ರಿಯಾದ್: ಸೌದಿ ಅರೇಬಿಯಾದಲ್ಲಿ ತಪ್ಪಿತಸ್ಥರಿಗೆ ಕಠಿಣ ಮತ್ತು ವಿಭಿನ್ನ ಶಿಕ್ಷೆ ನೀಡಲಾಗುತ್ತದೆ. ಇಂಥದ್ದೇ ಸಾಲಿನಲ್ಲಿ ಗುರುತಿಸಿಕೊಂಡಿದ್ದ ಛಡಿಯೇಟು ನೀಡುವ ಶಿಕ್ಷೆಯ ವಿಧಾನವನ್ನು ರದ್ದುಗೊಳಿಸಿ ಅಲ್ಲಿನ ಸುಪ್ರೀಂಕೋರ್ಟ್ ಶನಿವಾರ ಆದೇಶ ಹೊರಡಿಸಿದೆ.
ದೇಶದಲ್ಲಿ ಅಶಾಂತಿ ಸೃಷ್ಟಿಸುವುದು, ದೈಹಿಕ ಹಿಂಸೆ ಹಾಗೂ ಕೊಲೆಯಂತಾ ಅಪರಾಧಗಳಿಗೆ ಕಠಿಣ ಶಿಕ್ಷೆಯನ್ನು ನೀಡಲಾಗುತ್ತಿತ್ತು. ತಪ್ಪಿತಸ್ಥರನ್ನು ಸಾರ್ವಜನಿಕವಾಗಿ ನಿಲ್ಲಿಸಿ ನೂರಾರು ಬಾರಿ ಛಡಿಯೇಟು ಹಾಕಲಾಗುತ್ತಿತ್ತು. ಈ ಶಿಕ್ಷೆಯು ಮಾನವ ಹಕ್ಕುಗಳಿಗೆ ವಿರುದ್ಧವಾಗಿದ್ದು, ದೈಹಿಕ ಹಿಂಸೆಯನ್ನು ತಡೆಗಟ್ಟುವ ಉದ್ದೇಶದಿಂದ ಸುಪ್ರೀಂಕೋರ್ಟ್ ಮೊರೆ ಹೋಗಲಾಗಿತ್ತು. ಸೌದಿ ಅರೇಬಿಯಾದ ರಾಜ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಹಾಗೂ ಅವರ ಪುತ್ರ ಮೊಹಮ್ಮದ್ ಬಿನ್ ಸಲ್ಮಾನ್ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಇರಿಸಿದ್ದಾರೆ. ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ವ್ಯಾಪ್ತಿಯಲ್ಲಿ ಸೌದಿ ಅರೇಬಿಯಾವನ್ನು ತರುವ ಉದ್ದೇಶದಿಂದ ಛಡಿಯೇಟು ಶಿಕ್ಷೆಯನ್ನು ತೆಗೆದು ಹಾಕಲಾಗಿದೆ.
ಸೌದಿ ಅರೇಬಿಯಾದಲ್ಲಿ ಮುಂದಿನ ದಿನಗಳಲ್ಲಿ ಕೊಲೆ, ಅತ್ಯಾಚಾರ ಮತ್ತು ಧರ್ಮವಿರೋಧಿ ಅಪರಾಧಗಳಿಗೆ ಛಡಿಯೇಟು ಹಾಕುವ ಬದಲು ದಂಡ ಹಾಗೂ ಜೈಲುಶಿಕ್ಷೆಯನ್ನು ವಿಧಿಸುವಂತೆ ಆದೇಶ ಹೊರಡಿಸಲಾಗಿದೆ. 2014ರಲ್ಲಿ ಇಸ್ಲಾಂ ಧರ್ಮವನ್ನು ಅವಮಾನಿಸಿದ್ದಕ್ಕಾಗಿ ರೈಫ್ ಬಾದಾವಿ ಎಂಬ ಆರೋಪಿಗೆ 1 ಸಾವಿರ ಛಡಿಯೇಟು ಹಾಗೂ 10 ವರ್ಷ ಕಠಿಣ ಜೈಲುಶಿಕ್ಷೆಯನ್ನು ವಿಧಿಸಲಾಗಿತ್ತು. ದೈಹಿಕ ಹಿಂಸೆಯಿಂದಾಗಿ 69 ವರ್ಷದ ಮಾನವ ಹಕ್ಕುಗಳ ಹೋರಾಟಗಾರ ಅಬ್ದುಲ್ ಅಲ್ ಹಮೀದ್ ಪಾಶ್ರ್ವವಾಯುವಿನಿಂದ ಪ್ರಾಣ ಬಿಟ್ಟರು. ಪೆÇಲಿಟಿಕಲ್ ರೈಟ್ಸ್ ಅಸೋಸಿಯೇಷನ್ ಸದಸ್ಯರಾಗಿದ್ದ ಹಮೀದ್ ರನ್ನು 2013ರ ಮಾರ್ಚ್ ನಲ್ಲಿ ಬಂಧಿಸಿದ್ದು 11 ವರ್ಶಗಳ ಸುದೀರ್ಘ ಜೈಲುಶಿಕ್ಷೆ ವಿಧಿಸಲಾಗಿತ್ತು.