ಕಾಸರಗೋಡು: ಸಾರ್ವಜನಿಕರು ತುರ್ತು ಪ್ರಯಾಣ ನಡೆಸಬೇಕಿದ್ದರೆ ಇನ್ನು ಮುಂದೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ರಾಷ್ಟ್ರೀಯ ಮಾಹಿತಿ ಕೇಂದ್ರ(ನ್ಯಾಷನಲ್ ಇನ್ ಫಾರ್ಮೇಷನ್ ಸೆಂಟರ್) ನೇತೃತ್ವದಲ್ಲಿ ಈ ನಿಟ್ಟಿನಲ್ಲಿ ನೂತನ ಅಪ್ಲಿಕೇಷನ್ ಸಿದ್ಧಪಡಿಸಲಾಗಿದೆ. ಆರೋಗ್ಯ-ಮೋಟಾರು ವಾಹನ ಇಲಾಖೆಗಳ ಸಿಬ್ಬಂದಿ ತಪಾಸಣೆ ನಡೆಸಿ, ಅಧಿಕೃತತೆ ಖಚಿತಪಡಿಸಿ ಮಾಹಿತಿಯನ್ನು ಅರ್ಜಿದಾರರ ತಾಲೂಕು ಕಚೇರಿಗೆ ಕಳುಹಿಸುವರು.
ತಾಲೂಕು ಕಚೇರಿಯಿಂದ ಅಂಗೀಕಾರಗೊಂಡರೆ ಅರ್ಜಿದಾರರ ಮೊಬೈಲ್ ಗೆ ಸಂದೇಶ ಲಭಿಸಲಿದೆ. ನಂತರ ಅರ್ಜಿದಾರ ತಮ್ಮ ಪಾಸನ್ನು ವೆಬ್ಸೈಟಿನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು. https://covid19jagratha.kerala.nic.in/ಎಂಬ ವೆಬ್ಸೈಟ್ ನಲ್ಲಿ ಪಬ್ಲಿಕ್ ಸರ್ವೀಸ್ ಎಂಬ ಲಿಂಕ್ ನಲ್ಲಿ ಎಮರ್ಜೆ ನ್ಸಿ ಟ್ರಾವೆಲ್ಪಾಸ್ ವಿಭಾಗದಲ್ಲಿ ಅರ್ಜಿದಾರ ತಮ್ಮ ಮೊಬೈಲ್ ನಂಬ್ರ ನಮೂದಿಸಬೇಕು. ಈ ವೇಳೆ ಫೆÇೀನ್ ಗೆ ಲಭಿಸುವ ಒ.ಟಿ.ಪಿ. ಬಳಸಿ ಪಾಸ್ ಗೆ ಅರ್ಜಿ ಸಲ್ಲಿಸಬಹುದು.