ಕಾಸರಗೋಡು: ಕೂಡ್ಲು ಗಂಗೆ ದೇವರಗುಡ್ಡೆ ಶ್ರೀಶೈಲ ಶ್ರೀಮಹಾದೇವ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಹಾಗೂ ಅತಿರುದ್ರ ಮಹಾಯಾಗ ಮಾರ್ಚ್ 2ರಂದು ಸಂಪನ್ನಗೊಳ್ಳಲಿದೆ. ಬೆಳಗ್ಗೆ 6ರಿಂದ ಗಣಪತಿ ಹೋಮ, ಅಷ್ಟಬಂಧ ಲೇಪನ, ಬ್ರಹ್ಮಕಲಶಾಭಿಷೇಕ ನಡೆಯಲಿದೆ.
ಸಂಜೆ 7ಕ್ಕೆ ವಿಶ್ವರೂಪ ದರ್ಶನ, ಲಕ್ಷದೀಪೋತ್ಸವ ನಡೆಯುವುದು. ಶ್ರೀಶಿವಶೈಲಂ ಯಾಗ ಶಾಲೆಯಲ್ಲಿ ಬೆಳಗ್ಗೆ 6.30ರಿಂದ ರುದ್ರ ಪಾರಾಯಣ, ಹೋಮ, ವಸೋರ್ಧಾರ ಪೂರ್ಣಾಹುತಿ, ಅತಿರುದ್ರ ಮಹಾಯಾಗದ ಪೂರ್ಣಾಹುತಿ ಶ್ರೀಮಹಾದೇವ ಯಾಗಮಂಟಪದಲ್ಲಿ ಸಂಜೆ 4ಕ್ಕೆ ಸಾಮರಸ್ಯ ಸಂಗಮ ಆಚಾರ್ಯವರ್ಯರಿಗೆ ಗೌರವಾರ್ಪಣೆ, ಸಮಾರೋಪ ಸಮಾರಂಭ ನಡೆಯುವುದು.