ಮುಳ್ಳೇರಿಯ: ಆದೂರು ಸರ್ಕಾರಿ ಪ್ರೌಢಶಾಲೆಯಲ್ಲಿ ತರಬೇತಿ ಪೂರ್ತಿಗೊಳಿಸಿದ ಮೂರನೇ ಸ್ಟುಡೆಂಟ್ ಪೆÇಲೀಸ್ ತಂಡದ ಪಾಸಿಂಗ್ ಔಟ್ ಪರೇಡ್ ನಡೆಯಿತು. ಪ್ಲಟೂನ್ ಕಮಾಂಡರ್ ಆದ ಫಾತಿಮತ್ ಅಸ್ಮಿನ ಪರ್ವೀನ್ ಮೊಹಮ್ಮದ್ ಶಾನಿದ್ ರವರು ಪರೇಡ್ ಮುನ್ನಡೆಸಿದರು. ತಯ್ಯೇಬ ಪರೇಡಿಗೆ ನೇತೃತ್ವ ನೀಡಿದರು. ಆದೂರು ಪೆÇಲೀಸ್ ಠಾಣಾಧಿಕಾರಿ ಟಿ.ಕೆ. ಪ್ರೇಮ್ ಸದನ್ ವಂದನೆ ಸ್ವೀಕರಿಸಿದರು.
ಕಾರಡ್ಕ ಗ್ರಾಮ ಪಂಚಾಯತಿ ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ ಜನನಿ, ಮಾತೃಸಂಘದ ಅಧ್ಯಕ್ಷ ಮಹಮ್ಮದ್ ಪಟ್ಟಾಂಗ್, ಎಸ್. ಎಂ. ಸಿ. ಅಧ್ಯಕ್ಷ ಹನೀಫಾ ಪ್ರಾಂಶುಪಾಲ ರಂಜಿತ್, ಸಿ. ಪಿ. ಒ ನವ ಪ್ರಸಾದ್, ಸುಭಾಷ್, ಎ.ಸಿ. ಪಿ. ಒ ಕನಕಂ, ಡ್ರಿಲ್ ಇನ್ಸ್ಟ್ರಕ್ಟರ್ ವೇಣುಗೋಪಾಲ್, ಅಧ್ಯಾಪಕರಾದ ನಾರಾಯಣ ಭಟ್, ಯೂಸುಫ್ ಶುಭಹಾರೈಸಿದರು. ಉತ್ತಮ ಕೆಡೆಟ್ ಗಳಿಗಿರುವ ಪ್ರಶಸ್ತಿಯನ್ನು ವಿತರಿಸಲಾಯಿತು.