ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ ಒಬ್ಬರಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದೆ. ಇದೇ ವೇಳೆ ಇಬ್ಬರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಗುಣಮುಖರಾದ ಇಬ್ಬರು ಕಾಂಞಂಗಾಡ್‍ನ ಜಿಲ್ಲಾ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಇದು ವರೆಗೆ 179 ಮಂದಿಗೆ ಸೋಂಕು ಬಾ„ಸಿದ್ದು, 167 ಮಂದಿ ಗುಣಮುಖರಾಗಿದ್ದಾರೆ. 12 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲಾಧಿಕಾರಿ ನಿಗಾದಲ್ಲಿ : ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ನೇತೃತ್ವ ನೀಡಿದ ಜಿಲ್ಲಾಧಿಕಾರಿ ಡಾ.ಡಿ.ಸಜಿತ್‍ಬಾಬು, ಐ.ಜಿ. ಗಳಾದ ಅಶೋಕ ಯಾದವ್, ವಿಜಯ್ ಸಖಾರೆ ಅವರನ್ನು ಕ್ವಾರೆಂಟೈನ್‍ಗೊಳಿಸಲಾಗಿದೆ. ಜಿಲ್ಲಾಧಿಕಾರಿಯ ಗನ್ ಮ್ಯಾನ್ ಹಾಗು ಚಾಲಕರನ್ನೂ ಕ್ವಾರೆಂಟೈನ್‍ಗೊಳಿಸಲಾಗಿದೆ. ಜಿಲ್ಲೆಯಲ್ಲಿ ಕೋವಿಡ್ ಬಾಧಿಸಿದ ದೃಶ್ಯ ಮಾಧ್ಯಮ ರಿಪೆÇೀರ್ಟರ್ ಅವರೊಂದಿಗಿನ ಸಂಪರ್ಕದ ಹಿನ್ನೆಲೆಯಲ್ಲಿ ಕ್ವಾರೆಂಟೈನ್ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ನಿಗಾದಲ್ಲಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ಸ್ಯಾಂಪಲ್ ತಪಾಸಣೆಯ ಫಲಿತಾಂಶ ನೆಗೆಟಿವ್ ಆಗಿದೆ.
ಜಿಲ್ಲೆಯಲ್ಲಿ ಒಟ್ಟು 1795 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 1764 ಮಂದಿ, ಆಸ್ಪತ್ರೆಗಳಲ್ಲಿ, 31 ಮಂದಿ ನಿಗಾದಲ್ಲಿದ್ದಾರೆ. ಗುರುವಾರ ನೂತನವಾಗಿ 6 ಮಂದಿಯನ್ನು ಐಸೊಲೇಷನ್ ವಾರ್ಡಿಗೆ ದಾಖಲಿಸಲಾಗಿದೆ. ನಿಗಾದಲ್ಲಿದ್ದ 230 ಮಂದಿ ತಮ್ಮ ಕಾಲಾವ„ ಪೂರ್ಣಗೊಳಿಸಿದ್ದಾರೆ. ಜಿಲ್ಲೆಯಲ್ಲಿ 4436 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. ಲಭ್ಯ 3630 ಮಂದಿಯ ಫಲಿತಾಂಶ ನೆಗೆಟಿವ್ ಆಗಿದೆ.
