಗ್ಗಳಿಕೆ ಕೋಡೋಂ-ಬೇಳೂರು ಗ್ರಾಮ ಪಂಚಾಯತ್‍ಗೆ ಸಲ್ಲುತ್ತದೆ. ಮಹಿಳಾ-ಶಿಶು ಕಲ್ಯಾಣ ಇಲಾಖೆ, ಗ್ರಾಮ ಪಂಚಾಯತ್, ಬ್ಲಾಕ್ ಪಂಚಾಯತ್‍ಗಳೊಂದಿಗೆ ಕೈಜೋಡಿಸಿ ಸಂಯೋಜಿತ ಯೋಜನೆ ಮೂಲಕ 5 ಅಂಗನವಾಡಿಗಳನ್ನು ನಿರ್ಮಿಸಲಾಗುತ್ತಿದೆ. ಅಯರೋಟ್ ಅಂಗನವಾಡಿಯ ನಿರ್ಮಾಣ ಚಟುವಟಿಕೆ ಈಗಾಗಲೇ ಆರಂಭಗೊಂಡಿದೆ. ಸಾರ್ವಜನಿಕರ ಸಹಾಯದೊಂದಿಗೆ 10 ಲಕ್ಷ
ರೂ. ವೆಚ್ಚದಲ್ಲಿ ಪ್ರತಿ ಅಂಗನವಾಡಿಗಳ ನಿರ್ಮಾಣ ನಡೆದಿದೆ. ಎಲ್ಲ ಅಂಗನವಾಡಿಗಳ ಮತ್ತು ಅವುಗಳ ಆವರಣ ಗೋಡೆ ನಿರ್ಮಾಣವನ್ನು ಉದ್ಯೋಗ ಖಾತರಿ ಯೋಜನೆಯ ಸದಸ್ಯರೇ ನಡೆಸುತ್ತಿದ್ದಾರೆ.
ವ್ಯಕ್ತಿಗತ ಆಸ್ತಿ ಅಭಿವೃದ್ಧಿ ಯೋಜನೆಯಲ್ಲಿ ಮೀನಿನ ಕೆರೆಗಳು ಇಲ್ಲಿ ಯಶಶ್ವಿಯಾಗಿವೆ. ಪರಪ್ಪ ಬ್ಲಾಕ್ ಪಂಚಾಯತ್ ಕಚೇರಿಯ ಮುಂಭಾಗದಲ್ಲಿರುವ ಮೀನಿನ ಕೆರೆ ಇದಕ್ಕೊಂದು ಉದಾಹರಣೆ. 40 ಸಾವಿರ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಕೆರೆಯಲ್ಲಿ ಹಲವು ವಿಧದ ಮೀನುಗಳು ಇದ್ದು, ಇದನ್ನು ಅವಲಂಬಿಸಿ 21 ಮಂದಿ ಮೀನು ಕೃಷಿಕರು ಬದುಕುತ್ತಿದ್ದಾರೆ. ಮತ್ಸ್ಯ ಫೆಡ್ ನಿಂದ ತರಲಾದ ಮೀನುಗಳನ್ನು ಇಲ್ಲಿ ಸಾಕಣೆ ನಡೆಸಲಾಗುತ್ತಿದೆ.
ಇದೇ ಜೋಜನೆಯ ಅಂಗವಾಗಿ ಹಸುವಿನ ಹಟ್ಟಿ, ಮೇಕೆಯ ಗೂಡು, ಕೋಳಿಗೂಡು, ಕೋಳಿ ಫಾರಂ ಇತ್ಯಾದಿಗಳನ್ನು ಉದ್ಯೋಗ ಖಾತರಿ ಯೋಜನೆಯಲ್ಲಿ ಅಳವಡಿಸಿ ಫಲಾನುಭವಿಗಳಿಗೆ ನಿರ್ಮಿಸಿ ಕೊಡಲಾಗುತ್ತಿದೆ. ಈ ನಿಟ್ಟಿನಲ್ಲಿ 99 ಹಟ್ಟಿಗಳನ್ನು, 13 ಮೇಕೆ ಗೂಡುಗಳನ್ನು, 7 ಕೋಳಿ ಗೂಡುಗಳನ್ನು ಯೋಜನೆಯ ಅಂಗವಾಗಿ ಪಂಚಾಯತ್‍ನ ವಿವಿಧ ವಾರ್ಡ್‍ಗಳಲ್ಲಿ ನಿರ್ಮಾಣ ಮಾಡಲಾಗಿದೆ.
ಆಸ್ತಿ ಅಭಿವೃದ್ಧಿ ಯೋಜನೆಯ ವೇಳೆ ಶಾಲೆ ಮತ್ತು ಆಸ್ಪತ್ರೆಗಳಿಗೆ ಕೋಡೋಂ-ಬೇಳೂರು ಗ್ರಾಮ ಪಂಚಾಯತ್‍ನಲ್ಲಿ ಆದ್ಯತೆ ನೀಡಲಾಗುತ್ತಿದೆ. ಎಣ್ಣಪ್ಪಾರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಳಕೆಯ ನಂತರದ ಚುಚ್ಚುಮದ್ದುಗಳ ಸಿರಿಂಜಿಗಳ ಸಹಿತದ ತ್ಯಾಜ್ಯಗಳನ್ನು ಸೂಕ್ತ ರೀತಿ ಸಂಗ್ರಹಿಸುವ ನಿಟ್ಟಿನಲ್ಲಿ ಉದ್ಯೋಗ ಖಾತರಿ ಯೋಜನೆಯ ಮೂಲಕ ಸಂಗ್ರಹ ಕೇಂದ್ರವೊಂದನ್ನು ಸ್ಥಾಪಿಸಲಾಗಿದೆ. ಬೇಳೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉತ್ತಮ ಸೌಲಭ್ಯಗಳ ಸಹಿತದ ಅಡುಗೆ ಮನೆ ನಿರ್ಮಿಸಲಾಗಿದೆ. ಕಾಲಿಚ್ಚಾನಡ್ಕ ಶಾಲೆಯಲ್ಲಿ ಕಿರಿಯ ಪ್ರಾಥಮಿಕ ವಿಭಾಗದ ಮಕ್ಕಳಿಗಾಗಿ ಉದ್ಯಾನ, ಎಣ್ಣಪ್ಪಾರ ಪ್ರಾಥಮಿಕ ಆರೋಗ್ಯ ಕೆಂದ್ರ ಮತ್ತು ಪಂಚಾಯತ್‍ನ ವಿವಿಧ ಶಾಲೆಗಳ ಆವರಣದಲ್ಲಿ ಎರೆಗೊಬ್ಬರ ಗುಂಡಿ ನಿರ್ಮಿಸಲಾಗಿದೆ.
