ಕಾಸರಗೋಡು: ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ವಾರ್ಷಿಕ ಮಹೋತ್ಸವ ಧ್ವಜಾರೋಹಣದೊಂದಿಗೆ ಆರಂಭಗೊಂಡಿತು. ಮಾ.11 ರ ವರೆಗೆ ವಿವಿಧ ಕಾರ್ಯಕ್ರಮಗಳ ನಡೆಯುವುದು.
ಮಾ.4 ರಂದು ಬೆಳಗ್ಗೆ ಉಷ:ಪೂಜೆ, ಗಣಹೋಮ, ನವಕ ಇತ್ಯಾದಿಯ ಬಳಿಕ ಧ್ವಜಾರೋಹಣ, ಉತ್ಸವ ಬಲಿ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ದೀಪಾರಾಧನೆ, ಭಜನೆ, ರಾತ್ರಿ ಶ್ರೀ ಭೂತಬಲಿ, ಪೂಜೆ, ನೃತ್ಯ ಕಾರ್ಯಕ್ರಮ, ಉತ್ಸವ ಬಲಿ ಜರಗಿತು. ಮಾ.5 ರಂದು ಬೆಳಗ್ಗೆ ಉತ್ಸವ ಬಲಿ, ತುಲಾಭಾರ, ಮಹಾಪೂಜೆ, ಬಲಿ, ಪ್ರಸಾದ ವಿತರಣೆ, ಸಂಜೆ ದೀಪಾರಾಧನೆ, ಭಜನೆ, ರಾತ್ರಿ ಶ್ರೀ ಭೂತಬಲಿ, ಪೂಜೆ, ಉತ್ಸವ ಬಲಿ ಜರಗಿತು.