HEALTH TIPS

ಕೋವಿಡ್-19 ಪ್ರಭಾವ ಇನ್ನಷ್ಟು ತಿಂಗಳು ಮುಂದುವರಿಯಲಿದೆ, ಆರ್ಥಿಕತೆ ಪುನಶ್ಚೇತನಕ್ಕಾಗಿ ಹೋರಾಡಬೇಕಿದೆ: ಪ್ರಧಾನಿ ಮೋದಿ

 
        ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದು ಈ ವೇಳೆ ಅವರು  ಕೋವಿಡ್-19 ಪ್ರಭಾವ ಇನ್ನಷ್ಟು ತಿಂಗಳು ಮುಂದುವರೆಯಲಿದೆ. ಇದರಿಂದ ಆರ್ಥಿಕತೆ ಕುಸಿಯಲಿದ್ದು ಮತ್ತೆ ಪುನಶ್ಚೇತನಕ್ಕಾಗಿ ಹೋರಾಡಬೇಕಿದೆ ಎಂದು ಹೇಳಿದ್ದಾರೆ.
      ಈ ಸಭೆಯಲ್ಲಿ ಪ್ರಧಾನಿ ಹಾಗೂ ಮುಖ್ಯಮಂತ್ರಿಗಳು 40 ದಿನಗಳ ಲಾಕ್ ಡೌನ್ ನಂತರ ಕೋವಿಡ್ ವಿರುದ್ಧ ಭಾರತದ ಹೋರಾಟದ ರೂಪುರೇಷೆ ಕುರಿತು ಚರ್ಚಿಸಿದ್ದಾರೆ. ಇದೇ ವೇಳೆ ರಾಜ್ಯಗಳ ಮುಖ್ಯಮಂತ್ರಿಗಳಿಗೆ ರೆಡ್ ಜೋನ್ ಗಳಲ್ಲಿ ಲಾಕ್ ಡೌನ್ ಅನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆದೇಶಿಸಿದ್ದಾರೆ. ಹಲವರು ರಾಜ್ಯಗಳು ಸೋಂಕು ಕಡಿಮೆಯಿರುವ ಹಾಗೂ ಸುರಕ್ಷಿತ ವಲಯಗಳಲ್ಲಿ ಲಾಕ್ ಡೌನ್ ಸಡಿಲಗೊಳಿಸಬೇಕು ಎಂದು ಮನವಿ ಮಾಡಿವೆ. ಆದರೆ, ಸಾರ್ವಜನಿಕ ಸಭೆಗಳು, ಶೈಕ್ಷಣಿಕ ಸಂಸ್ಥೆಗಳ ಮೇಲೆ ನಿಬರ್ಂಧ ಮುಂದುವರಿಯಬೇಕು, ಅಂತಾರಾಜ್ಯ ಸಾರಿಗೆ ನಿಷೇಧಿಸಬೇಕು ಮತ್ತು ಕೇವಲ ವಲಸಿಗ ಕಾರ್ಮಿಕರಿಗೆ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಮತ್ತು ಸಾಮಾಜಿಕ ಅಂತರವನ್ನು ಕಠಿಣವಾಗಿ ಪಾಲಿಸಬೇಕು ಎಂದು ಸಲಹೆ ನೀಡಿದ್ದಾರೆ.
