ಕುಂಬಳೆ: ಏಪ್ರಿಲ್ 10 ರಿಂದ 12ರ ವರೆಗೆ ಅನಂತಪುರ ಶ್ರೀಅನಂತಪದ್ಮನಾಭ ದೇವಾಲಯ ಪರಿಸರದಲ್ಲಿ ನಡೆಯಲಿರುವ ಮೊತ್ತಮೊದಲ ಕನ್ನಡ ಸಿರಿ ಸಮ್ಮೇಳನದ ಪ್ರಥಮ ದಿನವಾದ ಏ.10 ರಂದು ಅಪರಾಹ್ನ 2 ಕ್ಕೆ ನಾರಾಯಣಮಂಗಲ ಶ್ರೀಚೀರುಮಬಾ ಭಗವತಿ ಕ್ಷೇತ್ರ ಪರಿಸರದಿಂದ ವರ್ಣರಂಜಿತ ಕನ್ನಡ ಸಿರಿ ಮೆರವಣಿಗೆ ಅನಂತಪುರ ಸಮ್ಮೇಳನ ನಗರಿಯತ್ತ ಹೊರಡಲಿದೆ. ಮೆರವಣಿಗೆಯಲ್ಲಿ ವಿವಿಧ ರಾಜ್ಯಗಳ ಜಾನಪದ ಕಲಾವಿದರ ಕುಣಿತಗಳೊಡಗೂಡಿ ಭಾಗವಹಿಸಿ ಮೆರುಗು ನೀಡುವರು.
ಈ ಮೆರವಣಿಗೆಯಲ್ಲಿ ಸ್ಥಳೀಯರು ವೈಯುಕ್ತಿಕವಾಗಿ ಅಥವಾ ಸಂಘಸಂಸ್ಥೆಗಳ ಮೂಲಕ ಗರಿಷ್ಠ ಸಂಖ್ಯೆಯಲ್ಲಿ ಭಾಗವಹಿಸುವುದರೊಂದಿಗೆ ಸ್ತಬ್ದಚಿತ್ರ ಸಹಿತ ನಮ್ಮ ಸಾಂಸ್ಕøತಿಕ ಶ್ರೀಮಂತಿಕೆಯ ಸಂಕೇತಗಳ ಪ್ರದರ್ಶನಗಳೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಬಹುದಾಗಿದೆ. ಆಸಕ್ತ ತಂಡಗಳು, ವ್ಯಕ್ತಿಗಳು ಮಾ.30 ರ ಮೊದಲು ಸಂಚಾಲಕರು ಮೆರವಣಿಗೆ ಸಮಿತಿ. ರಾಷ್ಟ್ರೀಯ ಕನ್ನಡ ಸಿರಿ ಸಮ್ಮೇಳನ ಕಾರ್ಯಾಲಯ. ಮಾಧವ ಪೈ ಕಾಂಪ್ಲೆಕ್ಸ್.ಬದಿಯಡ್ಕ ರಸ್ತೆ.ಕುಂಬಳೆ ಎಂಬ ವಿಳಾಸಕ್ಕೆ ಅರ್ಜಿಸಲ್ಲಿಸಲು ವಿನಂತಿಸಲಾಗಿದೆ.