ಕಾಸರಗೋಡು: ರಾಜ್ಯದ ಆದ್ಯತೆ ಪಡಿತರ ಚೀಟಿದಾರರಿಗಾಗಿ ರಾಜ್ಯ ಸರಕಾರ ಘೊಷಿಸಿದ್ದ ಉಚಿತ ಬಹುಧಾನ್ಯಗಳ ಕಿಟ್ ವಿತರಣೆ ಕಾಸರಗೋಡು ಜಿಲ್ಲೆಯಲ್ಲಿ ಆರಂಭಗೊಂಡಿದೆ. ಪಡಿತರ ಚೀಟಿಯ ನಂಬ್ರದ ಕೊನೆಯ ಸಂಖ್ಯೆ 0(ಸೊನ್ನೆ) ಆಗಿರುವ ಮಂದಿಗೆ ಸೋಮವಾರ ಕಿಟ್ ವಿತರಣೆ ನಡೆದಿದೆ. ಸಕ್ಕರೆ 1 ಕಿಲೋ, ಕಡ್ಲೆ 1 ಕಿಲೋ, ಬೇಳೆ 250 ಗ್ರಾಂ, ಪಚ್ಚೆಹೆಸರು 1 ಕಿಲೋ, ಸಾಸಿವೆ 250 ಗ್ರಾಂ, ಸಾರ್ಯಕಾಂತಿ ಎಣ್ಣೆ 1 ಲೀಟರ್, ಉಪ್ಪು 1 ಕಿಲೋ, ಮೆಣಸಿನ ಪುಡಿ 100 ಗ್ರಾಂ, ಗೋಧಿ ಪುಡಿ 2 ಕಿಲೋ, ರವೆ 2 ಕಿಲೋ, ಹಳದಿ ಪುಡಿ 100 ಗ್ರಾಂ, ಚಹಾ ಪುಡಿ 250 ಗ್ರಾಂ, ಸಾಬೂನು 2 ಕಿಲೋ ಇತ್ಯಾದಿ ಸಾಮಾಗ್ರಿಗಳನ್ನು ಕಿಟ್ ಹೊಂದಿದೆ. ಕಾಸರಗೋಡು ಜಿಲ್ಲೆಯ 102417 ಪಿಂಕ್ ಕಾರ್ಡ್(ಪಿ.ಎಚ್.ಎಚ್.) ದಾರರಿಗೆ ಈ ಕಿಟ್ ಪಡಿತರ ಅಂಗಡಿಗಳ ಮೂಲಕ ಲಭಿಸಲಿದೆ. ಜನ ನಿಭಿಡತೆ ನಡೆಯದಂತೆ ಈ ಕೆಳಗೆ ತಿಳಿಸಲಾದ ದಿನಾಂಕ ಮತ್ತು ಪಡಿತರ ಚೀಟಿಯ ನಂಬ್ರದ ಕೊನೆಯ ಸಂಖ್ಯೆ ಮೂಲಕ ಕಿಟ್ ಗಳ ವಿತರಣೆ ನಡೆಯಲಿದೆ.
(ಏ.26ರಂದು ಪಡಿತರ ಚೀಟಿ ನಂಬ್ರದ ಕೊನೆಯ ಸಂಖ್ಯೆ 1, 29ರಂದು ಸಂಖ್ಯೆ 2, 30ರಂದು ಸಂಖ್ಯೆ 3, ಮೇ 2ರಂದು ಸಂಖ್ಯೆ 4, 3ರಂದು ಸಂಖ್ಯೆ 5, 4ರಂದು ಸಂಖ್ಯೆ 6, 5ರಂದು ಸಂಖ್ಯೆ 7, 6ರಂದು ಸಂಖ್ಯೆ 8, 7ರಂದು ಸಂಖ್ಯೆ 9.)
1-28/04/2020
2-29/04/2020
3-30/04/2020
4-02/05/2020
5-03/05/2020
6-04/05/2020
7-05/05/2020
8-06/05/2020
9-07/05/2020
ಲಾಕ್ ಡೌನ್ ಕಾರಣದಿಂದ ವಸತಿ ಪ್ರದೇಶದಿಂದ ದೂರವಿದ್ದು, ಮರಳಲಾಗದೇ ಉಳಿದಿರುವ ಆದ್ಯತೆ ಪಡಿತರ ಚೀಟಿದಾರರು ಆಯಾ ವಾರ್ಡ್ ಸದಸ್ಯರ ದೃಡೀಕರಣ ಪತ್ರ ಪಡೆದು ಸಮೀಪದ ಪಡಿತರ ಅಂಗಡಿಯಿಂದ ಕಿಟ್ ಪಡೆಯಬಹುದಾಗಿದೆ. ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸಿ ಕಿಟ್ ವಿತರಣೆ ನಡೆಸಬೇಕು. ಅಲ್ಲದೇ ಇದ್ದಲ್ಲಿ ಆ ಪಡಿತರ ಅಂಗಡಿ ಮಾಲೀಕರ ವಿರುದ್ಧ ಒಂದು ಸಾವಿರ ರೂ. ದಂಡ ಈಡು ಮಾಡಲಾಗುವುದು.