      'ಡು ಗಾಜ್ ಡೋರ್ರಿ' ಎಂಬ ಮಂತ್ರವನ್ನು ಪುನರುಚ್ಚರಿಸಿದ ಅವರು, "ಮುಂದಿನ ದಿನಗಳಲ್ಲಿ ಮಾಸ್ಕ್ ಮತ್ತು ಮುಖ ಮುಚ್ಚುವ ಬಟ್ಟೆಗಳು ನಮ್ಮ ಜೀವನದ ಭಾಗವಾಗುತ್ತವೆ  ಎಂದು ಹೇಳಿದರು. ಕಳೆದ ಒಂದೂವರೆ ತಿಂಗಳಲ್ಲಿ ದೇಶವು ಸಾವಿರಾರು ಜೀವಗಳನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದರಿಂದ ಲಾಕ್‍ಡೌನ್ ಸಕಾರಾತ್ಮಕ ಫಲಿತಾಂಶವನ್ನು ನೀಡಿದೆ ಎಂದು ಪ್ರಧಾನಿ ಒತ್ತಿಹೇಳಿದ್ದಾರೆ. ಭಾರತದ ಜನಸಂಖ್ಯೆಯು ಹಲವಾರು ದೇಶಗಳ ಒಟ್ಟು ಜನಸಂಖ್ಯೆಗೆ ಹೋಲಿಸಬಹುದು. ಭಾರತ ಸೇರಿದಂತೆ ಅನೇಕ ದೇಶಗಳಲ್ಲಿನ ಪರಿಸ್ಥಿತಿ ಮಾರ್ಚ್ ಆರಂಭದಲ್ಲಿ ಬಹುತೇಕ ಹೋಲುತ್ತದೆ. ಆದಾಗ್ಯೂ, ಸಮಯೋಚಿತ ಕ್ರಮಗಳಿಂದಾಗಿ, ಭಾರತವು ಅನೇಕ ಜನರನ್ನು ರಕ್ಷಿಸಲು ಸಾಧ್ಯವಾಯಿತು ಎಂದರು.
ಇದರ ಜೊತೆಗೆ ವೈರಸ್ ಅಪಾಯವು ದೂರವಾಗಿದೆ ಮತ್ತು ನಿರಂತರ ಜಾಗರೂಕತೆಗೆ ಕಳೆದುಕೊಳ್ಳಬೇಡಿ ಎಂದು ಪ್ರಧಾನಿ ಮೋದಿ ಹೇಳಿದರು. ಅನೇಕರು ಕೆಮ್ಮು ಮತ್ತು ಶೀತ ಅಥವಾ ರೋಗಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಸ್ವಯಂ ಘೋಷಣೆ ಮಾಡಿ ಪರೀಕ್ಷೆಗಳಿಗೆ ಒಳಪಡುತ್ತಿರುವುದು ಸ್ವಾಗತಾರ್ಹ ಸಂಕೇತವಾಗಿದೆ  ಎಂದರು.
            ಕೊರೋನಾ ಕಾಲಿಡದ 300 ಜಿಲ್ಲೆಗಳು ಪವಿತ್ರ ಜಿಲ್ಲೆಗಳು: ಪ್ರಧಾನಿ ಮೋದಿ
    ದೇಶದ 300ರಕ್ಕೂ ಹೆಚ್ಚು ಜಿಲ್ಲೆಗಳ್ಲಲಿ ಈವರೆಗೆ ಯಾವುದೆ ಕೊರೋನಾ ಸೋಂಕಿನ ಪ್ರಕರಣ ವರದಿಯಾಗಿಲ್ಲ ಇವುಗಳನ್ನು ಪವಿತ್ರ ಜಿಲ್ಲೆಗಳೆಂದು ಪರಿಗಣಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.
      ಮುಖ್ಯಮಂತ್ರಿಗಳೊಂದಿಗಿನ ವಿಡಿಯೋ ಸಂವಾದದಲ್ಲಿ ಮತನಾಡಿದ ಅವರು ಜಿಲ್ಲೆಗಳಲ್ಲಿ ಮುಂದೆಯೂ ಸಾಮಾಜಿಕ ಅಂತರ ಕಾಪಾಡಿಕೊಂಡು ಕರೋನ ಸೋಂಕು ಕಾಣಿಸಿಕೊಳ್ಳದಂತೆ ನೋಡಿಕೊಳ್ಳುವ ಹೊಣೆ ಎಲ್ಲರ ಮೇಲೂ ಇದೆ ಎಂದು ಅವರು ಒತ್ತಿ ಹೇಳಿದರು.
