ಕಾಸರಗೋಡು: ಹಸಿರು ಕೇರಳ ಮಿಷನ್ ಕಾಸರಗೋಡು ಜಿಲ್ಲಾ ಸಂಚಾಲಕರಾಗಿದ್ದ, ಕೊಲ್ಲಂ ಡಯಟ್ ಪ್ರಾಂಶುಪಾಲ ಎಂ.ಪಿ.ಸುಬ್ರಹ್ಮಣ್ಯನ್ ಅವರು ಸೇವೆಯಿಂದ ನಿವೃತ್ತರಾದರು. 2017ರಿಂದ ಹಸಿರು ಕೇರಳ ಮಿಷನ್ ನಲ್ಲಿ ಎಂ.ಪಿ.ಸುಬ್ರಹ್ಮಣ್ಯನ್ ಅವರ ನೇತೃತ್ವದಲ್ಲಿ ನಡೆದ ಅನೇಕ ಚಟುವಟಿಕೆಗಳು ರಾಜ್ಯ ಮಟ್ಟದಲ್ಲಿ ಗನ ಸೆಳೆಯಲು ಕಾರಣವಾಗಿತ್ತು.
'ಹಸಿರು ಸ್ಪರ್ಶದಲ್ಲಿ ನಾನು ಮತ್ತು ನನ್ನ ಶಾಲೆ'ಯೋಜನೆಯ ಮೂಲಕ ಪಾಳುವಸ್ತುಗಳ ಸಂಗ್ರಹ-ಮಾರಾಟ ನಡೆಸಿ ಒಂದು ಲಕ್ಷದ ಹದಿನೈದು ಸಾವಿರ ರೂ. ಮುಖ್ಯಮಂತ್ರಿ ದುರಂತ ನಿಧಿಗೆಹಸ್ತಾಂತರಿಸಲಾಗಿತ್ತು. ಪ್ರಕೃತಿ ಸಂರಕ್ಷಣೆ ಯೋಜನೆಗಳಾದ 'ಪೆನ್ ಫ್ರೆಂಡ್', ಹಸಿರು ವಠಾರ, ಕುಪ್ಪಿ, 'ಇನ್ನು ನಾ ಹರಿಯಲೇ', ಬರಡಾದ ಜಲಾಶಯಗಳ ಪುನಶ್ಚೇತನ, ಕಾಗದದ ಪೆನ್ ತಯಾರಿಸುವ 'ಸ್ನೇತೂಲಿಕ', ಸಸಿ ವಿತರಿಸುವ ವಿನೂತನ ಯೋಜನೆಗಳು ಗಮನಸೆಳೆದಿದ್ದುವು.