HEALTH TIPS

ಕೊರೋನಾ ವಿರುದ್ಧದ ಹೋರಾಟಕ್ಕಾಗಿ ಭಾರತಕ್ಕೆ ಮತ್ತೆ 3 ಮಿಲಿಯನ್ ಡಾಲರ್ ನೆರವು ಘೋಷಿಸಿದ ಅಮೆರಿಕ

 
      ನವದೆಹಲಿ: ಭಾರತದ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಬೆಂಬಲ ನೀಡವುದಕ್ಕಾಗಿ ಅಮೆರಿಕ ಸರ್ಕಾರ ಮತ್ತೆ ಹೆಚ್ಚುವರಿಯಾಗಿ ಮೂರು ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ನೆರವಿನ ಪ್ಯಾಕೇಜ್ ನ್ನು ಘೋಷಿಸಿದೆ.
     ಕಳೆದ ಏಪ್ರಿಲ್ 6ರಂದು ಕೊವಿಡ್ -19 ವಿರುದ್ಧದ  ಹೋರಾಟಕ್ಕಾಗಿ ಭಾರತಕ್ಕೆ ಅಂತಾರಾಷ್ಟ್ರೀಯ ಅಭಿವೃದ್ಧಿಗಾಗಿ ಇರುವ ಅಮೆರಿಕಾ ಏಜೆನ್ಸಿ ಯುಎಸ್ ಎಐಡಿ ಮೂಲಕ 2. 9 ಬಿಲಿಯನ್ ಡಾಲರ್ ಮೊತ್ತದ ನೆರವು ಘೋಷಿಸಿತ್ತು. ಕೊವಿಡ್-19 ನಿಯಂತ್ರಿಸಲು ಭಾರತಕ್ಕೆ ಹೆಚ್ಚುವರಿಯಾಗಿ 3 ಮಿಲಿಯನ್ ಡಾಲರ್ ನೆರವು ನೀಡಲಾಗಿದೆ ಎಂದು ಭಾರತದಲ್ಲಿರುವ ಅಮೆರಿಕ ರಾಯಭಾರಿ ಕೆನ್ನೆತ್ ಜಸ್ಟರ್ ಅವರು ಹೇಳಿದ್ದಾರೆ. ಕೊವಿಡ್-19 ವಿರುದ್ಧದ ನಿರಂತರ ಪ್ರಯತ್ನಗಳಲ್ಲಿ ಭಾರತವನ್ನು ಬೆಂಬಲಿಸುವ ಈ ಹೆಚ್ಚುವರಿ ನೆರವು ಅಮೆರಿಕ ಮತ್ತು ಭಾರತದ ನಡುವಿನ ಬಲವಾದ ಮತ್ತು ನಿರಂತರ ಪಾಲುದಾರಿಕೆಯ ಮತ್ತೊಂದು ಉದಾಹರಣೆಯಾಗಿದೆ ಎಂದು ಅಮೆರಿಕ ರಾಯಭಾರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
    ಈ ನಿಧಿಯಿಂದ ಕೊವಿಡ್-19 ಸೋಂಕು ಹರಡದಂತೆ ತಡೆಗಟ್ಟಲು ಭಾರತಕ್ಕೆ ನೆರವಾಗಲಿದೆ. ಸೋಂಕು ಪೀಡಿತರಿಗೆ ಚಿಕಿತ್ಸೆ ಒದಗಿಸಲು ಮತ್ತು ರೋಗ ನಿಯಂತ್ರಣ ನಿಟ್ಟಿನಲ್ಲಿ ಅಗತ್ಯ ಸಾಧನ ಸಲಕರಣೆಗಳ ಪೂರೈಕೆಗೆ ನೆರವಾಗಲಿದೆ ಎಂದು ಅವರು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries