ಕುಂಬಳೆ: ಕೋವಿಡ್ ಕೊರಾನಾ ಹಿನ್ನೆಲೆಯಲ್ಲಿ ಮಾರ್ಚ್ ತಿಂಗಳಲ್ಲಿ ಉಂಟಾದ ಹಠಾತ್ ಲಾಕ್ ಡೌನ್ ಕಾರಣ ಹತ್ತನೇ ತರಗತಿ ಮತ್ತು ಪ್ಲಸ್ ಟು ವಿದ್ಯಾರ್ಥಿಗಳ ಪರೀಕ್ಷೆಗಳು ಅರ್ಧದಲ್ಲೇ ಮೊಟಕುಗೊಂಡು ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ. ಈ ಮಧ್ಯೆ ನಕಲಿ ಸುದ್ದಿಗಳು ಬಿತ್ತಗೊಳ್ಳುತ್ತಿರುವುದರಿಂದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ದವಾಗುತ್ತಿರುವ ವಿದ್ಯಾರ್ಥಿಗಳು ಅನಿಶ್ಚಿತ ಭವಿಷ್ಯವನ್ನು ಎದುರಿಸುತ್ತಿದ್ದಾರೆ. ಪರೀಕ್ಷೆಗಳ ವೇಳಾಪಟ್ಟಿಯಲ್ಲಿ ಯಾವುದೇ ಸ್ಪಷ್ಟತೆ ಇಲ್ಲ. ನಾವು ಈಗ ನಮ್ಮ ಶಿಕ್ಷಕರಿಂದ ಪಡೆದ ಮಾಹಿತಿಯನ್ನು ಮಾತ್ರ ನಂಬಲು ಬಯಸುತ್ತೇವೆ. ಕೆಲವು ಪೆÇೀರ್ಟಲ್‍ಗಳು ಪರೀಕ್ಷೆಗಳ ಬಗೆಗೆ ಇಲ್ಲ ಸಲ್ಲದ ವದಂತಿ ಹರಡಿಸುತ್ತಿವೆ.
ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಮೊದಲು ವಾರ್ಷಿಕ ಪರೀಕ್ಷೆಗಳು ಯಾವಾಗಲೂ ಪೂರ್ಣಗೊಳ್ಳುವುದರಿಂದ, ಭವಿಷ್ಯ ಹೇಗಿರಲಿದೆ ಎಂಬುದರ ಬಗ್ಗೆ ಪೆÇೀಷಕರು ಸಹ ಕಳವಳ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳು ತಮ್ಮ ಅನುಮಾನಗಳನ್ನು ಸ್ಪಷ್ಟಪಡಿಸಲು ಕರೆ ಮಾಡಿದಲ್ಲಿ ಅಧ್ಯಾಪಕರು ಸಮರ್ಪಕವಾಗಿ ಉತ್ತರಿಸುವರು. ಆದರೆ ವಿದ್ಯಾರ್ಥಿಗಳು, ಪೋಷಕರು ಸಾಮಾಜಿಕ ಜಾಲತಾಣಗಳಿಗೇ ಹೆಚ್ಚು ಮಹತ್ವ ನೀಡುತ್ತಿರುವುದರಿಂದ ಸಮಸ್ಯೆಗಳೂ ಎದುರಾಗುತ್ತಿದೆ. ವಿದ್ಯಾರ್ಥಿಗಳನ್ನು ಪರೀಕ್ಷೆಗೆ ತಯಾರಿ ಗೊಳಿಸಲು ವಾಟ್ಸಾಪ್ ಗುಂಪುಗಳಿದೆ. ಆನ್‍ಲೈನ್‍ನಲ್ಲಿ ಹಲವಾರು ಅಣಕು ಪರೀಕ್ಷಾ ಮಾದರಿಗಳು ಸಹ ಲಭ್ಯವಿದ್ದು ಉಚಿತ ಕೋಚಿಂಗ್ ಕಾರ್ಯವಿಧಾನ ಜಾರಿಗೆ ಬರುತ್ತಿದೆ.
ನಮಗೆ ತರಗತಿಯಲ್ಲಿ ಒಂದು ವಿಧಾನ ಹೇಳೀಕೊಡಲಾಗುವುದು. ಆನ್‍ಲೈನ್ ತರಗತಿಯಲ್ಲಿ ಶಾರ್ಟ್‍ಕಟ್ ಸೂತ್ರವನ್ನು ಕಲಿಸಲಾಗುತ್ತದೆ. ಸಾಮಾನ್ಯ ತರಗತಿಯಲ್ಲಿ ನಾವು ಕಲಿಯುವ ವಿಧಾನ ಹೇಗೆ ಪಡೆಯಲಾಗಿದೆ ಎಂಬುದರ ಕುರಿತು ಯಾವುದೇ ವಿವರಣೆಯಿಲ್ಲ ಎಂದು ಸಿಇಟಿಗೆ ತಯಾರಾಗುತ್ತಿರುವ ವಿದ್ಯಾರ್ಥಿಯೋರ್ವ ತಿಳಿಸಿದ್ದಾರೆ.
ಹತ್ತನೇ ತರಗತಿಯ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ ಪರೀಕ್ಷೆಗಳು ಕೊನೆಯ ಹಂತದಲ್ಲಿ ಬಾಕಿಯಾಯಿತು. ಪ್ಲಸ್ ಟು ವಿಭಾಗದಲ್ಲಿ ಗಣಿತ, ಬಯಾಲಜಿ, ಝಿಯಾಲಜಿ, ಬಿಸಿನೆಸ್ ಸ್ಟಡೀಸ್, ಸ್ಟೇಟಿಟಿಕ್ಸ್, ರಾಜ್ಯಶಾಸ್ತ್ರ, ಇತಿಹಾಸ, ಕಂಪ್ಯೂಟರ್ ಸಯನ್ಸ್ ಮೊದಲಾದ ಪರೀಕ್ಷೆಗಳು ವಿವಿಧ ವಿಭಾಗಗಳಲ್ಲಿ ಬಾಕಿಯಿದ್ದು ವಿದ್ಯಾರ್ಥಿಗಳ ಜೀವನ ಅತಂತ್ರವಾಗುವ ಭೀತಿ ಎದುರಾಗಿದೆ.
ಈ ಬಗ್ಗೆ ಸರ್ಕಾರ ಸ್ಪಷ್ಟವಾದ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳದಿದ್ದರೂ ಮೇ.3 ರ ಬಳಿಕ ಏನಾಗಲಿದೆ ಎನ್ನುವುದನ್ನು ಗಮನಿಸಿ ಮೇ. ಕೊನೆಯ ವಾರದಲ್ಲಿ ಮಿಕ್ಕುಳಿದ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ರಾಜ್ಯ ಶಿಕ್ಷಣ ಸಚಿವಾಲಯ ತಿಳಿಸಿದೆ.