ಕಾಸರಗೋಡು: ಲಾಕ್ ಡೌನ್ ಆದೇಶವನ್ನು ಉಲ್ಲಂಘಿಸಿ ಸರಕು ವಾಹನಗಳಲ್ಲಿ ಯಾ ಇನ್ನಿತರ ವಾಹನಗಳಲ್ಲಿ ಅಕ್ರಮವಾಗಿ ಜನರನ್ನು ಗಡಿ ದಾಟಿ ಕರೆತಂದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಪ್ರಕರಣ ಸಂಬಂಧ ವಾಹನ ವಶಪಡಿಸುವುದರ ಜೊತೆಗೆ ಅಕ್ರಮ ಮಾನವ ಸಾಗಣೆ
ಆರೋಪದಲ್ಲಿ ಕೇಸು ದಾಖಲಿಸಲಾಗುವುದು. 10 ವರ್ಷ ವರೆಗೆ ಈ ಪ್ರಕರಣದ ಆರೋಪಿಗೆ ಸಜೆ ಲಭಿಸಬಹುದಾದ ಕೇಸು ಇದಾಗಿದೆ. ಎಪಿಡೆಮಿಕ್ ಕಾಯಿದೆ ಪ್ರಕಾರ ಕೇಸು ದಾಖಲಾಗುವುದು.
ಕರ್ನಾಟಕದಿಂದ ವನಾಂತರ ಪ್ರದೇಶಗಳ ಮೂಲಕ ಜಿಲ್ಲೆಗೆ ಜನ ಅಕ್ರಮ ಪ್ರವೇಶ ನಡೆಸುತ್ತಿರುವ ಮಾಹಿತಿ ಲಭಿಸಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಈ ಪ್ರದೇಶಗಳಲ್ಲಿ ತಪಾಸಣೆ ಬಿಗಿಗೊಳಿಸಲಾಗುವುದು. ಮಂಜೇಶ್ವರ ಠಾಣೆ ವ್ಯಾಪ್ತಿಯಲ್ಲಿ ಶಾಡೋ ಪೆÇಲೀಸ್ ನಿಗಾ ಬಿಗಿಗೊಳಿಸಲಾಗುವುದು. ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ಮಾಸ್ಕ್ ಇಲ್ಲದೆ ಮನೆಗಳಿಂದ ಹೊರಗಿಳಿಯುವ ಮಂದಿಯ ವಿರುದ್ಧವೂ ಕೇಸು ದಾಖಲಿಸಲಾಗುವುದು. ಹಾಟ್ ಸ್ಪಾಟ್ ಮತ್ತು ಗಡಿ ವಲಯಗಳಲ್ಲಿ ನಿಗಾ ಪ್ರಬಲಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.