ಕಾಸರಗೋಡು: ಜಿಲ್ಲೆಯಲ್ಲಿ ಸೋಮವಾರವೂ ಹೊಸ ಕೊರೊನಾ ಪ್ರಕರಣ ದಾಖಲಾಗಿಲ್ಲ.
ಜಿಲ್ಲೆಯಲ್ಲಿ ಇದು ವರೆಗೆ 175 ಮಂದಿಯಲ್ಲಿ ಕೊರೊನಾ ದೃಢವಾಗಿದ್ದು, ಅವರ ಪೈಕಿ 160 ಮಂದಿ ಗುಣಮುಖರಾಗಿದ್ದಾರೆ. 15 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿ 2023 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 1986 ಮಂದಿ ಆಸ್ಪತ್ರೆಗಳಲ್ಲಿ 37 ಮಂದಿ ನಿಗಾದಲ್ಲಿದ್ದಾರೆ. ಸೋಮವಾರ 8 ಮಂದಿಯನ್ನು ನೂತನವಾಗಿ ನಿಗಾ ವಾರ್ಡಿಗೆ ವರ್ಗಾಯಿಸಲಾಗಿದೆ. 4112 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. ಲಭ್ಯ 3104 ಮಂದಿಯ ಸ್ಯಾಂಪಲ್ ತಪಾಸಣೆ ನೆಗೆಟಿವ್ ಆಗಿದೆ.
ಕೇರಳದಲ್ಲಿ 13 ಮಂದಿಗೆ ದೃಢ :
ಸೋಮವಾರ ಕೇರಳ ರಾಜ್ಯದಲ್ಲಿ 13 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದೆ. ಅದೇ ವೇಳೆ 13 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಕೋಟ್ಟಯಂ-6, ಇಡುಕ್ಕಿ-4, ಪಾಲ್ಘಾಟ್, ಮಲಪ್ಪುರಂ ಮತ್ತು ಕಣ್ಣೂರು ತಲಾ ಒಬ್ಬರಂತೆ ಕೊರೊನಾ ವೈರಸ್ ಸೋಂಕು ಬಾಧಿಸಿದೆ. ಇವರಲ್ಲಿ ಐವರು ತಮಿಳುನಾಡು ನಿವಾಸಿಗಳು. ಒಬ್ಬರು ವಿದೇಶದಿಂದ ಬಂದವರು. ಒಬ್ಬರಿಗೆ ಕೊರೊನಾ ವೈರಸ್ ಸೋಂಕು ಹೇಗೆ ಬಾಧಿಸಿತು ಎಂಬ ಬಗ್ಗೆ ಸ್ಪಷ್ಟತೆಯಿಲ್ಲ. ಉಳಿದ ಆರು ಮಂದಿಗೆ ಸಂಪರ್ಕದಿಂದ ಬಾಧಿಸಿದೆ. ಸೋಮವಾರ ರಾಜ್ಯದಲ್ಲಿ 13 ಮಂದಿ ರೋಗ ಮುಕ್ತರಾಗಿದ್ದಾರೆ. ಕಣ್ಣೂರು-6, ಕಲ್ಲಿಕೋಟೆ-4, ತಿರುವನಂತಪುರ, ಎರ್ನಾಕುಳಂ ಮತ್ತು ಮಲಪ್ಪುರಂ ತಲಾ ಒಬ್ಬರಂತೆ ಸೋಂಕಿನಿಂದ ಗುಣಮುಖರಾಗಿದ್ದಾರೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಕೇರಳದಲ್ಲಿ ಈ ತನಕ 481 ಮಂದಿಗೆ ಕೊರೊನಾ ವೈರಸ್ ಸೋಂಕು ಬಾಧಿಸಿದೆ. ಇವರಲ್ಲಿ 123 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಸ್ತುತ 20301 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 19812 ಮಂದಿ ಮನೆಗಳಲ್ಲೂ, 489 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ. ಸೋಮವಾರ ಶಂಕಿತ 104 ಮಂದಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಇದು ವರೆಗೆ 23271 ಸ್ಯಾಂಪಲ್‍ಗಳನ್ನು ಲ್ಯಾಬ್‍ಗೆ ಕಳುಹಿಸಲಾಗಿದ್ದು, ಇದರಲ್ಲಿ ಲಭ್ಯ 22537 ಮಂದಿ ಸ್ಯಾಂಪಲ್ ನೆಗೆಟಿವ್ ಆಗಿದೆ. ಇದೇ ಸಂದರ್ಭದಲ್ಲಿ ಕೋಟ್ಟಯಂ ಮತ್ತು ಇಡುಕ್ಕಿ ಜಿಲ್ಲೆಗಳನ್ನು ರೆಡ್ ಝೋನ್ ಆಗಿ ಘೋಷಿಸಲಾಗಿದೆ.
