ಲಖನೌ: ಕೊರೋನಾ ಮಹಾಮಾರಿಯಿಂದಾಗಿ ದೇಶದಲ್ಲಿ ಸಾವು ನೋವುಗಳು ಸಂಭವಿಸುತ್ತಿದೆ. ಇದರ ಮಧ್ಯೆ ಮಹಿಳೆಯೊಬ್ಬರು ಐದು ಮಕ್ಕಳಿಗೆ ಜನ್ಮ ನೀಡಿ ಮಹಾತಾಯಿ ಎನಿಸಿಕೊಂಡಿದ್ದಾರೆ.
ಉತ್ತರಪ್ರದೇಶದ ಬರಬಂಕಿಸ್ ಕಮ್ಯೂನಿಟಿ ಹೆಲ್ತ್ ಸೆಂಟರ್ ನಲ್ಲಿ ಕುತ್ಲೂಪೂರ್ ನಿವಾಸಿ ಕುಂದನ್ ಪತ್ನಿ ಅನಿತಾ ಐವರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಐವರಲ್ಲಿ ಎರಡು ಗಂಡು ಮತ್ತು ಮೂವರು ಹೆಣ್ಣು ಮಕ್ಕಳು. ಸಿಎಚ್ ಸಿ ಆಸ್ಪತ್ರೆಯ ನರ್ಸ್ ಗಳ ಪ್ರಕಾರ, ಅನಿತಾ ಅವರಿಗೆ ಇದು ಎರಡನೇ ಹೆರಿಗೆಯಾಗಿದೆ. ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಐದು ಮಕ್ಕಳಿಗೆ ಅನಿತಾ ಜನ್ಮ ನೀಡಿದ್ದಾರೆ.
ಐವರ ಪೈಕಿ ಎರಡು ಶಿಶುಗಳ ತೂಕ 1.2 ಕೆಜಿ ಇದ್ದು ಇನ್ನೆರೆಡು ಶಿಶುಗಳ ತೂಕ 900 ಗ್ರಾಂ ಆಗಿದೆ. ಇನ್ನು ಐದನೇ ಮಗುವಿನ ತೂಕ 800 ಗ್ರಾಂ ಇದೆ. ಐದು ಮಕ್ಕಳು ಮತ್ತು ತಾಯಿ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.