38 ಕೇಸು ದಾಖಲು : ಲಾಕ್ ಡೌನ್ ಉಲ್ಲಂಘಿಸಿದ ಆರೋಪದಲ್ಲಿ ಜಿಲ್ಲೆಯಲ್ಲಿ 38 ಕೇಸುಗಳನ್ನು ದಾಖಲಿಸಲಾಗಿದೆ. ಮಂಜೇಶ್ವರ-1, ಕುಂಬಳೆ-3, ಕಾಸರಗೋಡು-5, ವಿದ್ಯಾನಗರ-1, ಬದಿಯಡ್ಕ-2, ಆದೂರು-1, ಬೇಡಗಂ-3, ಮೇಲ್ಪರಂಬ-6, ಬೇಕಲ-1, ಅಂಬಲತ್ತರ-2, ಹೊಸದುರ್ಗ-2, ನೀಲೇಶ್ವರ-3, ಚಂದೇರ-1, ಚೀಮೇನಿ-1, ವೆಳ್ಳರಿಕುಂಡು-2, ಚಿಟ್ಟಾರಿಕ್ಕಲ್-2, ರಾಜಪುರಂ-2 ಎಂಬಂತೆ ಕೇಸು ದಾಖಲಿಸಲಾಗಿದೆ. ವಿವಿಧ ಕೇಸುಗಳಿಗೆ ಸಂಬಂ„ಸಿ 68 ಮಂದಿಯನ್ನು ಬಂ„ಸಲಾಗಿದೆ. 24 ವಾಹನಗಳನ್ನು ವಶಪಡಿಸಲಾಗಿದೆ. ಜಿಲ್ಲೆಯಲ್ಲಿ ಇದು ವರೆಗೆ 1963 ಕೇಸುಗಳನ್ನು ದಾಖಲಿಸಿದ್ದು, 2445 ಮಂದಿಯನ್ನು ಬಂಧಿಸಲಾಗಿದೆ. 812 ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಕೇರಳದಲ್ಲಿ ಇಬ್ಬರಿಗೆ ಸೋಂಕು : ಕೇರಳ ರಾಜ್ಯದಲ್ಲಿ ಗುರುವಾರ ಇಬ್ಬರಿಗೆ ಕೊರೊನಾ ವೈರಸ್ ಸೋಂಕು ಬಾಧಿಸಿದೆ. ಇದೇ ಸಂದರ್ಭದಲ್ಲಿ 14 ಮಂದಿ ಗುಣಮುಖರಾಗಿದ್ದಾರೆ. ಕಾಸರಗೋಡು ಮತ್ತು ಮಲಪ್ಪುರ ಜಿಲ್ಲೆಯಲ್ಲಿ ತಲಾ ಒಬ್ಬರಿಗೆ ಕೊರೊನಾ ವೈರಸ್ ಸೋಂಕು ಬಾಧಿಸಿದೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ರೋಗ ಬಾಧಿತರ ಸಂಖ್ಯೆ 497 ಕ್ಕೇರಿತು. ಪ್ರಸ್ತುತ ವಿವಿಧ ಆಸ್ಪತ್ರೆಗಳಲ್ಲಿ 111 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗ ಬಾಧಿತರಲ್ಲಿ ಒಬ್ಬರು ಮಹಾರಾಷ್ಟ್ರದಿಂದ ಬಂದವರಾಗಿದ್ದರೆ, ಇನ್ನೊಬ್ಬರಿಗೆ ಸಂಪರ್ಕದಿಂದ ರೋಗ ಬಾಧಿಸಿದೆ.
ಗುರುವಾರ ರಾಜ್ಯದಲ್ಲಿ 14 ಮಂದಿ ವೈರಸ್ ಸೋಂಕುನಿಂದ ಗುಣಮುಖರಾಗಿದ್ದಾರೆ. ಪಾಲ್ಘಾಟ್-4, ಕೊಲ್ಲಂ-3, ಕಣ್ಣೂರು-2, ಕಾಸರಗೋಡು-2, ಪತ್ತನಂತಿಟ್ಟ-1, ಮಲಪ್ಪುರ-1, ಕಲ್ಲಿಕೋಟೆ-1 ಎಂಬಂತೆ ಗುಣಮುಖರಾಗಿದ್ದಾರೆ.
ರಾಜ್ಯದಲ್ಲಿ ಒಟ್ಟು 20711 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 20285 ಮಂದಿ ಮನೆಗಳಲ್ಲೂ, 426 ಮಂದಿ ಆಸ್ಪತ್ರೆಗಳಲ್ಲೂ ನಿಗಾದಲ್ಲಿದ್ದಾರೆ. ಗುರುವಾರ ಶಂಕಿತ 95 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದು ವರೆಗೆ 25973 ಮಂದಿಯ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಿದ್ದು, ಲಭ್ಯ 25135 ನೆಗೆಟಿವ್ ಆಗಿದೆ.