ಮುಳ್ಳೇರಿಯ: ಬೇಡಡ್ಕ ಗ್ರಾಮಪಂಚಾಯತಿಯ ಡೆಂಗೆ ಜ್ವರ ಪೀಡಿತ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ತಪಾಸಣೆ, ಜನಜಾಗೃತಿ ನಡೆಸಿದರು. ಕೆಲವೆಡೆ ನೀರು ಕಟ್ಟಿ ನಿಂತ ಪ್ರದೇಶಗಳ ಸಹಿತ ಸೊಳ್ಳೆ ಸಂತಾನೋತ್ಪತ್ತಿ ಹೆಚ್ಚಳಕ್ಕೆ ಕಾರಣವಾಗಬಲ್ಲ ವಸ್ತುಗಳು ಪತ್ತೆಯಾಗಿದ್ದು, ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದರು.
ಜಿಲ್ಲಾ ವೆಕ್ಟ್ ಕಂಟ್ರೋಲ್ ಘಟಕದ ಆರೋಗ್ಯ ಮೇಲ್ವಿಚಾರಕ ಇ.ರಾಧಾಕೃಷ್ಣನ್ ನಾಯರ್, ಬೇಡಗಂ ತಾಲೂಕು ಆಸ್ಪತ್ರೆ ಆರೋಗ್ಯ ಪರಿವೀಕ್ಷಕ ವಿಶ್ವ ದತ್, ಸಾರ್ವಜನಿಕ ಸಂಪರ್ಕ ಅಧಿಕಾರಿ ಲೂಕ್ ಕುರಿಯಾಕೋಸ್ ನೇತೃತ್ವ ವಹಿಸಿದ್ದರು. ಕಿರಿಯ ಆರೋಗ್ಯ ಇನ್ಸ್ ಪೆಕ್ಟರರಾದ ಪ್ರದೀಪ್, ಷೀಜಾ, ಜ್ಯೂನಿಯರ್ ಪಿ.ಎಚ್.ದಾದಿ ಅನು ಕೆ., ಆಶಾ ಕಾರ್ಯಕರ್ತರಾದ ರಜಿತಾ, ಮಾಧವಿ ಜೊತೆಗಿದ್ದರು.