ವಾಷಿಂಗ್ಟನ್: ಮಾರಕ ಕೊರೋನಾ ವೈರಸ್ ಗೆ ಇಡೀ ಜಗತ್ತು ತತ್ತರಿಸಿ ಹೋಗಿದ್ದು, ಇದರ ನಡುವೆ ಭಾರತದಲ್ಲಿ ತಯಾರಾಗುವ ಹೈಡ್ರೋಕ್ಸಿಕ್ಲೋರೋಕಿನ್ ಮಾತ್ರೆಗಾಗಿ ಅಮೆರಿಕ ಭಾರತದೊಂದಿಗೆ ಮುನಿಸಿಕೊಂಡಿದೆಯೇ?
ಇಂತಹದೊಂದು ಪ್ರಶ್ನೆಗೆ ಕಾರಣವಾಗಿರುವುರುದು ಅಮೆರಿಕ ಅಧ್ಯಕ್ಷರ ನಡೆ.. ಹೌದು.. ಈ ಹಿಂದೆ ಹೆಚ್ಚಿನ ಪ್ರಮಾಣದಲ್ಲಿ ಅಮೆರಿಕಕ್ಕೆ ಕೊರೋನಾ ವೈರಸ್ ಚಿಕಿತ್ಸೆಯಲ್ಲಿ ಬಳಕೆ ಮಾಡುವ ಹೈಡ್ರೋಕ್ಸಿಕ್ಲೋರೋಕಿನ್ ಮಾತ್ರೆಗಳನ್ನು ರವಾನೆ ಮಾಡುವಂತೆ ಮನವಿ ಮಾಡಿದ್ದ ಅಮೆರಿಕ ಇದೀಗ ಅದೇ ವಿಚಾರವಾಗಿ ಭಾರತದೊಂದಿಗೆ ಮುನಿಸಿಕೊಂಡಿದೆ ಎಂದು ಹೇಳಲಾಗಿದೆ. ಇದೇ ಕಾರಣಕ್ಕೆ ಅಮೆರಿಕ ಅಧ್ಯಕ್ಷರ ಕಚೇರಿ ವೈಟ್ ಹೌಸ್ ಟ್ವೀಟ್ ಖಾತೆ ಭಾರತದ ಪ್ರಧಾನಿಗಳ ಕಚೇರಿ, ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಕಚೇರಿಯ ಅಧಿಕೃತ ಟ್ವಿಟರ್ ಖಾತೆಗಳನ್ನು ಅನ್ ಫಾಲೋ ಮಾಡಿದೆ.
ಮೂಲಗಳ ಪ್ರಕಾರ ವೈಟ್ ಹೌಸ್ ಅಧಿಕೃತ ಖಾತೆಯು ಪ್ರಧಾನಿ ನರೇಂದ್ರ ಮೋದಿ, ಪಿಎಂಒ ಆಫ್ ಇಂಡಿಯಾ, ಪ್ರೆಸಿಡೆಂಟ್ ರಾಮನಾಥ್ ಕೋವಿಂದ್ ಕಚೇರಿ ಖಾತೆ. ಭಾರತೀಯ ರಾಯಭಾರ ಕಚೇರಿ ಖಾತೆ ಸೇರಿದಂತೆ 13ಕ್ಕೂ ಹೆಚ್ಚು ಭಾರತದ ಅಧಿಕೃತ ಖಾತೆಗಳನ್ನು ಅನ್ ಫಾಲೋ ಮಾಡಿದೆ. ಈ ಹಿಂದೆ ಭಾರತೀಯ ಸರ್ಕಾರದ ಅಧಿಕೃತ ಖಾತೆಗಳೂ ಸೇರಿದಂತೆ ಒಟ್ಟು 19 ಖಾತೆಗಳನ್ನು ವೈಟ್ ಹೌಸ್ ಖಾತೆ ಫಾಲೋ ಮಾಡುತ್ತಿತ್ತು. ಇದೀಗ ಈ ಸಂಖ್ಯೆ 13ಕ್ಕೆ ಇಳಿಕೆಯಾಗಿದೆ. ಈ ಎಲ್ಲ 13 ಖಾತೆಗಳೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅಮೆರಿಕ ಸರ್ಕಾರಕ್ಕೆ ಸೇರಿದ ಖಾತೆಗಳಾಗಿವೆ ಎನ್ನಲಾಗಿದೆ.