ಕಾಸರಗೋಡು: ಜಿಲ್ಲೆಯಲ್ಲಿ ಮಂಗಳವಾರ ಒಬ್ಬರಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದೆ. ಇದೇ ವೇಳೆ ಇಬ್ಬರು ಸೋಂಕಿತರು ಗುಣಮುಖರಾಗಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ 176 ಮಂದಿಗೆ ಸೋಂಕು ಬಾಧಿಸಿದ್ದು, ಈ ಪೈಕಿ 162 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ ವಿವಿಧ ಆಸ್ಪತ್ರೆಗಳಲ್ಲಿ 14 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಸರಗೋಡು ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಎಲ್ಲಾ 89 ಮಂದಿ ಗುಣಮುಖರಾಗಿದ್ದಾರೆ. ಈ ಮೂಲಕ ಕಾಸರಗೋಡು ಜನರಲ್ ಆಸ್ಪತ್ರೆಯ ವೈದ್ಯರ ತಂಡ ಮತ್ತು ಸಿಬ್ಬಂದಿಗಳು ಸಾಧನೆ ಮಾಡಿದ್ದಾರೆ. ಮಂಗಳವಾರ ಅಜಾನೂರಿನ 24 ರ ಹರೆಯದ ಯುವಕನಿಗೆ ಕೋವಿಡ್ ದೃಢಗೊಂಡಿದೆ.
ಕಾಸರಗೋಡು ಜಿಲ್ಲೆಯಲ್ಲಿ 1958 ಮಂದಿ ನಿಗಾದಲ್ಲಿದ್ದು, ಅವರಲ್ಲಿ 1923 ಮಂದಿ ಮನೆಗಳಲ್ಲೂ, 35 ಮಂದಿ ಆಸ್ಪತ್ರೆಗಳಲ್ಲೂ ನಿಗಾದಲ್ಲಿದ್ದಾರೆ. ಜಿಲ್ಲೆಯಲ್ಲಿ 4189 ಮಂದಿಯ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಿದ್ದು, ಲಭ್ಯ 3179 ನೆಗೆಟಿವ್ ಫಲಿತಾಂಶ ಬಂದಿದೆ. ಹೊಸದಾಗಿ ಇಬ್ಬರನ್ನು ಐಸೋಲೆಷನ್ ವಾರ್ಡ್‍ಗೆ ದಾಖಲಿಸಲಾಗಿದೆ.
ಕೇರಳದಲ್ಲಿ ನಾಲ್ವರಿಗೆ ಸೋಂಕು : ಕೇರಳದಲ್ಲಿ ಮಂಗಳವಾರ ಒಟ್ಟು ನಾಲ್ವರಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದೆ. ಕಣ್ಣೂರು ಜಿಲ್ಲೆಯಲ್ಲಿ ಮೂವರಿಗೆ ಮತ್ತು ಕಾಸರಗೋಡು ಜಿಲ್ಲೆಯಲ್ಲಿ ಒಬ್ಬರಿಗೆ ಸೋಂಕು ಬಾಧಿಸಿದೆ. ಇದೇ ವೇಳೆ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಯಲ್ಲಿ ತಲಾ ಇಬ್ಬರಂತೆ ನಾಲ್ಕು ಮಂದಿ ಗುಣಮುಖರಾಗಿದ್ದಾರೆ. ರೋಗ ಬಾಧಿತರಲ್ಲಿ ಇಬ್ಬರು ವಿದೇಶದಿಂದ ಬಂದವರು ಮತ್ತು ಇಬ್ಬರಿಗೆ ಕೊರೊನಾ ವೈರಸ್ ಸೋಂಕಿತರೊಂದಿಗಿನ ಸಂಪರ್ಕದಿಂದ ರೋಗ ಬಾ„ಸಿದೆ. ಕೇರಳ ರಾಜ್ಯದಲ್ಲಿ ಈ ವರೆಗೆ ಒಟ್ಟು 485 ಮಂದಿಗೆ ಕೊರೊನಾ ವೈರಸ್ ಸೋಂಕು ಬಾಧಿಸಿದ್ದು, ಪ್ರಸ್ತುತ 123 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 20773 ಮಂದಿ ನಿಗಾದಲ್ಲಿದ್ದು, ಈ ಪೈಕಿ 20255 ಮಂದಿ ಮನೆಗಳಲ್ಲೂ, 518 ವಿವಿಧ ಆಸ್ಪತ್ರೆಗಳಲ್ಲೂ ನಿಗಾದಲ್ಲಿದ್ದಾರೆ. ಮಂಗಳವಾರ ವಿವಿಧ ಆಸ್ಪತ್ರೆಗಳಿಗೆ ಶಂಕಿತ 151 ಮಂದಿಯನ್ನು ದಾಖಲಿಸಲಾಗಿದೆ. ಈ ವರೆಗೆ 23,980 ಮಂದಿಯ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಿದ್ದು, ಲಭ್ಯ 23277 ನೆಗೆಟಿವ್ ಆಗಿದೆ.