53 ಕೇಸುಗಳ ದಾಖಲು :
ಲಾಕ್‍ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 53 ಕೇಸು ದಾಖಲಿಸಲಾಗಿದೆ. 66 ಮಂದಿಯನ್ನು ಬಂಧಿಸಲಾಗಿದ್ದು, 24 ವಾಹನಗಳನ್ನು ವಶಪಡಿಸಲಾಗಿದೆ. ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ 6 ಕೇಸುಗಳು, ಕುಂಬಳೆ 2, ಚಂದೇರ 2, ವೆಳ್ಳರಿಕುಂಡ್ 2, ಆದೂರು 2, ವಿದ್ಯಾನಗರ 10, ಬದಿಯಡ್ಕ 2, ಕಾಸರಗೋಡು 5, ಹೊಸದುರ್ಗ 2, ಚಿತ್ತಾರಿಕಲ್ 4, ಬೇಡಗಂ 6, ಮೇಲ್ಪರಂಬ 6, ನೀಲೇಶ್ವರ 2, ಅಂಬಲತ್ತರ 2 ಕೇಸುಗಳನ್ನು ದಾಖಲಿಸಲಾಗಿದೆ. ಈ ವರೆಗೆ ಜಿಲ್ಲೆಯಲ್ಲಿ 1862 ಕೇಸುಗಳನ್ನು ದಾಖಲಿಸಲಾಗಿದೆ. 2242 ಮಂದಿಯನ್ನು ಬಂ„ಸಲಾಗಿದೆ. 760 ವಾಹನಗಳನ್ನು ವಶಪಡಿಸಲಾಗಿದೆ.
ಡಾಟಾ ಸೋರಿಕೆ ವರದಿ : ತನಿಖೆಗೆ ಎಸ್ಪಿಗೆ ಮನವಿ
ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ರೋಗಿಗಳ ಡಾಟಾ ಸೋರಿಕೆ ನಡೆದಿದೆ ಎಂದು ಕೆಲವು ಮಾಧ್ಯಮಗಳು ಪ್ರಕಟಿಸಿದ ವರದಿ ಸಂಬಂಧ ಸಮಗ್ರ ತನಿಖೆ ನಡೆಸುವಂತೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿರುವುದಾಗಿ ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ತಿಳಿಸಿದ್ದಾರೆ. ಕೋವಿಡ್ ರೋಗಿಗಳಿಂದ ಯಾ ರೋಗದಿಂದ ಗುಣಮುಖರಾದವರಿಂದ ಈ ಸಂಬಂಧ ಯಾವುದೇ ದೂರುಗಳು ಲಭಿಸಿಲ್ಲ. ಆದರೆ ಕೆಲವು ಮಾಧ್ಯಮಗಳು ನಡೆಸಿದ ಸುದ್ದಿಗಳ ನಿಜಸ್ಥಿತಿ ತನಿಖೆ ನಡೆಸುವಂತೆ ಮನವಿಯಲ್ಲಿ ವಿನಂತಿಸಿರುವುದಾಗಿ ಜಿಲ್ಲಾ ವೈದ್ಯಾಧಿಕಾರಿ ತಿಳಿಸಿರುವರು.
ಜನರನ್ನು ಅಕ್ರಮವಾಗಿ ಗಡಿದಾಟಿ ಕರೆತಂದರೆ ಕ್ರಮ : ಜಿಲ್ಲಾಧಿಕಾರಿ
ಲಾಕ್‍ಡೌನ್ ಆದೇಶವನ್ನು ಉಲ್ಲಂಘಿಸಿ ಸರಕು ವಾಹನಗಳಲ್ಲಿ ಯಾ ಇನ್ನಿತರ ವಾಹನಗಳಲ್ಲಿ ಅಕ್ರಮವಾಗಿ ಜನರನ್ನು ಗಡಿ ದಾಟಿ ಕರೆ ತಂದರೆ ಕಠಿಣ ಕ್ರಮಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಪ್ರಕರಣ ಸಂಬಂಧ ವಾಹನ ವಶಪಡಿಸುವುದರ ಜೊತೆಗೆ ಅಕ್ರಮ ಮಾನವ ಸಾಗಣೆ ಆರೋಪದಲ್ಲಿ ಕೇಸು ದಾಖಲಿಸಲಾಗುವುದು. 10 ವರ್ಷದ ವರೆಗೆ ಈ ಪ್ರಕರಣದ ಆರೋಪಿಗೆ ಸಜೆ ಲಭಿಸಬಹುದಾದ ಕೇಸು ಇದಾಗಿದೆ. ಎಪಿಡೆಮಿಕ್ ಕಾಯಿದೆ ಪ್ರಕಾರ ಕೇಸು ದಾಖಲಾಗುವುದು.
ಕರ್ನಾಟಕದಿಂದ ವನಾಂತರ ಪ್ರದೇಶಗಳ ಮೂಲಕ ಜಿಲ್ಲೆಗೆ ಜನ ಅಕ್ರಮ ಪ್ರವೇಶ ನಡೆಸುತ್ತಿರುವ ಮಾಹಿತಿ ಲಭಿಸಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಈ ಪ್ರದೇಶಗಳಲ್ಲಿ ತಪಾಸಣೆ ಬಿಗಿಗೊಳಿಸಲಾಗುವುದು. ಮಂಜೇಶ್ವರ ಠಾಣೆ ವ್ಯಾಪ್ತಿಯಲ್ಲಿ ಶಾಡೋ ಪೆÇಲೀಸ್ ನಿಗಾ ಬಿಗಿಗೊಳಿಸಲಾಗುವುದು. ಹಾಟ್‍ಸ್ಪಾಟ್ ಪ್ರದೇಶಗಳಲ್ಲಿ ಮಾಸ್ಕ್ ಇಲ್ಲದೆ ಮನೆಗಳಿಂದ ಹೊರಗಿಳಿಯುವ ಮಂದಿಯ ವಿರುದ್ಧವೂ ಕೇಸು ದಾಖಲಿಸಲಾಗುವುದು. ಹಾಟ್‍ಸ್ಪಾಟ್ ಮತ್ತು ಗಡಿ ವಲಯಗಳಲ್ಲಿ ನಿಗಾ ಪ್ರಬಲಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿರುವರು.