ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ ಇಬ್ಬರಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದೆ. ಇದೇ ವೇಳೆ ಮೂವರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಈ ವರೆಗೆ 178 ಮಂದಿಗೆ ಸೋಂಕು ಬಾಧಿಸಿದ್ದು, ಈ ಪೈಕಿ 165 ಮಂದಿ ಗುಣಮುಖರಾಗಿದ್ದಾರೆ. 13 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾಸರಗೋಡಿನಲ್ಲಿ ಕೊರೊನಾ ಬಾಧಿಸಿದ ವ್ಯಕ್ತಿಗಳಲ್ಲೊಬ್ಬರು ದೃಶ್ಯ ಮಾಧ್ಯಮ ಸಿಬ್ಬಂದಿ ಹಾಗು ಇನ್ನೋರ್ವ 29 ರ ಹರೆಯದ ಚೆಮ್ನಾಡ್ ನಿವಾಸಿಯಾಗಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 1930 ಮಂದಿ ನಿಗಾದಲ್ಲಿದ್ದಾರೆ. ಈ ಪೈಕಿ 1901 ಮಂದಿ ಮನೆಗಳಲ್ಲೂ, 29 ಮಂದಿ ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದಾರೆ. ಹೊಸದಾಗಿ ಒಬ್ಬರನ್ನು ಐಸೊಲೇಷನ್ ವಾರ್ಡ್‍ಗೆ ಸೇರಿಸಲಾಗಿದೆ. ಗುಣಮುಖರಾದ ಮೂವರು ಉಕ್ಕಿನಡ್ಕದಲ್ಲಿರುವ ಕಾಸರಗೋಡು ಮೆಡಿಕಲ್ ಕಾಲೇಜಿನಿಂದ ಬಿಡುಗಡೆಗೊಂಡಿದ್ದಾರೆ.
ಕೇರಳದಲ್ಲಿ 10 ಮಂದಿಗೆ ಸೋಂಕು :
ಕೇರಳ ರಾಜ್ಯದಲ್ಲಿ ಬುಧವಾರ 10 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದ್ದು, 10 ಮಂದಿ ಗುಣಮುಖರಾಗಿದ್ದಾರೆ. ಕೊಲ್ಲಂ ಜಿಲ್ಲೆಯಲ್ಲಿ 6, ತಿರುವನಂತಪುರ ಮತ್ತು ಕಾಸರಗೋಡು ಜಿಲ್ಲೆಯಲ್ಲಿ ತಲಾ ಇಬ್ಬರಿಗೆ ಸೋಂಕು ಬಾಧಿಸಿದೆ. ರೋಗ ಬಾಧಿತರಲ್ಲಿ ಮೂವರು ಆರೋಗ್ಯ ಕಾರ್ಯಕರ್ತರು. ಕಾಸರಗೋಡಿನಲ್ಲಿ ದೃಶ್ಯಮಾಧ್ಯಮ ಸಿಬ್ಬಂದಿಗೆ ರೋಗ ದೃಢಗೊಂಡಿದೆ. ಕೊಲ್ಲಂನ ಐವರಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. ಕೊಲ್ಲಂನಲ್ಲಿ ರೋಗ ಬಾಧಿಸಿದ ಒಬ್ಬರು ಆಂಧ್ರದಿಂದಲೂ, ತಿರುವನಂತಪುರದ ಒಬ್ಬರು ತಮಿಳುನಾಡಿನಿಂದಲೂ ಬಂದವರು. ಕಾಸರಗೋಡಿನಲ್ಲಿ ಇಬ್ಬರಿಗೆ ಸಂಪರ್ಕದ ಮೂಲಕ ರೋಗ ಹರಡಿದೆ. ಕಾಸರಗೋಡು, ಕಣ್ಣೂರು, ಕಲ್ಲಿಕೋಟೆಯಲ್ಲಿ ತಲಾ ಮೂವರು ಹಾಗು ಪತ್ತನಂತಿಟ್ಟದಲ್ಲಿ ಒಬ್ಬರು ಗುಣಮುಖರಾಗಿದ್ದಾರೆ. ತೃಶ್ಶೂರು, ಆಲಪ್ಪುಳ, ವಯನಾಡು ಜಿಲ್ಲೆಗಳಲ್ಲಿ ಯಾರೂ ಕೋವಿಡ್ ಬಾ„ಸಿದವರಿಲ್ಲ. 102 ಹಾಟ್‍ಸ್ಪಾಟ್‍ಗಳಿವೆ.
ರಾಜ್ಯದಲ್ಲಿ ಈ ವರೆಗೆ ಒಟ್ಟು 495 ಮಂದಿಗೆ ರೋಗ ಬಾ„ಸಿದ್ದು, ಪ್ರಸ್ತುತ ವಿವಿಧ ಆಸ್ಪತ್ರೆಗಳಲ್ಲಿ 123 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ 20673 ಮಂದಿ ನಿಗಾದಲ್ಲಿದ್ದು, 20172 ಮಂದಿ ಮನೆಗಳಲ್ಲೂ, 51 ಮಂದಿ ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದಾರೆ. ಇದು ವರೆಗೆ 24952 ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಕಳುಹಿಸಿದ್ದು, ಲಭ್ಯ 23880 ನೆಗೆಟಿವ್ ಆಗಿದೆ.
ಜಿಲ್ಲೆಯ ಹಾಟ್‍ಸ್ಪಾಟ್ ವಲಯಗಳು : ಕಾಸರಗೋಡು ಜಿಲ್ಲೆಯಲ್ಲಿ ಕಾಂಞಂಗಾಡು ನಗರಸಭೆ, ಕಾಸರಗೋಡು ನಗರಸಭೆ, ಕುಂಬಳೆ, ಮಧೂರು, ಚೆಮ್ನಾಡ್, ಚೆಂಗಳ, ಮೊಗ್ರಾಲ್ ಪುತ್ತೂರು, ಮುಳಿಯಾರು ಗ್ರಾಮ ಪಂಚಾಯತ್‍ಗಳಲ್ಲದೆ ಅಜಾನೂರು ಗ್ರಾಮ ಪಂಚಾಯತ್ ಕೂಡ ಹಾಟ್ ಸ್ಪಾಟ್ ಪಟ್ಟಿಯಲ್ಲಿ ಸೇರಿದೆ.
ಅಂಗಡಿಗಳ ಮುಂಭಾಗದ ಬಾಟಲಿಗಳ ತೆರವಿಗೆ ಜಿಲ್ಲಾಧಿಕಾರಿ ಆದೇಶ : ತಮ್ಮ ಅಂಗಡಿಗಳ ಮುಂಭಾಗದಲ್ಲಿ ಇರಿಸಲಾಗಿರುವ ಸೋಡಾ ಸಹಿತ ಪಾನೀಯಗಳ ಬಾಟಲಿಗಳನ್ನು ಎ.30 ರಂದು ಬೆಳಗ್ಗೆ 11 ರಿಂದ ಸಂಜೆ 5 ಗಂಟೆಯ ನಡುವಿನ ಅವ„ಯಲ್ಲಿ ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಇವುಗಳ ನಿರ್ಮಾಣಕಾರರಿಗೆ ಮತ್ತು ಮಾರಾಟಗಾರರಿಗೆ ಆದೇಶ ನೀಡಿದ್ದಾರೆ. ಅಂಗಡಿಗಳ ಹೊರಗಿರಿಸಿರುವ ಬಾಟಲಿಗಳಲ್ಲಿ ನೀರು ಕಟ್ಟಿ ನಿಂತು ಸೊಳ್ಳೆ ಸಂತಾನೋತ್ಪತ್ತಿ ನಡೆದು ಅಂಟು ರೋಗಗಳ ಹೆಚ್ಚಳ ಭೀತಿಯಿರುವುದರಿಂದ ಈ ಕ್ರಮ ನಡೆಸುವಂತೆ ಅವರು ತಿಳಿಸಿದರು. ಜಿಲ್ಲೆಯ ಹಾಟ್‍ಸ್ಪಾಟ್‍ಗಳ ಸಹಿತ ಎಲ್ಲ ಪ್ರದೇಶಗಳಲ್ಲಿ ಈ ಕ್ರಮ ನಡೆಸುವಂತೆ ಅವರು ಹೇಳಿದರು. ಅಂಗಡಿಗಳಲ್ಲಿ ಪಾನೀಯಗಳ ಮಾರಾಟ ನಡೆಸಕೂಡದು ಎಂದು ಆದೇಶದಲ್ಲಿ ತಿಳಿಸಿದರು.
ಮಾಸ್ಕ್ ಧರಿಸದೇ ಹೊರಗಿಳಿಯುವವರ ವಿರುದ್ಧ ದಂಡ: ಮಾಸ್ಕ್ ಧರಿಸದೇ ಸಾರ್ವಜನಿಕ ಪ್ರದೇಶಗಳಿಗೆ ತೆರಳುವವರ ವಿರುದ್ಧ 500 ರೂ. ದಂಡ ಹೇರಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು. ಮಾಸ್ಕ್ ಧರಿಸದೇ ಮನೆಗಳಿಂದ ಹೊರಗಿಳಿಯುವವರ ವಿರುದ್ಧ ಪೆÇಲೀಸರು ಕಠಿಣ ಕ್ರಮ ಕೈಗೊಳ್ಳುವರು ಎಂದವರು ನುಡಿದರು.
28 ಕೇಸುಗಳ ದಾಖಲು :
ಲಾಕ್‍ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ 28ರಂದು ಕಾಸರಗೋಡು ಜಿಲ್ಲೆಯಲ್ಲಿ 28 ಕೇಸುಗಳನ್ನು ದಾಖಲಿಸಲಾಗಿದೆ. 82 ಮಂದಿಯನ್ನು ಬಂಧಿಸಲಾಗಿದ್ದು, 13 ವಾಹನಗಳನ್ನು ವಶಪಡಿಸಲಾಗಿದೆ. ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ 3 ಕೇಸುಗಳು, ಕುಂಬಳೆ 1, ಕಾಸರಗೋಡು 2, ವಿದ್ಯಾನಗರ 4, ಬದಿಯಡ್ಕ 1, ಬೇಡಗಂ 2, ಮೇಲ್ಪರಂಬ 1, ಅಂಬಲತ್ತರ 2, ಹೊಸದುರ್ಗ 2, ನೀಲೇಶ್ವರ 1, ಚಂದೇರ 1, ವೆಳ್ಳರಿಕುಂಡ್ 4, ಚಿತ್ತಾರಿಕಲ್ 3, ರಾಜಪುರಂ 1 ಕೇಸುಗಳನ್ನು ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಈ ವರೆಗೆ 1925 ಕೇಸುಗಳನ್ನು ದಾಖಲಿಸಲಾಗಿದೆ. 2377 ಮಂದಿಯನ್ನು ಬಂಧಿಸಲಾಗಿದ್ದು, 788 ವಾಹನಗಳನ್ನು ವಶಪಡಿಸಲಾಗಿದೆ.