ಕಾಸರಗೋಡು: ಕೋವಿಡ್ ಪ್ರತಿರೋಧ ಚಟುವಟಿಕೆಗಳಲ್ಲಿ ಕಾಸರಗೋಡು ಜಗತ್ತಿಗೆ ಮಾದರಿಯಾಗಿರುವ ಬಗ್ಗೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಹೃದಯಂಗಮವಾಗಿ ಮಾತನಾಡಲಿದ್ದಾರೆ.
ಇಂದು (ಮೇ 1) ಬೆಳಗ್ಗೆ 10 ಗಂಟೆಗೆ ಅಸಾಪ್ ವೆಬಿನಾರ್ ಮೂಲಕ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವರು. ಅನೇಕ ಮಿತಿಗಳಿದ್ದೂ, ಒಗ್ಗಟ್ಟಿನ ಯತ್ನದ ಫಲವಾಗಿ ಕಾಸರಗೋಡು ಜಿಲ್ಲೆ ತನ್ನ ಪ್ರತಿರೋಧ ಯತ್ನಗಳಲ್ಲಿ ಯಶಸ್ಸು ಕಂಡಿದೆ. ಈ ಸತತ ಯತ್ನಕ್ಕೆ ನೇತೃತ್ವ ವಹಿಸಿರುವ ಜಿಲ್ಲಾಧಿಕಾರಿ ಯತ್ನಗಳ ಕುರಿತು ಸಮಗ್ರ ಮಾಹಿತಿ ನೀಡಿಲಿದ್ದಾರೆ. ಸಾರ್ವಜನಿಕರು ಕೋವಿಡ್ ಸಂಬಂಧ ತಮ್ಮ ಸಂಶಯ ನಿವಾರಣೆ ನಡೆಸಲು, ಪ್ರತಿರೋಧ ಚಟುವಟಿಕೆಗಳನ್ನು ಅರ್ಥ ಮಾಡಿಕೊಳ್ಳಲು ಈ ಅವಕಾಶವನ್ನು ಬಳಸಿಕೊಳ್ಳಬಹುದು.
ಲಿಂಕ್ :: http://skilparkkerala.in/cap-kasaragod/