ಮಂಜೇಶ್ವರ: ಮಂಜೇಶ್ವರ ಗ್ರಾಮಪಂಚಾಯತಿಯಲ್ಲಿ ಹೋಮಿಯೋ ಇಮ್ಯೂನ್ ಬೂಸ್ಟರ್ ಔಷಧ ವಿತರಣೆ ಮಂಗಳವಾರ ನಡೆಯಿತು. ಸ್ಥಳೀಯ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಈ ಸಂಬಂಧ ನಡೆದ ಸಮಾರಂಭದಲ್ಲಿ ವೈದ್ಯಾಧಿಕಾರಿ ಡಾ.ಷೀಬಾ ಅವರು ಮಂಜೇಶ್ವರ ಗ್ರಾಮಪಂಚಾಯತಿ ಅಧ್ಯಕ್ಷ ಅಬ್ದುಲ್ ಅಝೀಜ್ ಹಾಜಿ ಔಷಧ ಪಡೆದುಕೊಂಡರು.
ಗ್ರಾಮ ಪಂಚಾಯತಿಯ ಎಲ್ಲ ವಾರ್ಡ್ ಗಳಲ್ಲೂ ಔಷಧ ವಿತರಣೆ ನಡೆಯಲಿದೆ. ಆಶಾ ಕಾರ್ಯಕರ್ತರು ಮತ್ತು ಸ್ವಯಂ ಸೇವಾ ಸಂಘಟನೆಗಳ ಕಾರ್ಯಕರ್ತರ ಮೂಲಕ ಮಂಜೇಶ್ವರ ಸರ್ಕಾರಿ ಮಾದರಿ ಹೋಮಿಯೋ ಡಿಸ್ಪೆನ್ಸರಿಯಿಂದ ಔಷಧ ವಿತರಣೆ ನಡೆಸಲಾಗುವುದು. ಹಿರಿಯರಿಗೆ ಒಂದು ಮಾತ್ರೆ(ಗುಳಿಗೆ), ಮಕ್ಕಳಿಗೆ ಅರ್ಧ ಗುಳಿಗೆ ಮೂರು ದಿನಗಳಕಾಲ ಸೇವಿಸಲು ಸೂಚಿಸಲಾಗಿದೆ.