ನಾಗ್ಪುರ: "ಸಿಟ್ಟಾಗಬೇಡಿ, ಕ್ರೋಧಗೊಳ್ಳಬೇಡಿ. ''ಭಾರತ್ ತೇರೇ ತುಕ್ಡೇ ಹೋಂಗೆ" ಸದಸ್ಯರು ಇದ್ದು, ಸಾರ್ವಜನಿಕರನ್ನು ಪ್ರಚೋದಿಸುತ್ತಿದ್ದಾರೆ. ಇದರಲ್ಲಿ ಕೆಲವು ರಾಜಕಾರಣಿಗಳು ಒಳಗೊಂಡಿದ್ದಾರೆ. ಯಾರೋ ಕೆಲವು ವ್ಯಕ್ತಿಗಳ ತಪ್ಪಿಗೆ ಇಡೀ ಸಮುದಾಯವನ್ನು ಕೆಟ್ಟ ದೃಷ್ಟಿಯಿಂದ ನೋಡಲು ಸಾಧ್ಯವಿಲ್ಲ" ಎಂದು ಮೋಹನ್ ಭಾಗ್ವತ್ ಹೇಳಿದ್ದಾರೆ.
ದೇಶದಲ್ಲಿ ಕೊರೊನಾ ಲಾಕ್ ಡೌನ್ ಘೋಷಣೆ ಮಾಡಿದ ಮೇಲೆ ಮೊದಲ ಬಾರಿಗೆ ಅವರು ಮಾತನಾಡಿದ್ದಾರೆ. ಅಕ್ಷಯ ತೃತೀಯದ ದಿನವಾದ ಭಾನುವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಮುಖ್ಯಸ್ಥ ಮೋಹನ್ ಭಾಗ್ವತ್ ಮಾತನಾಡಿದ್ದು, ಲಾಕ್ ಡೌನ್ ನ ನಿಬರ್ಂಧಗಳನ್ನು ಅನುಸರಿಸಿ. ಅಧಿಕಾರಿಗಳ ಜತೆಗೆ ಸಹಕರಿಸಿ ಎಂದು ಹೇಳಿದ್ದಾರೆ.
ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಅಕ್ಷಯ ತೃತೀಯ ಪವಿತ್ರವಾದ ದಿನ. "ಪ್ರಸ್ತುತ ಪರಿಸ್ಥಿತಿ ಮತ್ತು ನಮ್ಮ ಪಾತ್ರ" ಎಂಬ ವಿಚಾರದ ಬಗ್ಗೆ ಅವರು ಮಾತನಾಡಿದ್ದಾರೆ. ಕೊರೊನಾ ವೈರಾಣು ನಿಬರ್ಂಧದ ಮಧ್ಯೆಯೂ ಜೀವನ ಮಾಮೂಲಿನಂತೆ ಸಾಗಿದೆ. ಪ್ರತಿಯೊಬ್ಬರು ಕಷ್ಟದಲ್ಲಿರುವವರ ನೆರವಿಗೆ ಕೈ ಚಾಚಬೇಕು. ಈ ಸಂದರ್ಭದಲ್ಲಿ ದೇಶಕ್ಕಾಗಿ ಕೆಲಸ ಮಾಡಬೇಕು. ಹೆಸರಿಗಾಗಿಯೇ ಅಥವಾ ನಮ್ಮ ಅಹಂಕಾರವನ್ನು ತಣಿಸಿವುದಕ್ಕೆ ಅಲ್ಲ. ಏಕೆಂದರೆ ದೇಶಕ್ಕೆ ಈಗ ಅಗತ್ಯವೇ ಅದು ಎಂದಿದ್ದಾರೆ.
ಆರೆಸ್ಸೆಸ್ ಮಾಹಿತಿ ಪ್ರಕಾರ, ದೇಶದ 55 ಸಾವಿರ ಸ್ಥಳಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಸ್ವಯಂಸೇವಕರು ಕೊರೊನಾ ಬಿಕ್ಕಟ್ಟಿನ ವೇಳೆ ಕೆಲಸ ಮಾಡುತ್ತಿದ್ದಾರೆ. ಏಪ್ರಿಲ್ 24ರ ತನಕ ಆರೆಸ್ಸೆಸ್ ನಿಂದ 33 ಲಕ್ಷ ದಿನಸಿ ಕಿಟ್ ಗಳು ಹಾಗೂ 2 ಕೋಟಿ ಆಹಾರ ಪೆÇಟ್ಟಣಗಳನ್ನು ವಿತರಿಸಲಾಗಿದೆ.
ಅವರ ಭಾಷಣದ ಪ್ರಮುಖಾಂಶಗಳು ಹೀಗಿವೆ:
* ದಾರಿಗಳನ್ನು ಯೋಚಿಸಿ. ಆ ಮೂಲಕ ಮಕ್ಕಳಿಗೆ ತಿಳಿಹೇಳಬಹುದು. ಅವರು ಸಾಮಾಜಿಕ ಅಂತರದ ನಿಯಮಗಳನ್ನು ಅನುಸರಿಸುತ್ತಾರೆ.
* 130 ಕೋಟಿ ಭಾರತೀಯರು ನಮ್ಮ ಸೋದರರು
* ನಾವು ಯಾವುದೇ ಜನರನ್ನು ಬೇರೆ ಬೇರೆ ಎಂದು ತಾರತಮ್ಯ ಮಾಡುವುದಿಲ್ಲ.
* ಸನ್ಯಾಸಿಗಳ ಮೇಲೆ ಗುಂಪು ಹಲ್ಲೆ ಮಾಡಲಾಗಿದೆ. ಜನರು ಯಾಕೆ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುತ್ತಾರೆ. ಪೆÇಲೀಸರು ಏನು ಮಾಡುತ್ತಿದ್ದಾರೆ?
* ಸರ್ಕಾರ ಮತ್ತು ಆಡಳಿತವು ಸರಿಯಾದ ಸಮಯಕ್ಕೆ ಕೊರೊನಾ ವೈರಾಣು ತಡೆಯುವ ಕ್ರಮಗಳನ್ನು ಜಾರಿಗೆ ತಂದಿವೆ.
* ಯಾರಿಗೆ ಅಗತ್ಯ ಇದೆಯೋ ಅಂಥ ಪ್ರತಿಯೊಬ್ಬರಿಗೂ ನೆರವು ನೀಡಬೇಕು.
* ನೀವು ಸುರಕ್ಷಿತವಾಗಿರುವ ಸಲುವಾಗಿ ಎಲ್ಲ ಕಾನೂನುಗಳನ್ನು ಪಾಲಿಸಿ.
* ಕೊರೊನಾದಿಂದ ಬಳಸುತ್ತಿರುವವರಿಗೆ ನಾವು ಸಹಾಯ ಮಾಡಬೇಕು.
* ಸಾಮಾಜಿಕ ಅಂತರ ಹಾಗೂ ಮುಖಗವಸು (ಫೇಸ್ ಮಾಸ್ಕ್) ಧರಿಸುವುದು ಬಹಳ ಮುಖ್ಯ.
* ಕೊರೊನಾ ವೈರಾಣುವನ್ನು ತಡೆಯುವ ಭಾಗವಾಗಿ ಆರೆಸ್ಸೆಸ್ ನ ಎಲ್ಲ ಕಾರ್ಯಕ್ರಮಗಳನ್ನು ನಿಲ್ಲಿಸಲಾಗಿದೆ.