ಉಪ್ಪಳ: ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಫೆ. 23 ರಂದು ಆರಂಭಗೊಂಡ ಅಖಂಡ ಭಜನಾ ಸಪ್ತಾಹವು ಭಾನುವಾರ ಸೂರ್ಯಾಸ್ತಮಾನ ವೇಳೆಯಲ್ಲಿ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತು ಕೊಂಡೆವೂರಿನ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ದಿವ್ಯ ಉಪಸ್ಥಿತಿ ಹಾಗೂ ತುಂಬಿದ ಭಕ್ತರ ಉಪಸ್ಥಿತಿಯೊಂದಿಗೆ ಮಂಗಲಾಚರಣೆ ನಡೆಯಿತು. ಸುಮಾರು 150 ಕ್ಕೂ ಹೆಚ್ಚಿನ ಭಜನಾತಂಡಗಳು ಭಾಗವಹಿಸಿ ಈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವು.
ಬಳಿಕ ಸವಿಜೀವನಂ ನೃತ್ಯ ಕಲಾಕ್ಷೇತ್ರ ಕೊಂಡೆವೂರು ಇವರ ನೃತ್ಯ ವೈವಿಧ್ಯ ಮತ್ತು ಶ್ರೀಕೃಷ್ಣ ಲೀಲಾಮೃತಂ ನೃತ್ಯರೂಪಕಗಳು ಭಕ್ತಾದಿಗಳ ಮನಸೂರೆಗೊಂಡವು. ನೃತ್ಯ ವೈವಿಧ್ಯದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿ ಕಲಾವಿದರಿಗೆ ಶ್ರೀಗಳು ಸ್ಮರಣಿಕೆ ನೀಡಿ ಆಶೀರ್ವದಿಸಿದರು.