ಕುಂಬಳೆ: ವಿದ್ಯಾರ್ಥಿಗಳು ಪರೀಕ್ಷೆಯನ್ನು ಭಯದಿಂದ ಎದುರಿಸುವ ಬದಲು ಕುತೂಹಲದಿಂದ ನೋಡಿದಲ್ಲಿ ಪರೀಕ್ಷೆ ಅತ್ಯಂತ ಸುಲಭವಾಗಿ ಮಾರ್ಪಡಲು ಸಾಧ್ಯ. ಪರೀಕ್ಷಾ ಸಂದರ್ಭದಲ್ಲಿ ಬೇರೇನೂ ಯೋಚಿಸದೆ ಪಾಠಗಳನ್ನು ಚೆನ್ನಾಗಿ ಮನನ ಮಾಡುವ ಅಭ್ಯಾಸ ರೂಢಿಸಬೇಕು ಇಂತಹ ಅಭ್ಯಾಸಗಳು ಪರೀಕ್ಷೆಯನ್ನು ಸುಲಭಗೊಳಿಸುತ್ತದೆ ಎಂದು ಕುಂಬಳೆ ಸರ್ಕಾರಿ ಪ್ರೌಢಶಾಲಾ ಗಣಿತ ಅಧ್ಯಾಪಕಿ ಉಮಾ ಶೇಡಿಗುಮ್ಮೆ ಹೇಳಿದರು.
ಅವರು ಶ್ರೀ ಭಾರತೀ ವಿದ್ಯಾಪೀಠ ಮುಜುಂಗಾವಿನ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಶನಿವಾರ ಆಯೋಜಿಸಲಾದ ಪರೀಕ್ಷಾ ಪೂರ್ವತಯಾರಿ ಮಾಹಿತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಹೇಗೆ ಎದುರಿಸಲು ಬೇಕಾದ ಮಾಹಿತಿಗಳನ್ನು ನೀಡಿ, ಸಲಹೆಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ವಿದ್ಯಾಲಯದ ಆಡಳಿತಾಧಿಕಾರಿ, ಅಧ್ಯಾಪಕರು ಉಪಸ್ಥಿತರಿದ್ದು ಕಾರ್ಯಕ್ರಮದ ಸಹಕರಿಸಿದರು.