ಕಾಸರಗೋಡು: ಕೋವಿಡ್ ನಿಯಂತ್ರಣ ಕೊಠಡಿ ಚಟುವಟಿಕೆಗಳಲ್ಲಿ ಗಂಭೀರ ಲೋಪ ಸಂಭವಿಸಿರುವುದಾಗಿ ಹುಸಿ ವಾರ್ತೆ ಪ್ರಕಟಿಸಿದ ಆರೋಪದಲ್ಲಿ ಆನ್ ಲೈನ್ ಮಾಧ್ಯಮವೊಂದರ ವಿರುದ್ಧ ಕೇಸು ದಾಖಲಿಸುವಂತೆ ಕಾಸರಗೋಡು ಜಿಲ್ಲಾ ದುರಂತ ನಿವಾರಣೆ ಪ್ರಾಧಿಕಾರದ ಅಧ್ಯಕ್ಷರಾದ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಅವರಲ್ಲಿ ಆಗ್ರಹಿಸಿದ್ದಾರೆ.
ಕಾಸರಗೋಡು ವಾರ್ತ. ಕಾಂ ಎಂಬ ಸಂಸ್ಥೆ ವಿರುದ್ಧ ಕೇಸು ದಾಖಲಿಸುವಂತೆ ಅವರು ಆದೇಶಿಸಿದ್ದಾರೆ. ಕೋವಿಡ್ ಪ್ರತಿರೋಧ ಚಟುವಟಿಕೆಗಳಿಗೆ ತೊಡಕಾಗುವ ರೀತಿ ಸಾರ್ವಜನಿಕರಲ್ಲಿ ಭೀತಿ ಮೂಡಿಸುವ ವಾರ್ತೆ ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.