ಮುದಿರಕ್ಕಾಲ್-ಚುಣ್ಣಂಕುಳಂ ಕಾಲ್ನಡಿಗೆ ಸೇತುವೆಯನ್ನು 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. 19ನೇ ವಾರ್ಡ್ ಆನೆಕಲ್ಲು ಅಂಗನವಾಡಿಗೆ ತೆರಳುವ ಮಕ್ಕಳಿಗೆ ಪ್ರಧಾನ ಹಾದಿ ಇದುವೇ ಆಗಿದೆ. ಪೆರಿಯದಲ್ಲಿ ಯೂತ್ ಕ್ಲಬ್‍ಗಾಗಿ ವಾಲಿಬಾಲ್ ಕೋರ್ಟ್ ನಿರ್ಮಿಸಲಾಗಿದೆ. ಪರಿಶಿಷ್ಟ ಪಂಗಡ ಕಾಲನಿಗಿರುವ ಅನೇಕ ರಸ್ತೆಗಳ ಕಾಂಕ್ರೀಟೀಕರಣ, ರಸ್ತೆ ಸೋಲಿಂಗ್ ಇತ್ಯಾದಿ ಯೋಜನೆಯ ಅಂಗವಾಗಿ ನಡೆಸಲಾಗುತ್ತಿದೆ.
ನೀರಿನ ಬರ ತೀವ್ರವಾಗಿರುವ ಕೋಡೋಂ-ಬೇಳೂರು ಗ್ರಾಮ ಪಂಚಾಯತ್‍ನಲ್ಲಿ ಜಲಸಂರಕ್ಷಣೆ ಚಟುವಟಿಕೆಗಳು ಮಾದರಿ ರೂಪದಲ್ಲಿ ನಡೆಯುತ್ತಿವೆ. ಪರಕ್ಕಳಾಯಿ ಕೆರೆ ನಿರ್ಮಾಣ ಜಲಸಂರಕ್ಷಣೆಯಲ್ಲಿ ಅತ್ಯುತ್ತಮ ಉದಾಹರಣೆಯಾಗಿದೆ. ತಾತ್ಕಾಲಿಕ ತಡೆಗೋಡೆ(ಬ್ರಷ್ವುಡ್ ಚೆಕ್ ಡ್ಯಾಂ), ಬಾವಿ ರೀ ಚಾರ್ಜಿಂಗ್, ಬಾವಿಗಳ ಮತ್ತು ಕೆರೆಗಳ ನಿರ್ಮಾಣ, ಮಳೆ ನೀರು ಇಂಗು ಗುಂಡಿಗಳು, ಜಲಾಶಯಗಳ ಪಾಶ್ರ್ವ ಭಿತ್ತಿ ನಿರ್ಮಣ ಇತ್ಯಾದಿಗಳನ್ನು ನಡೆಸುವ ಮೂಲಕ ಜಲಸಂರಕ್ಷಣೆಯನ್ನು ಖಚಿತಪಡಿಸಲಾಗುತ್ತಿದೆ.
ಅಭಿಮತ:
* ಮೂಲಭೂತ ಸೌಲಭ್ಯಗಳ ಅಭಿವೃದ್ಧಿ
ಆಸ್ತಿ ಅಭಿವೃದ್ಧಿ ಚಟುವಟಿಕೆಗಳ ಅಂಗವಾಗಿ ವಿವಿಧ ಇಲಾಖೆಗಳೊಂದಿಗೆ ಕೈಜೋಡಿಸಿ ರಚಿಸುವ ಸಂಯೋಜಿತ ಯೋಜನೆಗಳನ್ನು ಈ ಪಂಚಾಯತ್‍ನಲ್ಲಿ ಅತ್ಯ„ಕ ಪ್ರಮಾಣದಲ್ಲಿ ಜಾರಿಗೊಳಿಸಲಾಗುತ್ತಿದೆ. ಅಂಗನವಾಡಿಗಳ ಮತ್ತು ಮೀನುಗಳ ಕೆರೆಗಳ ನಿರ್ಮಾಣ ಈ ನಿಟ್ಟಿನಲ್ಲಿ ಗಮನಾರ್ಹವಾಗಿವೆ. ಸಂಯೋಜಿತ ಯೋಜನೆಗಳ ಮೂಲಕ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯೂ ಸಾಧ್ಯವಾಗಿದೆ.
- ಸಿ.ಕುಂಞÂಕಣ್ಣನ್, ಅಧ್ಯಕ್ಷ,
ಕೋಡೋಂ-ಬೇಳೂರು ಗ್ರಾಮ ಪಂಚಾಯತ್.