      ಈ ಜಿಲ್ಲೆಗಳಂತೆ ಹಸಿರು ವಲಯಗಳನ್ನು ವಿಸ್ತರಿಸುವ ಅವಶ್ಯಕತೆಯಿದೆ ಏಕೆಂದರೆ ಮುಂದಿನ ದಿನಗಳಲ್ಲಿ ಈ ಪ್ರದೇಶಗಳಲ್ಲಿ ಏನಾಗುತ್ತದೆ ಎಂಬುದು 'ಭವಿಷ್ಯದಲ್ಲಿ ನಮ್ಮ ಜೀವನಕ್ಕೆ ದಾರಿ ಮಾಡಿಕೊಡಲಿದೆ ಎಂದರು. ಮಾತನಾಡಲಾಗದ ಕೆಲವು ಮುಖ್ಯಮಂತ್ರಿಗಳು ಲಿಖಿತ ಸಲಹೆಗಳನ್ನು ಕಳುಹಿಸಿದ್ದಾರೆ ಮತ್ತು ತಜ್ಞರಿಂದಲೂ ಅನೇಕ ಸಲಹೆಗಳು ಬಂದಿವೆ ಎಂದರು. 'ನಮ್ಮ ಈಗಿನ ಆದ್ಯತೆಯ ಮಂತ್ರ ಎಂದರೆ ಕೆಂಪು ಬಣ್ಣವನ್ನು ಕಿತ್ತಳೆ ಬಣ್ಣಕ್ಕೆ, ಕಿತ್ತಳೆ ಬಣ್ಣವನ್ನು ಹಸಿರು ಬಣ್ಣಕ್ಕೆ ಪರಿವರ್ತಿಸುವುದು' ಎಂದು ಪಿಎಂ ಮೋದಿ ಸಭೆಯಲ್ಲಿ ಹೇಳಿದರು. ಬಿಕ್ಕಟ್ಟಿನ ಈ ಕ್ಷಣವು 'ಸುಧಾರಣೆಗೆ ಒಂದು ಅವಕಾಶ ನೀಡಿದೆ' ಎಂದು ಅವರು ಹೇಳಿದರು.
      ಸಭೆಯಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿಗಳೆದಂರೆ ಬಿ.ಎಸ್. ಯಡಿಯೂರಪ್ಪ (ಕರ್ನಾಟಕ) ಅರವಿಂದ್ ಕೇಜ್ರಿವಾಲ್ (ದೆಹಲಿ), ಪಿಣರಾಯಿ ವಿಜಯನ್ (ಕೇರಳ), ಉದ್ಧವ್ ಠಾಕ್ರೆ (ಮಹಾರಾಷ್ಟ್ರ), ಇ.ಕೆ.ಪಳನಿಸ್ವಾಮಿ (ತಮಿಳುನಾಡು), ಕಾನ್ರಾಡ್ ಸಂಗ್ಮಾ (ಮೇಘಾಲಯ) ತ್ರಿವೇಂದ್ರ ಸಿಂಗ್ ರಾವತ್ (ಉತ್ತರಾಖಂಡ್) ). ಪ್ರಧಾನಿ ಜೊತೆ ಇದ್ದವರ ಪ್ರಮುಖರ ಪೈಕಿ ಗೃಹ ಸಚಿವ ಅಮಿತ್ ಶಾ, ಆರೋಗ್ಯ ಸಚಿವ ಹರ್ಷ್ ವರ್ಧನ್ ಮತ್ತು ಪಿಎಂಒ ಕಚೇರಿಯ ಅಧಿಕಾರಿಗಳು ಮತ್ತು ಕೇಂದ್ರ ಆರೋಗ್ಯ ಸಚಿವಾಲಯದ ಉನ್ನತ ಅಧಿಕಾರಿಗಳು ಹಾಜರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries