ಬದಿಯಡ್ಕ: ತಾಯಿಯ ಮರಣಾನಂತರ ಸಮಾರಂಭ ನಡೆಸಲು ಸಿದ್ಧತೆ ನಡೆಸಿದ್ದ ಮೊಬಲಗನ್ನು ಮುಖ್ಯಮಂತ್ರಿ ದುರಂತ ನಿವಾರಣೆ ನಿಧಿಗೆ ಹಸ್ತಾಂತರಿಸುವ ಮೂಲಕ ಮಕ್ಕಳು ಮಾದರಿಯಾಗಿದ್ದಾರೆ.
ಎಡನೀರು ಸಮೀಪದ ಪಾಡಿ ನಿವಾಸಿ ಕುಂಞಕೃಷ್ಣನ್ ನಾಯರ್, ಕಾತ್ರ್ಯಾಯಿನಿ ಅಮ್ಮ, ಮಾಧವನ್ ಪಾಡಿ ಎಂಬವರು ಈ ಮಾದರಿ ಕಾಯಕ ನಡೆಸಿದವರು. ಮಾ.12ರಂದು ಇವರ ತಾಯಿ ಅಚ್ಚಾನಡ್ಕ ಅಮ್ಮಾರ್ ಕುಂಞಯಮ್ಮ ನಿಧನರಾಗಿದ್ದರು. ಮರಣಾನಂತರದ ಔಧ್ರ್ವದೇಹಿಕ ಕರ್ಮ ನಿರ್ವಹಣೆಯ ಸಮಾರಂಭದ ವೆಚ್ಚಕ್ಕಾಗಿ ಇವರು ಸಿದ್ಧಪಡಿಸಿದ್ದ ಒಂದು ಲಕ್ಷ ರೂ. ವನ್ನು ಈಗ ಮುಖ್ಯಮಂತ್ರಿ ನಿಧಿಗೆ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರಿಗೆ ಈ ಮೊಬಲಗನ್ನು ಮಕ್ಕಳು ಹಸ್ತಾಂತರಿಸಿದ್ದಾರೆ.