ಕುಂಬಳೆ: ರಾಜ್ಯ ತೀವ್ರ ಆರ್ಥಿಕ ಬಿಕ್ಕಟ್ಟು ಸ್ಥಿತಿ ಮುಂದುವರಿಯುತ್ತಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಮತ್ತು ಇತರ ಸಚಿವರಿಗೆ ಕರವಸ್ತ್ರ ಮತ್ತು ಬಾತ್ ಟವಲ್ ಗಳನ್ನು ಕಳುಹಿಸುವ ಮೂಲಕ ಯುವಮೋರ್ಚಾ ಕಾಸರಗೋಡು ಜಿಲ್ಲಾ ಸಮಿತಿ ವಿನೂತನ ಪ್ರತಿಭಟನೆ ನಡೆಸಿತು.
ಕೋವಿಡ್ ಮಹಾಮಾರಿ ದುರಂತದ ಹಿನ್ನೆಲೆಯಲ್ಲಿ, ಸರ್ಕಾರ ಆರೋಗ್ಯ ಕಾರ್ಯಕರ್ತರ ಸಂಬಳವನ್ನು ನೀಡದೆ ಇರುವ ಸಂದರ್ಭದಲ್ಲಿ ಸರ್ಕಾರವು ಬೊಕ್ಕಸದಿಂದ ದೊಡ್ಡ ಮೊತ್ತದ ಹಣ ಕರವಸ್ತ್ರ ಮತ್ತು ಟವಲ್ ಗೆ ಬೇಕಾಗಿ ಖರ್ಚು ಮಾಡುವುದನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅಗತ್ಯವಿದ್ದರೆ ಕರವಸ್ತ್ರ ಮತ್ತು ಟವೆಲ್ ಮಂತ್ರಿಗಳಿಗೆ ಹಸ್ತಾಂತರಿಸಲು ನಾವು ಸಿದ್ಧರಿದ್ದೇವೆ ಎಂದು ಪ್ರತಿಭಟನೆಯನ್ನು ಉದ್ಘಾಟಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ವ್ಯಂಗ್ಯವಾಗಿ ಅಭಿಪ್ರಾಯ ವ್ಯಕ್ತಪಡಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಸರ್ಕಾರದ ಈ ಕೆಲಸವನ್ನು ದೂಶಿಸುವ ಭಾಗವಾಗಿ ಯುವ ಮೋರ್ಚಾ ಜಿಲ್ಲಾ ಸಮಿತಿ ಮಂತ್ರಿಗಳಿಗೆ ಟವೆಲ್ ಮತ್ತು ಕರವಸ್ತ್ರಗಳನ್ನ್ರು ಕಳುಹಿಸಿ ಕೊಟ್ಟು ಈ ಕ್ರಮಕ್ಕೆ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದೆ. ಯುವ ಮೋರ್ಚಾ ಜಿಲ್ಲಾಧ್ಯಕ್ಷ ಧನಂಜಯ ಮಾಧೂರು, ಉಪಾಧ್ಯಕ್ಷ ಅಂಜು ಜೋಸ್ ಟಿ ಮತ್ತು ಜಿಲ್ಲಾ ಖಜಾಂಚಿ ಎನ್ ಜಿತೇಶ್ ಉಪಸ್ಥಿತರಿದ್ದರು.